ಜನ ಮನದ ನಾಡಿ ಮಿಡಿತ

Advertisement

‘ಬಿ ಕೈಂಡ್’ ಘೋಷವಾಕ್ಯದೊದಿಗೆ ವಿವಿಧ ಸೇವಾ ಕಾರ್ಯಕ್ರಮ ; ಮೆಲ್ವಿನ್ ಡಿ’ಸೋಜಾ ಮಾಹಿತಿ

ಪುತ್ತೂರು: ಪುತ್ತೂರು ಕಾವು ಲಯನ್ಸ್ ಕ್ಲಬ್, ಪುತ್ತುರು ಪಾಣಾಜೆ ಲಯನ್ಸ್ ಕ್ಲಬ್, ಆಲಂಗಾರು ದುರ್ಗಾಂಬ ಲಯನ್ಸ್ ಕ್ಲಬ್ ಮತ್ತು ಪುತ್ತರ‍್ದ ಮುತ್ತು ಲಯನ್ಸ್ ಕ್ಲಬ್‌ಗಳು ಹಲವು ಸಮಾಜಮುಖಿ ಸೇವಾ ಕಾರ್ಯ ಮಾಡುತ್ತಾ ಬಂದಿದ್ದು ಈ ಭಾಗದ ಅತ್ಯುತ್ತಮ ಕ್ಲಬ್‌ಗಳಾಗಿ ಮೂಡಿ ಬಂದಿದೆ ಎಂದು ಲಯನ್ಸ್ ಕ್ಲಬ್ ೩೧೭ಡಿ ಇದರ ಜಿಲ್ಲಾ ಗವರ್ನರ್ ಮೆಲ್ವಿನ್ ಡಿ’ಸೋಜಾ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಲಯನ್ಸ್ ಕ್ಲಬ್ 4 ಕಂದಾಯ ಜಿಲ್ಲೆಗಳಾಗಿ ದಕ್ಷಿಣ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು ಒಟ್ಟಾಗಿ 121 ಕ್ಲಬ್‌ಗಳಿವೆ. ಸುಮಾರು 4,600 ಮಂದಿ ಸದಸ್ಯರಿದ್ದಾರೆ. ಈ ಭಾರಿ ‘ಬಿ ಕೈಂಡ್’ (ಕರುಣಾಮಯಿ) ಎಂಬ ಘೋಷವಾಕ್ಯದೊದಿಗೆ ವಿವಿಧ ಸೇವಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ಹಿರಿಯ ನಾಗರಿಕರ ಸೇವೆ, ವಿಶೇಷ ಮಕ್ಕಳಿಗೆ ಪ್ರೇರಣೆ, ಯುವಜನಾಂಗಕ್ಕೆ ಸ್ಪೂರ್ತಿ, ದೇಶಪ್ರೇಮ ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮಗಳು ಒಳಗೊಂಡಿವೆ. ಇದಲ್ಲದೆ ದೃಷ್ಟಿ, ಯುವಜನ, ವಿಪತ್ತು ಪರಿಹಾರ, ಮಾನವೀಯ ಸೇವೆಗಳು, ಮಧುಮೇಹ, ಬಾಲ್ಯದ ಕ್ಯಾನ್ಸರ್, ಪರಿಸರ ಮತ್ತು ಹಸಿವು ನಿವಾರಣೆಗೆ ಸಂಬAಧಿಸಿ ಹಲವು ಕಾರ್ಯಕ್ರಮ ನಡೆಸಲು ಉದ್ದೇಶಿಸಿದಂತೆ ಪುತ್ತೂರಿನ ನಾಲ್ಕು ಕ್ಲಬ್‌ಗಳು ಈ ಎಲ್ಲಾ ಕಾರ್ಯದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದ್ದು, ಅದರಲ್ಲಿ ಕೆಲವೊಂದರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಇದರ ಜೊತೆಗೆ ಈ ಸಲದ ಸ್ಮೆöÊಲ್ ವಿಶೇಷ ಕಾರ್ಯಕ್ರಮವಾಗಿದ್ದು, ಇದರ ಅಡಿಯಲ್ಲಿ 121 ಕ್ಲಬ್‌ಗಳು ಸೇವೆ ಸಲ್ಲಿಸುತ್ತಿವೆ. ವಿಶೇಷ ಕಾರ್ಯಕ್ರಮವಾಗಿ ರೂ. ೧ಕೋಟಿ ಪೌಂಡೇಶನ್‌ಮೂಲಕ ಸೇವೆ ನೀಡಿದ್ದೇವೆ. ೪ ಹೊಸ ಕ್ಲಬ್, 7 ಲಿಯೋ ಕ್ಲಬ್‌ಗಳನ್ನು ಉದ್ಘಾಟಿಸಲಾಗುವುದು. ೫೦೦ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆಯಾಗಲಿದೆ. ಪುತ್ತೂರನಲ್ಲಿ ಲಿಯೋ ಕ್ಲಬ್ ಪುತ್ತೂರು ಮತ್ತು ಶ್ರೀ ರಾಮಕೃಷ್ಣ ಶಾಲೆಯಲ್ಲಿ ಲಿಯೋ ಕ್ಲಬ್ ಉದ್ಘಾಟನೆಯಾಗಲಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ಕಾವು ಲಯನ್ಸ್ ಕ್ಲಬ್ ಅಧ್ಯಕ್ಷ ದಿವ್ಯನಾಥ ಶೆಟ್ಟಿ, ಪುತ್ತೂರು ಪಾಣಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿ, ಆಲಂಗಾರು ದುರ್ಗಾಂಬ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ರೈ ಮನವಳಿಕೆ, ಪುತ್ತರ‍್ದ ಮುತ್ತು ಲಯನ್ಸ್ ಕ್ಲಬ್ ಅಧ್ಯಕ್ಷ ರವೀಂದ್ರ ಪೈ, ಲಯನ್ಸ್ಕ್ಲಬ್ ಪ್ರಾಂತೀಯ ರಾಯಬಾರಿ ಗಣೇಶ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಭರ್ಜರಿ ಡ್ರಗ್ಸ್ ಬೇಟೆ: ₹3 ಸಾವಿರ ಕೋಟಿ ಮೌಲ್ಯದ ಮಾದಕವಸ್ತು ವಶ..!

ಮಂಗಳೂರು: MRPL ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭೇಟಿ; ಪರಿಸ್ಥಿತಿ ಪರಿಶೀಲನೆ..!

ಬಂಟ್ವಾಳ: ಮಂಗಳೂರು ರೈಲು ಪ್ರದೇಶ ಮೈಸೂರು ವಿಭಾಗಕ್ಕೆ: ಪ್ರಮುಖ ನಿಲ್ದಾಣಗಳಿಗೆ ಅಧಿಕಾರಿಗಳ ಭೇಟಿ.

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಶಾಲಾ ಸಮಯ ಬದಲಾವಣೆಗೆ ಚಿಂತನೆ.

ಉಡುಪಿ: ಶಂಕರಪುರ ಮಠದಲ್ಲಿ ಅ.3, 4ರಂದು ಸಾಯಿ ಈಶ್ವರ್ ಗುರೂಜಿ ಪಂಚಾಶತ್ ಜನ್ಮ ವೈಭವ…!

ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ವಿತರಣೆ ಆರೋಪ; ಅಧಿಕಾರಿಗಳಿಂದ ವಿಚಾರಣೆ

ನವದೆಹಲಿ: ಮೋದಿ–ಟ್ರಂಪ್ ದೂರವಾಣಿ ಮಾತುಕತೆ: ವ್ಯಾಪಾರ, ರಕ್ಷಣೆ, ಇಂಧನ ಸಹಕಾರದ ಕುರಿತು ಚರ್ಚೆ

ಮಂಗಳೂರು: ಮಂಗಳೂರು ರೈಲು ಪ್ರದೇಶ ಇಂದಿನಿಂದ ಮೈಸೂರು ವಿಭಾಗದ ಅಧೀನಕ್ಕೆ…!

ದುಬೈ: ಫ್ಲೈದುಬೈ ವಿಮಾನದಲ್ಲಿ ಕಾಕ್‌ಪಿಟ್ ಘಟನೆ: ಸಹ ಪೈಲಟ್‌ನ ಯತ್ನ ತಡೆದ ಭಾರತೀಯ ಪೈಲಟ್…!

error: Content is protected !!