ಜನ ಮನದ ನಾಡಿ ಮಿಡಿತ

Advertisement

ವಾಕ್ ಶ್ರವಣದೋಷ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ 2024

ಪ್ರತಿಯೊಂದು ಮಗುವಿನಲ್ಲಿಯೂ ಉತ್ತಮ ಅಂಶಗಳಿದ್ದು ಅದನ್ನು ಕಾಣುವ ಮತ್ತು ಕಂಡುಹಿಡಿಯುವ ಮನಸ್ಸು ಮುಖ್ಯ ಯಾವುದೇ ಒಂದು ಸಾಧನೆಯನ್ನು ಅಂಕಗಳಿಂದ ಅಳಿಯುವುದು ಸರಿಯಲ್ಲ ವಿಶೇಷ ಅಗತ್ಯವುಳ್ಳ ಮಗುವಿನಲ್ಲೂ ಅಸಾಧಾರಣವಾದ ಸಾಧನೆಯನ್ನು ಮಾಡುವ ಛಲ ಇದೆ ಅದನ್ನು ಎಳವೆಯಲ್ಲಿ ಗುರುತಿಸಿ ಪ್ರೋತ್ಸಾಹ ನೀಡಿದಾಗ ಮತ್ತು ಆ ಸಾಧನೆಗೆ ನೀರು ಎರೆದಾಗ ಉತ್ತಮ ಫಲವನ್ನು ಕಂಡುಕೊಳ್ಳಲು ಸಾಧ್ಯ ವಿಶೇಷ ಅಗತ್ಯವುಳ್ಳ ಮಗು ಸಮಾಜದಲ್ಲಿ ಎಲ್ಲರ ಜೊತೆಗೆ ಬೆರೆಯುವ ಅವಕಾಶ ನೀಡಿ ಆ ಮಗು ಕೂಡ ಇತರ ಮಗುವಿನಂತೆ ಸುಂದರ ಬದುಕು ಕಾಣಲು ಸಮಾಜದ ಪ್ರೋತ್ಸಾಹ ಅತಿ ಅಗತ್ಯವಾಗಿದೆ ಎಂದು ಲಯನ್ಸ ಕ್ಲಬ್ ವಿಟ್ಲ ಇಲ್ಲಿನ ಅಧ್ಯಕ್ಷೆ ಜಲಜಾಕ್ಷಿ ಬಾಲಕೃಷ್ಣ ಗೌಡ ರವರು ದ.ಕ.ಜಿ.ಪಂ.ಹಿ. ಪ್ರಾ. ಶಾಲೆ ಮಜಿ ವೀರಕಂಬ ಇಲ್ಲಿ ಶಿಕ್ಷಣ ಇಲಾಖೆ, ಲಯನ್ಸ್ ಕ್ಲಬ್ ವಿಟ್ಲ, ದಕ್ಷಿಣ ಕನ್ನಡ ಕದಳಿ ಮಹಿಳಾ ವೇದಿಕೆ ಹಾಗೂ ವಾಕ್ ಮತ್ತು ಶ್ರವಣ ವಿಭಾಗ ಯನೆಪೋಯ ಕಾಲೇಜು ಹಾಸ್ಪಿಟಲ್ ದೇರಳಕಟ್ಟೆ ಇದರ ಸಹಯೋಗದಲ್ಲಿ ವಾಕ್ ಶ್ರವಣದೋಷ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ 2024 ಇದನ್ನು ಉದ್ಘಾಟಿಸಿ ಮಾತನಾಡಿದರು.


ಆರೋಗ್ಯ ಶಿಬಿರಗಳು ಗ್ರಾಮ ಹಂತದಲ್ಲಿ ನಡೆದಾಗ ಮೂಲೆ ಮೂಲೆಯ ವ್ಯಕ್ತಿಗಳಿಗೆ ತಮ್ಮ ಆರೋಗ್ಯ ಸಮಸ್ಯೆಯನ್ನು ತಕ್ಷಣದಲ್ಲಿ ಕಂಡುಹಿಡಿದು ಸುಧಾರಿಸಲು ನೆರವಾಗುತ್ತದೆ ಈ ರೀತಿಯಾಗಿ ಯನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಉತ್ತಮವಾದ ಕೆಲಸ ಕಾರ್ಯಗಳನ್ನು ಮಾಡುತ್ತಿವೆ ಇವರ ಆರೋಗ್ಯ ಕಾಳಜಿಯು ನಿಜಕ್ಕೂ ಶ್ಲಾಘನೀಯವಾದದ್ದು ಎಂದು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಕೊರಗಪ್ಪ ನಾಯ್ಕ ಇವರು ಮಾತನಾಡಿದರು.


ಮಗುವಿನ ಚಟುವಟಿಕೆ ಮೂಲಕ ಅತಿ ಕಿರಿಯ ವಯಸ್ಸಿನಲ್ಲಿಯೇ ಮಗುವಿನ ಬಗ್ಗೆ ತಿಳುವಳಿಕೆ ಪಡೆದುಕೊಂಡು ಅದರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿದಾಗ ವಿಶೇಷ ಅಗತ್ಯವುಳ್ಳ ಮಗುವಿನ ಬಗ್ಗೆ ಇರುವ ದೋಷವನ್ನು ನಿವಾರಿಸಲು ಸುಲಭವಾಗುತ್ತದೆ. ಪ್ರತಿಯೊಂದು ಮಗು ವಿಶೇಷವಾಗಿದೆ ಮಗುವಿನ ಬೆಳವಣಿಗೆಯು ಗಮನಾಹ೯ವಾದ ಬದಲಾವಣೆಯನ್ನು ತಕ್ಷಣ ಸ್ಪಂದನೆಗೆ ಒಳಪಡಿಸಿದಾಗ ಮಗು ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಮಗುವಿನ ಮಾನಸಿಕ ಬೌದ್ಧಿಕ ಹಾಗೂ ದೈಹಿಕ ಬದಲಾವಣೆ ಬಗ್ಗೆ ಪೋಷಕರು ಗಮನಹರಿಸಬೇಕು ಮತ್ತು ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನ ಪಡಬೇಕು ಎಂದು ದಕ್ಷಿಣ ಕನ್ನಡ ಕದಳಿ ಮಹಿಳಾ ವೇದಿಕೆ ಆದ್ಯೆಕ್ಷೆ ಬಂಟ್ವಾಳ ತಾಲೂಕು ವಿಶೇಷ ಸಂಪನ್ಮೂಲ ಅಧಿಕಾರಿ ಸುರೇಖಾ ಯಾಳವಾರ ಇವರು ತಮ್ಮ ಪ್ರಸ್ತಾವಿಕ ಮಾತಿನಲ್ಲಿ ತಿಳಿಸಿದರು.


ಈ ಸಂದರ್ಭದಲ್ಲಿ 14 ರಿಂದ 17 ರ ವಯೋಮಿತಿ ಒಳಗಿನ ವಿಶೇಷ ಚೇತನ ಬಾಲಕ ಬಾಲಕಿಯರ ಅಥ್ಲೆಟಿಕ್ ಕ್ರೀಡಾಕೂಟದ ಜಾವಲಿನ್ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ಸುಜೀರ್ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿ ಮಾ| ಭವಿಷ್ ಇವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಜನಾರ್ಧನ ಪೂಜಾರಿ ನಾರುಕೋಡಿ , ವಾಕ್ ಮತ್ತು ಶ್ರವಣ ವಿಭಾಗ ಯನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಇದರ ಎಚ್ ಒ ಡಿ ಶ್ವೇತಾ ಪ್ರಭು, ಮೆಡಿಕಲ್ ಕಾಲೇಜಿನ ನಿಮಲ್ಕಾ, ಮೇಲ್ಕಾರಿನ ಚಂದ್ರಿಕಾ ವೆಜಿಟೇಬಲ್ಸ್ ಇದರ ಮಾಲಕರಾದ ಮಹಮ್ಮದ್ ಶರೀಫ್, ಲಯನ್ಸ್ ಕ್ಲಬ್ ವಿಟ್ಲ ಇಲ್ಲಿನ ನಿಕಟಪೂರ್ವ ಅಧ್ಯಕ್ಷರಾದ ಸುದೇಶ್ ಭಂಡಾರಿ, ವೀರಕಂಬ ಸಮುದಾಯ ಆರೋಗ್ಯ ಅಧಿಕಾರಿ ಹರ್ಷಿತ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಮೇಶ್ ಗೌಡ ಮೈರ , ಬಂಡವಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಗೌರವ ಅಧ್ಯಕ್ಷರಾದ ರತ್ನಾವತಿ, ಸಂಪನ್ಮೂಲ ವ್ಯಕ್ತಿಗಳಾದ ಕಿರಣಕುಮಾರಿ, ಪ್ರಶಾಂತ್, ರವೀಂದ್ರ ರವರು ಉಪಸ್ಥಿತರಿದ್ದರು.


ಮುಖ್ಯ ಶಿಕ್ಷಕಿ ಶ್ರೀಮತಿ ಬೆನಡಿಕ್ಟ ಸ್ವಾಗತಿಸಿ ಸಹ ಶಿಕ್ಷಕಿ ಅನುಷಾ ವಂದಿಸಿ , ಸಹ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು ಸಹಕರಿಸಿದರು.

Leave a Reply

Your email address will not be published. Required fields are marked *

ಆಂಧ್ರಪದೇಶದಲ್ಲಿ ಫ್ಲೋರ್ ಮಾಸ್ಟರ್ಸ್ ಮೊದಲ ಫ್ಲಾಟ್ ಬ್ರೆಡ್ ಸ್ಥಾವರ; ರೂ. 100 ಕೋಟಿ ಹೂಡಿಕೆ, ರಫ್ತು ಆಧಾರಿತ ಉದ್ಯಮ..!

ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಬಳಿ ಬಸ್-ಕಾರು ಡಿಕ್ಕಿ; ಮಕ್ಕಳಿದ್ದ ಕಾರು ಅಪಾಯದಿಂದ ಪಾರು

ನ್ಯೂಯಾರ್ಕ್: ಅಮೆರಿಕ-ಇರಾನ್ ಮಿಲಿಟರಿ ವಿರಾಮದ ಪರಿಣಾಮ; ಕಚ್ಚಾ ತೈಲ ಬೆಲೆ ಇಳಿಕೆ, ಹಣದುಬ್ಬರಕ್ಕೂ ಬ್ರೇಕ್?

ನವದೆಹಲಿ: ಜಿರಳೆ ಹೋರಾಟಕ್ಕೆ ಕೊನೆಗೂ ಮಣಿದ ಕೇಂದ್ರ ಸರಕಾರ; ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ…!

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ಭೀಕರ ದಾಳಿ…!

ಬಂಟ್ವಾಳ: ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಆರೋಗ್ಯದಲ್ಲಿ ಸುಧಾರಣೆ..!

ಬಂಟ್ವಾಳ: ತ್ಯಾಜ್ಯ ನಿರ್ವಹಣೆ ಸಂಪೂರ್ಣ ಹದಗೆಟ್ಟು ಸಾರ್ವಜನಿಕರಲ್ಲಿ ಆತಂಕ..!

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

error: Content is protected !!