ಜನ ಮನದ ನಾಡಿ ಮಿಡಿತ

Advertisement

ಮಂಗಳೂರಿನಲ್ಲಿ ಮಾರ್ಚ್ 1ರಿಂದ 3 ವರೆಗೆ ಜಾನಪದ ಕಡಲೋತ್ಸವ; ಕಡಲ ಕಿನಾರೆಯಲ್ಲಿ ಮೇಳೈಸಲಿದೆ ಜಾನಪದ ಸಂಭ್ರಮ, ಆಹಾರ ಮೇಳ, ಗಾಳಿಪಟ ಪ್ರದರ್ಶನ

ದಕ್ಷಿಣ ಕನ್ನಡ : ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ಕದಳಿ ಬೀಚ್ ಟೂರಿಸಂ ಸಹಕಾರದೊಂದಿಗೆ ದಿನಾಂಕ ಮಾರ್ಚ್ ಒಂದರಿಂದ ಮೂರರವರೆಗೆ ಮೂರು ದಿನಗಳ ಕಾಲ ಮಂಗಳೂರು ಪಣಂಬೂರಿನ( ಪಣಂಬೂರು ಬೀಚ್ ) ಕಡಲಕಿನಾರೆಯಲ್ಲಿ ಹಮ್ಮಿಕೊಂಡಿರುವ “ಜಾನಪದ ಕಡಲೋತ್ಸವ” ಎಂಬ ಬೃಹತ್ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಕಡಲೋತ್ಸವ ಕರ್ನಾಟಕ ರಾಜ್ಯದ ರಾಜ್ಯಪಾಲರು ಉದ್ಘಾಟಿಸಲಿದ್ದು ಕಾರ್ಯಕ್ರಮದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಮೈಸೂರು ಇವರನ್ನು ಸನ್ಮಾನಿಸಲಾಗುವುದು ಎಂದು ಜಾನಪದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ..


ಕಡಲೋತ್ಸವ ಕಾರ್ಯಕ್ರಮದಲ್ಲಿ ಜಾನಪದ ಪ್ರದರ್ಶನ, ಆಹಾರ ಮೇಳ, ಗಾಳಿಪಟ ಉತ್ಸವ ವಿಶೇಷ ಆಕರ್ಷಣೆಯಾಗಿದ್ದು, ಕ್ರಮವಾಗಿ ಮೂರು ದಿನಗಳಲ್ಲಿ ಡಾ.ರಮೇಶ್ಚಂದ್ರ ಮತ್ತು ಕಲಾವತಿ ಬಳಗದವರಿಂದ ಜಾನಪದ ರಸ ಸಂಜೆ ಸಂಗೀತ ಕಾರ್ಯಕ್ರಮ, ಅಜಯ್ ವಾರಿಯರ್ ಮತ್ತು ತಂಡದವರಿಂದ ಸಂಗೀತರಸಮಂಜರಿ, ಹಾಗೂ ಮಣಿಕಾಂತ್ ಕದ್ರಿ ತಂಡದಿಂದ ಕಡಲಗೀತೆ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಾನಪದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಮುಖರು ಕರೆ ನೀಡಿದರು.


14 ಮಂದಿ ಜನಪದಿಯರಿಗೆ ಕರ್ನಾಟಕ ಜನಪದ ಪರಿಷತ್ ಪ್ರಶಸ್ತಿ
ಮಾರ್ಚ್ 1ರಿಂದ 3 ರವರೆಗೆ ನಡೆಯುವ ಜಾನಪದ ಕಡಲೊತ್ಸವ -2024 ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಂದ 14 ಮಂದಿ ವಿವಿಧ ಕ್ಷೇತ್ರದ ಜನಪದ ಕಲಾವಿದರು, ದೈವ ನರ್ತಕರು, ಜನಪದ ಸಂಘಟಕರು ಹಾಗೂ ನಾಟಿ ವೈದ್ಯರುಗಳನ್ನು ಗುರುತಿಸಿ ಕರ್ನಾಟಕ ಜಾನಪದ ಪರಿಷತ್ ಪ್ರಸಸ್ತಿಯನ್ನು ಘೋಷಿಸಲಾಗಿದೆ.

ಮಾರ್ಚ್ 2 ಮತ್ತು 3 ರಂದು ಸಂಜೆ ನಡೆಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ಜನಪದ ಪ್ರಶಸ್ತಿಗೆ ಶ್ರೀ ದೊಡ್ಡಣ್ಣ ಬರಮೇಲು ಸುಳ್ಯ ಜಾನಪದ ಕ್ರೀಡಾ ಸಂಘಟಕರು, ಶ್ರೀಮತಿ ಭವಾನಿ ಪೆರ್ಗಡೆ ತೊಕೆಮನೆ, ಶ್ರೀ ಎ.ಕೇಪು ಅಜಿಲ ಸುಳ್ಯ ಜಾನಪದ ಕಲಾವಿದ, ಸದಾನಂದ ನಾರಾವಿ, ಜಾನಪದ ಸಾಹಿತಿ, ಶ್ರೀ ಬೇಬಿ ಪೂಜಾರಿ, ನಾಟಿವೈದ್ಯರು ಪಿಲ್ಯ, ಬೆಳ್ತಂಗಡಿ ತಾಲೂಕು, ಶ್ರೀಮತಿ ಕರ್ಗಿ ಶೆಡ್ತಿ, ಅಳದಂಗಡಿ ಬೆಳ್ತಂಗಡಿ ತಾಲೂಕು, ಮೇರಿಜೋನ್ ಜಾನಪದ ಸಂಘಟಕಿ ಮತ್ತು ಕಲಾವಿದೆ, ಬೀಪಾತುಮ್ಮ, ಆತೂರು ಕೊಯಿಲ
ತುಳು, ಬ್ಯಾರಿ, ಜಾನಪದ ಕಲಾವಿದರು ಮತ್ತು ನಾಟಿ ವೈದ್ಯರು, ಶ್ರೀಮತಿ ಅಪ್ಪಿ ಶೆಟ್ಟಿ ಕಿನ್ನಿಗೋಳಿ,ಕಿಟ್ಟ ಮಲೆಕುಡಿಯ ಜಾನಪದ ಕಲಾವಿದರು,ಮೈಮ್ ರಮೇಶ್ ಮಂಗಳೂರು,ಶ್ರೀಮತಿಹು ವೆಂಕಮ್ಮ ಈಶ್ವರ ಮಂಗಳ ನಾಟಿ ವೈದ್ಯರು,ಕರಿಯ ಅಜಿಲ ಕಡ್ಯ ಪುತ್ತೂರು, ದೈವ ನರ್ತಕ,ಉಗ್ಗಪ್ಪ ಪೂಜಾರಿ ಮೂಡಬಿದಿರಿ, ಪಾಡ್ದನ ಕಲಾವಿದರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಮೂರು ದಿನಗಳು ಕಡಲ ಕಿನಾರೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಸಂಘಟನೆಯ ಮುಖ್ಯಸ್ಥರುಗಳು, ಅಧಿಕಾರಿಗಳು, ಚಲನಚಿತ್ರ ನಟರು, ಜನಪದ ಆಸಕ್ತರೆಲ್ಲರೂ ಭಾಗವಹಿಸಲಿದ್ದು, ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗುವ ನಿರೀಕ್ಷೆಯಿದ್ದು, ಸಾರ್ವಜನಿಕರ ಸಹಕಾರ ಕೋರಲಾಗಿದೆ
ಪತ್ರಿಕಾಗೋಷ್ಠಿಯಲ್ಲಿ ಜಾನಪದ ಪರಿಷಿತ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಮೋಹನ್ ದಾಸ ರೈ, ಸಂಚಾಲಕರಾದ ರಾಜೇಶ್ ಆಳ್ವ, ಕಾರ್ಯದರ್ಶಿಗಳಾದ ರಾಜೇಶ್ ಸ್ಕೈಲಾರ್ಕ್, ತಾರಾನಾಥ ಶೆಟ್ಟಿ ಬೋಳಾರ, ಚಂಚಲ ತೇಜೋಮಯ, ಮಾಲತಿ ಶೆಟ್ಟಿ ಮಾಣೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಮೂಡುಬಿದಿರೆ: ಗರ್ಭಿಣಿ ದನಗಳ ಮೇಲೆ ಕತ್ತಿಯಿಂದ ಹ*ಲ್ಲೆ…..!

ಮಂಗಳೂರು: ಮಂಗಳೂರಿನಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನ; ಮೂವರು ಆರೋಪಿಗಳ ಬಂಧನ..!

ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಅಕ್ರಮ ಮರಳುಗಾರಿಕೆ ಆರೋಪ; ನೇತ್ರಾವತಿ ನದಿಯಲ್ಲಿ ಮರಳು ದಂಧೆ…!

ಬಂಟ್ವಾಳ: ಶಾಲಾ ಬಸ್ ನಿಯಮ ಪರಿಶೀಲನೆ ; ಶಾಲಾ ಬಸ್‌ಗಳನ್ನು ಪರಿಶೀಲಿಸಿದ ಟ್ರಾಫಿಕ್ ಪೋಲಿಸ್ ಎಸ್.ಐ.ಆದರ್ಶ್…!

ಬಂಟ್ವಾಳ: ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿ ಕೃತಕ ನೆರೆ…..!

ಉಡುಪಿ: ಹೆಬ್ರಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜು ಅಡ್ಡೆಗೆ ಪೊಲೀಸರ ದಾಳಿ; 7 ಮಂದಿಯ ಬಂಧನ..!

ಬೆಳ್ತಂಗಡಿ: ಪಿಕಪ್ ವಾಹನ ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಸಾ*ವು..!

ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಕುಂದಾಪುರ: ಕಂಟೇನರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು..!

error: Content is protected !!