ಜನ ಮನದ ನಾಡಿ ಮಿಡಿತ

Advertisement

ನಿವೃತ್ತಿ ಹೊಂದಿ ಫೆ. ೩ ರಂದು ಹುಟ್ಟೂರಿಗೆ ಆಗಮಿಸುತ್ತಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಸುಧೀರ್ಘ ೩೩ ವರ್ಷ ಸೇವೆ ಸಲ್ಲಿಸಿದ ಬಡಗನ್ನೂರು ಗ್ರಾಮದ ಪಟ್ಟೆ ನಿವಾಸಿ ವಿದ್ಯಾಧರ ಎನ್

ಪುತ್ತೂರು: ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಸುಧೀರ್ಘ ೩೩ ವರ್ಷ ಸೇವೆ ಸಲ್ಲಿಸಿದ ಬಡಗನ್ನೂರು ಗ್ರಾಮದ ಪಟ್ಟೆ ನಿವಾಸಿ ವಿದ್ಯಾಧರ ಎನ್. ನಿವೃತ್ತಿ ಹೊಂದಿ ಫೆ. ೩ ರಂದು ಹುಟ್ಟೂರಿಗೆ ಆಗಮಿಸುತ್ತಿದ್ದಾರೆ.


ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಪಟ್ಟೆ ದಿ. ಮಹಾಲಿಂಗ ಪಾಟಾಳಿ ಮತ್ತು ಗಿರಿಜಾ ದಂಪತಿ ಪುತ್ರನಾದ ವಿದ್ಯಾಧರ ಎನ್. ಅವರು ಪ್ರಾಥಮಿಕ ಶಿಕ್ಷಣವನ್ನು ಪಟ್ಟೆ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ ಪ್ರೌಢಶಿಕ್ಷಣವನ್ನು ಶ್ರೀ ಪಂಚಲಿAಗೇಶ್ವರ ಪ್ರೌಢಶಾಲೆ ಈಶ್ವರನುಂಗಲದಲ್ಲಿ ಪಡೆದಿರುತ್ತಾರೆ. ಅನಂತರ ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದು, ೧೯೯೦ ರ ಡಿಸೆಂಬರ್‌ನಲ್ಲಿ ಕೇಂದ್ರೀಯ ಮೀಸಲು ಪೋಲಿಸ್ ಸೇನಾ ಪಡೆಗೆ ಸೇರ್ಪಡೆಗೊಂಡಿದ್ದರು.


ರಾಜಸ್ಥಾನದ ಅಜ್ಮೀರ್ ಮತ್ತು ಉತ್ತರ ಪ್ರದೇಶದ ಆಲಿಗಡ್‌ನಲ್ಲಿ ಬೇಸಿಕ್ ಟ್ರೈನಿಂಗ್ ಮುಗಿಸಿದ ನಂತರ ಪಂಜಾಬ್, ಚಂಡೀಗಢ, ಜಮ್ಮು ಕಾಶ್ಮೀರ, ದೆಹಲಿ, ಅಸ್ಲಾಂ, ಆಂಧ್ರಪ್ರದೇಶ, ನಾಗಪುರ್ (ಮಹಾರಾಷ್ಟ್ರ), ಬೆಂಗಳೂರು, ಕೊಯಮುತ್ತೂರು, ವಿಜಯನಾಡ ಮತ್ತು ಛತ್ತೀಸ್‌ಗಡ್‌ಗಳಲ್ಲಿ ೩೩ ವರ್ಷಗಳ ಕಾಲ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಅತೀ ಉತ್ಕೃಷ್ಟ ಸೇವಾ ಪದಕ ಪ್ರಶಸ್ತಿಪಡೆದಿರುತ್ತಾರೆ.


ಫೆ.೩ ರಂದು ಪಟ್ಟೆಯ ಮನೆಯಲ್ಲಿ ಅವರಿಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇವರ ಸಹೋದರರಾದ ಸುಬ್ಬಪ್ಪ ಪಾಟಲಿ ಭಾರತೀಯ ಸೇನೆ ಹಾಗೂ ಇನ್ನೊರ್ವ ಸಹೋದರ ಸಿ. ಆರ್. ಪಿ. ಎಫ್. ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

ಬಂಟ್ವಾಳ: ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪ ಅಪ*ಘಾತ; ಮಾನವೀಯತೆ ಮೆರೆದ ಎಸ್‌ಐ ರಾಮಕೃಷ್ಣ..!

ಮಂಗಳೂರು: ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹ*ತ್ಯೆ..!

ವಿಟ್ಲ: ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದ ಟಿಪ್ಪರ್ ಲಾರಿ – ಇಬ್ಬರಿಗೆ ಗಾಯ..!

ಮಾಣಿ: ಮರ ಬಿದ್ದು ಟ್ರಾನ್ಸ್ ಫಾರ್ಮರ್‌ಗೆ ಹಾನಿ; ರಸ್ತೆ ಮೇಲೆ ಮರ ಸಹಿತ ಮುರಿದುಬಿದ್ದು ಸಂಚಾರ ಬಂದ್…!

ಗೋಳಿತ್ತೊಟ್ಟು: ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ; ಪ್ರಯಾಣಿಕರು ಅಪಾಯದಿಂದ ಪಾರು…!

ಬಂಟ್ವಾಳ: ಭಾರೀ ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು..!

ಉಪ್ಪಿನಂಗಡಿ: ನಕಲಿ 500 ನೋಟು ಮಾದರಿ ಮುದ್ರಣ ಪ್ರಕರಣ, 7 ಮಂದಿ ವಶ….!

error: Content is protected !!