ಜನ ಮನದ ನಾಡಿ ಮಿಡಿತ

Advertisement

ವಾಯ್ಸ್ ಆಫ್ ಆರಾಧನಾ ತಂಡದಿಂದ ಮಾನವೀಯ ಸ್ಪಂದನೆ, ದಿವಂಗತ ಶೇಖರ ಅಜೆಕಾರ್ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ, ಮಾದರಿಯಾಗಿದೆ ಸಮಾಜ ಸೇವೆಯ ಅಧ್ಯಾಯ

ದಕ್ಷಿಣ ಕನ್ನಡ : ಸಮಾಜ ಸೇವೆಯಲ್ಲಿ ಸದಾ ತನ್ನನ್ನು ತಾನು ತೊಡಗಿಸಿಕೊಂಡಿರುವ ವಾಯ್ಸ್ ಆಫ್ ಆರಾಧನಾ ತಂಡ ಕಳೆದ ಹಲವು ವರ್ಷಗಳಿಂದ ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರುತಿಸಿ ವೇದಿಕೆಯನ್ನು ನೀಡುವುದರ ಜೊತೆಗೆ ಮಕ್ಕಳ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಿದೆ.

ವಾಯ್ಸ್ ಆರಾಧನಾ ಸಂಸ್ಥೆ ತನ್ನ ತಂಡದ ಸದಸ್ಯರ ಸಹಕಾರದಿಂದ, ಒಂದಷ್ಟು ಹಣವನ್ನು ಪ್ರತಿ ತಿಂಗಳು ಒಟ್ಟು ಸೇರಿಸಿ,ಆರ್ಥಿಕವಾಗಿ ತೀರಾ ಹಿಂದುಳಿದ ಬಡ ಅನಾರೋಗ್ಯ ಪೀಡಿತರ ನೆರವರಿಗೆ ಧಾವಿಸಿ, ಪ್ರತಿ ತಿಂಗಳು ಸಹಾಯ ಧನ ನೀಡುತ್ತಾ ಬಂದಿದ್ದು, ಸಾರ್ವಜನಿಕರ ಮುಂದೆ ಕೈಚಾಚದೆ ತನ್ನ ಸದಸ್ಯ ಬಲದ ಸಹಕಾರದೊಂದಿಗೆ ಇದುವರೆಗೆ ಸುಮಾರು 20 ಲಕ್ಷ ರೂಪಾಯಿಗೂ ಮಿಕ್ಕಿ ಅನಾರೋಗ್ಯ ಪೀಡಿತರಿಗೆ ನೀಡಿರುವುದು ಪ್ರಶಂಸನೀಯ, ಹಾಗೂ ಇವರ ಸಮಾಜ ಸೇವೆಯ ಮಾದರಿ ಅನುಕರಣೀಯ ವಾಯ್ಸ್ ಆಫ್ ಆರಾಧನಾ ತಂಡ ಇದೀಗ ಸರ್ಕಾರಿ ಶಾಲೆಗಳಿಗೂ ಸಹಾಯದ ಯೋಜನೆಯನ್ನು ಹಾಕಿಕೊಂಡಿದ್ದು ಈಗಾಗಲೇ ಕಾರ್ಯೋನ್ಮುಖ ವಾಗಿದ್ದು, ತಂಡದ ಸದಸ್ಯರು ಸೇರಿದಂತೆ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.

ಇತ್ತೀಚಿಗೆ ನಿಧನರಾದ ಪತ್ರಕರ್ತ, ಸಮಾಜಸೇವಕ, ಶೇಖರ ಅಜೆಕಾರು ಇವರ ನಿವಾಸಕ್ಕೆ ವಾಯ್ಸ್ ಆರಾಧನಾ ತಂಡದ ಮುಖ್ಯಸ್ಥೆ ಪದ್ಮಶ್ರೀ ಭಟ್ ಮತ್ತು ತಂಡ ತೆರಳಿ, ತಂಡದ ಸದಸ್ಯರಿಂದ ಸಂಗ್ರಹವಾದ ಹಣವನ್ನು ಶೇಖರ ಅಜಿಕಾರ್ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಿದ್ದು, ಇದು ವಾಯ್ಸ್ ಆಫ್ ಆರಾಧನಾ ತಂಡದ ಮಾನವೀಯ ಸಹಕಾರದ ಮಾದರಿ ಕೆಲಸ, ತಂಡದ ಮುಖ್ಯಸ್ಥೆ ಪದ್ಮಶ್ರೀ ಭಟ್ ಇವರ ಮೇಲುಸ್ತುವಾರಿಯಲ್ಲಿ, ತಾಲೂಕು, ಜಿಲ್ಲೆ ,ರಾಜ್ಯ, ದೇಶ, ಸೇರಿದಂತೆ ಅಂತರರಾಷ್ಟ್ರೀಯ ಸದಸ್ಯರಿದ್ದು, ಎಲ್ಲರನ್ನೂ ಸಮಚಿತ್ತದಿಂದ, ಮೇಲು ಕೀಳೆಂಬ ಭಾವನೆ ಇಲ್ಲದೆ, ಬಡವ ಶ್ರೀಮಂತ ಎಂಬ ತಾರತಮ್ಯವಿಲ್ಲದೆ, ಎಲ್ಲರೂ ಪರಸ್ಪರ ಪ್ರೀತಿಯಿಂದ ಸಂಸ್ಥೆಯ ಸದಸ್ಯರಾಗಿದ್ದು, ಇನ್ನಷ್ಟು ಸಮಾಜ ಸೇವೆ ಆರದಿರಲಿ ಬದುಕು ಸಂಸ್ಥೆಯಿಂದ ಬರಲಿ, ಇವರ ಸಮಾಜ ಸೇವೆಯು ಇತರರಿಗೆ ಮಾದರಿಯಾಗಲಿ “ಆರದಿರಲಿ ಬದುಕು” ಸಂಸ್ಥೆಯ ಜೊತೆ ಕೈ ಜೋಡಿಸೋಣ, ಶುಭ ಹಾರೈಸೋಣ.

Leave a Reply

Your email address will not be published. Required fields are marked *

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

error: Content is protected !!