ಜನ ಮನದ ನಾಡಿ ಮಿಡಿತ

Advertisement

ಬಿ.ಸಿ. ರೋಡಿನಲ್ಲಿ ಕಳ್ಳರಿದ್ದಾರೆ ಎಚ್ಚರಿಕೆ!!!

ಬಂಟ್ವಾಳ:ಕಳೆದ ಕೆಲವು ದಿನಗಳಿಂದ ಬಿಸಿರೋಡಿನಲ್ಲಿ ನಿತ್ಯ ಪಿಕ್ ಪಾಕೆಟ್ ಪ್ರಕರಣವೇ ಹೆಚ್ಚುತ್ತಿದೆ. ಮೊಬೈಲ್ , ಪರ್ಸ್ ಗಳನ್ನು ಪಿಕ್ ಪಾಕೆಟ್ ಮಾಡುತ್ತಿದ್ದು, ಅನೇಕರು ಸೊತ್ತುಗಳನ್ನು ಕಳೆದುಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಕೆಲ ದಿನಗಳ ಹಿಂದೆ ತರಕಾರಿ ಅಂಗಡಿಯೊAದರಿAದ ಮಾಲಕನ ಮೊಬೈಲ್ ಕಳ್ಳತನದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಸಿರೋಡಿನ ವೆಂಕಟೇಶ್ ಎಂಬವರ ಮೊಬೈಲ್ ತರಕಾರಿ ಅಂಗಡಿಯಿoದ ಕಳವಾಗಿತ್ತು. ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಆದರೆ ಇದೀಗ ಅವರ ಅಂಗಡಿಯ ಸಿ.ಸಿ.ಕ್ಯಾಮಾರದಲ್ಲಿ ಸೆರೆಯಾದ ಮೊಬೈಲ್ ಕಳವು ಮಾಡುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಪರಂಗಿಪೇಟೆ ನಿವಾಸಿ ಅಬುಬಕ್ಕರ್ ಎಂಬವರ ಸುಮಾರು 15 ಸಾವಿರ ನಗದನ್ನು ಕಳವು ಮಾಡಲಾಗಿದೆ ಎಂದು ದೂರು ದಾಖಲಾಗಿದೆ. ಮೆಲ್ಕಾರ್ ನಿಂದ ಬಿಸಿರೋಡಿಗೆ ಬಸ್ ನಲ್ಲಿ ಬರುವ ವೇಳೆ ಎದುರುಕಡೆ ಅಂಗಿಯ ಕಿಸೆಯಲ್ಲಿದ್ದ ೧೫ ಸಾವಿರ ಹಣವನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಬಿಸಿರೋಡಿನ ಪರಿಸರದಲ್ಲಿ ಹೆಚ್ಚುತ್ತಿರುವ ಪಿಕ್ ಪಾಕೆಟ್ ಹಾವಳಿಯಿಂದ ಜನರು ಪೇಟೆಯತ್ತ ಬರಲು ಹೆದರುತ್ತಿದ್ದಾರೆ. ನಿತ್ಯ ಪಿಕ್ ಪಾಕೆಟ್ ಗಳು ನಡೆಯುತ್ತಿರುವುದಿಂದ ವ್ಯಾಪಾರಸ್ಥರು ಕೂಡ ಕಂಗಾಲಿದ್ದಾರೆ. ಹಾಗಾಗಿ ಪೋಲೀಸರು ಹೆಚ್ಚುವರಿಯಾಗಿ ಗಸ್ತು ಹಾಗೂ ಸಿಸಿ ಕ್ಯಾಮರಾಗಳ ಅಳವಡಿಕೆಗೆ ಹೆಚ್ಚು ಒತ್ತು ನೀಡುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ದೈವದ ಭಂಡಾರ ಮೆರವಣಿಗೆ ವೇಳೆ ಸಂಕ ಮುರಿದು ಬಿದ್ದು ಅವಘಡ….!

ಬಂಟ್ವಾಳ: ಗಡಿಯಾರ ಎಂಬಲ್ಲಿ ವಿದ್ಯುತ್ ತಂತಿ ತಗುಲಿ ಬಾಲಕ ಮೃ*ತ್ಯು….!

ಬಂಟ್ವಾಳ: ಮಹಿಳೆಯರ ಹಕ್ಕುಗಳ ಬಗ್ಗೆ ಬಿಜೆಪಿ ಮೋಸ- ರಮಾನಾಥ ರೈ ಆರೋಪ….!

100 ಶೇಕಡಾ ಫಲಿತಾಂಶ ಪಡೆದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆ..!

ಮಂಗಳೂರು: ತಣ್ಣೀರುಬಾವಿ ಬೀಚ್ ಬಳಿ ನಡೆದಿದ್ದ ದರೋಡೆ ಪ್ರಕರಣದ ಆರೋಪಿಯ ಬಂಧನ…!

ಬಂಟ್ವಾಳ: ಪಾರೆಂಕಿ ಎಂಬಲ್ಲಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ; ಓರ್ವ ಮೃ*ತ್ಯು..!

ಬಳ್ಳಾರಿ: ಹೋಟೆಲ್‌ನಲ್ಲಿ ಏಕಾಏಕಿ ಬ್ಲಾಸ್ಟ್ ಆದ ಸಿಲಿಂಡರ್; ಬಾಲಕನಿಗೆ ಗಂಭೀರ ಗಾಯ..!

ಉಡುಪಿ: ಖಾಸಗಿ ಸ್ಥಳದಲ್ಲಿದ್ದರುವ ಪಾಳುಬಾವಿಯಲ್ಲಿ ಕೊಳೆತಸ್ಥಿತಿಯಲ್ಲಿ ವ್ಯಕ್ತಿ ಶವ ಪ*ತ್ತೆ….!

ಉಡುಪಿ: ಸ್ಕೂಟಿಗೆ ಹಿಂಬದಿಯಿಂದ ಬಸ್ ಡಿ*ಕ್ಕಿ- ಬಾಲಕಿ ಸಾ*ವು….!

error: Content is protected !!