ಜನ ಮನದ ನಾಡಿ ಮಿಡಿತ

Advertisement

ನೆಲ್ಯಾಡಿ ಬದ್ರಿಯಾ ಜುಮಾ ಮಸ್ಜಿದ್‌ನಲ್ಲಿ ದಾಳಿಯಂತಹ ಘಟನೆ ನಡೆದಿಲ್ಲ – ಮುಹಮ್ಮದ್ ಹನೀಫ್ ಸಿಟಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ.

ಪುತ್ತೂರು: ನೆಲ್ಯಾಡಿ ಬದ್ರಿಯಾ ಜುಮಾ ಮಸ್ಜಿದ್‌ನಲ್ಲಿ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರ ಮೇಲೆ ಯಾರಿಂದಲೂ ದಾಳಿ ನಡೆದಿಲ್ಲ. ಮಸೀದಿಯ ಸಭಾಂಗಣದಲ್ಲಿ ನಡೆದ ಸಭೆಯ ಸಂದರ್ಭ ಉಂಟಾದ ಘಟನೆಯಲ್ಲಿ ಯಾವುದೇ ಪಕ್ಷ ಅಥವಾ ಸಂಘಟನೆಯ ಪಾತ್ರಿವಿಲ್ಲ. ಘಟನೆ ನಡೆದಿರುವುದು ಜಮಾಅತರು ಮತ್ತು ಉಸ್ಮಾನ್ ಜೌಹರಿ ಸಹೋದರರ ಮಧ್ಯೆ ಎಂದು ನೆಲ್ಯಾಡಿ ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷ ಮುಹಮ್ಮದ್ ಹನೀಫ್ ಸಿಟಿ ಸ್ಪಷ್ಟನೆ ನೀಡಿದ್ದಾರೆ.

ಅವರು ಪುತ್ತೂರಿನ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಮ್ಮ ಜುಮಾ ಮಸೀದಿಯ ಆವರಣದ ಒಳಗೆ ಯಾವುದೇ ಸಂಘ ಸಂಸ್ಥೆಗಳು ಮತ್ತು ಪಕ್ಷಗಳ ಚಟುವಟಿಕೆಗಳಿಗೆ ಅವಕಾಶವಿಲ್ಲ. ಉಸ್ಮಾನ್ ಜೌಹರಿ ನಮ್ಮ ಜಮಾಅತ್ ಸದಸ್ಯರಾಗಿದ್ದು, ಅವರ ಸಹೋದರರು ಬೇರೆ ಬೇರೆ ಊರುಗಳಲ್ಲಿ ವಾಸವಿರುವುದರಿಂದ ಅವರನ್ನು ಮಸಿದಿಯ ನಿಯಮಾನುಸಾರ ನಮಗೆ ಭೌಗೋಳಿಕವಾದ ವ್ಯಾಪ್ತಿಗೆ ಸಂಬAಧಿಸಿ ನಮ್ಮ ಜಮಾಅತ್ ಸದಸ್ಯತ್ವ ಕೊಡಲಾಗಿಲ್ಲ. ಈ ಮಧ್ಯೆ ಉಸ್ಮಾನ್ ಜೌಹರಿಯವರು ತಪ್ಪು ಸಂದೇಶ ನೀಡಿ ಜಮಾತಿಗರ ಸಭೆ ಕರೆಯುವಂತೆ ಖಾಝಿಯವರಿಗೆ ಒತ್ತಡ ಹಾಕಿದ್ದರಿಂದ ಖುದ್ದ ಖಾಝಿಯವರೇ ರದ್ದುಪಡಿಸಿದ್ದ ಮಂಗಳವಾರದ ಸಭೆಯನ್ನು ಬುಧವಾರಕ್ಕೆ ನಿಗದಿಪಡಿಸಿದ್ದರು.

ಹಾಗೆ ಬುಧವಾರ ನಡೆದ ಸಭೆಯಲ್ಲಿ ಉಸ್ಮಾನ್ ಜೌಹರಿ ಸಹೋದರರು ಗದ್ದಲ ಏರ್ಪಡಿಸಿದ್ದರು. ಈ ಕುರಿತು ಜೌಹರಿ ಮತ್ತು ೭ ಮಂದಿಯ ವಿರುದ್ಧ ದೂರು ನೀಡಿದ್ದೇವೆ. ಈ ಮಧ್ಯೆ ಖಾಝಿಯವರ ಮೇಲೆ ದಾಳಿ ಮಾಡಲಾಗಿದೆಯೆಂಬ ಸುಳ್ಳು ಮಾಹಿತಿಯನ್ನು ಕೆಲವರು ಸಾಮಾಜಕ ಜಾಲತಾಣದಲ್ಲಿ ಸಂಘಟನೆಯ ಮತ್ತು ಪಕ್ಷದ ವಿರುದ್ಧ ಹಬ್ಬಿಸುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಖಾಝಿಯವರ ಮೇಲೆ ದಾಳಿ ನಡೆದಿಲ್ಲ. ಘಟನೆಯು ಜಮಾಅತರು ಮತ್ತು ಉಸ್ಮಾನ್ ಜೌಹರಿ ಸಹೋದರರ ಮಧ್ಯೆ ಘಟನೆ ನಡೆದಿರುವುದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ನೆಲ್ಯಾಡಿ ಬದ್ರಿಯಾ ಜುಮಾ ಮಸ್ಜಿದ್‌ನ ಉಪಾಧ್ಯಕ್ಷ ಎನ್.ಎಸ್.ಸುಲೈಮಾನ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಬೈಲು, ಕೋಶಾಧಿಕಾರಿ ಉಮ್ಮರ್, ಕಾರ್ಯದರ್ಶಿ ಸಿದ್ದಿಕ್ ನೆಲ್ಯಾಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಭರ್ಜರಿ ಡ್ರಗ್ಸ್ ಬೇಟೆ: ₹3 ಸಾವಿರ ಕೋಟಿ ಮೌಲ್ಯದ ಮಾದಕವಸ್ತು ವಶ..!

ಮಂಗಳೂರು: MRPL ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭೇಟಿ; ಪರಿಸ್ಥಿತಿ ಪರಿಶೀಲನೆ..!

ಬಂಟ್ವಾಳ: ಮಂಗಳೂರು ರೈಲು ಪ್ರದೇಶ ಮೈಸೂರು ವಿಭಾಗಕ್ಕೆ: ಪ್ರಮುಖ ನಿಲ್ದಾಣಗಳಿಗೆ ಅಧಿಕಾರಿಗಳ ಭೇಟಿ.

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಶಾಲಾ ಸಮಯ ಬದಲಾವಣೆಗೆ ಚಿಂತನೆ.

ಉಡುಪಿ: ಶಂಕರಪುರ ಮಠದಲ್ಲಿ ಅ.3, 4ರಂದು ಸಾಯಿ ಈಶ್ವರ್ ಗುರೂಜಿ ಪಂಚಾಶತ್ ಜನ್ಮ ವೈಭವ…!

ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ವಿತರಣೆ ಆರೋಪ; ಅಧಿಕಾರಿಗಳಿಂದ ವಿಚಾರಣೆ

ನವದೆಹಲಿ: ಮೋದಿ–ಟ್ರಂಪ್ ದೂರವಾಣಿ ಮಾತುಕತೆ: ವ್ಯಾಪಾರ, ರಕ್ಷಣೆ, ಇಂಧನ ಸಹಕಾರದ ಕುರಿತು ಚರ್ಚೆ

ಮಂಗಳೂರು: ಮಂಗಳೂರು ರೈಲು ಪ್ರದೇಶ ಇಂದಿನಿಂದ ಮೈಸೂರು ವಿಭಾಗದ ಅಧೀನಕ್ಕೆ…!

ದುಬೈ: ಫ್ಲೈದುಬೈ ವಿಮಾನದಲ್ಲಿ ಕಾಕ್‌ಪಿಟ್ ಘಟನೆ: ಸಹ ಪೈಲಟ್‌ನ ಯತ್ನ ತಡೆದ ಭಾರತೀಯ ಪೈಲಟ್…!

error: Content is protected !!