ಜನ ಮನದ ನಾಡಿ ಮಿಡಿತ

Advertisement

“ವಾಯ್ಸ್ ಆಫ್ ಆರಾಧನಾ- ಆರದಿರಲಿ ಬದುಕು” ತಂಡದಿಂದ ಚಿಕಿತ್ಸೆಗೆ ಧನ ಸಹಾಯ, ಸಂಸ್ಥೆಗೆ ನಾಗರೀಕರ ಅಭಿನಂದನೆಗಳ ಮಹಾಪೂರ

ದಕ್ಷಿಣ ಕನ್ನಡ : ಕಳೆದ ಕೆಲವಾರು ವರ್ಷಗಳಿಂದ,ಹಲವು ಸದಸ್ಯರನ್ನು ಒಳಗೊಂಡ, ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ, ಪದ್ಮಶ್ರೀ ಭಟ್ ಇವರ ಉಸ್ತುವಾರಿಯ, ಬಡ ಅನಾರೋಗ್ಯ ಪೀಡಿತರ ಸೇವೆಯು ಒಳಗೊಂಡಂತೆ ಸದಾ ಸಮಾಜ ಸೇವೆಯನ್ನು ಮಾಡುತ್ತಿರುವ ಕರಾವಳಿ ಕರ್ನಾಟಕದ ನಮ್ಮ ಹೆಮ್ಮೆಯ “ವಾಯ್ಸ್ ಆಫ್ ಆರಾಧನಾ- ಆರದಿರಲಿ ಬದುಕು” ತಂಡವು ಇದೀಗ ಫೆಬ್ರವರಿ 2024ರ ತಿಂಗಳ ಸಹಾಯ ಹಸ್ತವನ್ನು ಇಂದು ದ.ಕ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಗಾಂಧೀ ನಗರ ಕಡೆಪಲ್ಲಿಯಲ್ಲಿ ಬಾಡಿಗೆ ಮನೆಯಲ್ಲಿ ತಾಯಿ ಬಬಿತ ಜೊತೆ ಇಬ್ಬರು ಮಕ್ಕಳು ವಾಸವಾಗಿರುವ ಕಡುಬಡತನದ 12 ವರ್ಷದ ಸಿಂಚನಾ ಮಗು ನರಗಳ ಸಮಸ್ಯೆ ಬ್ರೈನ್ ಹಾಗು ಮೂತ್ರ ಕೋಶದ ಸಮಸ್ಯೆ ಯಿಂದ ಬಳಲುತ್ತಿದ್ದು ಅವರ ಕಷ್ಟ ಅರಿತು ತಂಡ ಸಿಂಚನಾ ಮಗುವಿನ ಚಿಕಿತ್ಸೆಗಾಗಿ ತನ್ನ ತಂಡದ ಸದಸ್ಯರಿಂದ ಸಂಗ್ರಹಿಸಲಾದ 35 ಸಾವಿರ ರೂಪಾಯಿ ಸಹಾಯ ಹಸ್ತ ವನ್ನು ಪ್ರೀತಿಪೂರ್ವಕವಾಗಿ ನೀಡಿದರು.


ಜನಸೇವೆಯೇ ಜನಾರ್ದನ ಸೇವೆ ಎಂಬ ತತ್ವದಡಿ ಅನಾರೋಗ್ಯ ಪೀಡಿತರಿಗೆ ಸಹಾಯಧನ, ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಅವಕಾಶ, ಸಾಂಸ್ಕೃತಿಕ ಸಂಭ್ರಮ, ಜಾನಪದ ಕಾರ್ಯಕ್ರಮಗಳು, ಸರ್ಕಾರಿ ಶಾಲೆಗೆ ಕೊಡುಗೆ ಯೋಜನೆ, ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಈ ತಂಡವು ಹಮ್ಮಿಕೊಂಡಿದ್ದು,
ಕರಾವಳಿ ಕರ್ನಾಟಕದ ಮನೆಮತಾಗಿರುವ ತಂಡ, ತನ್ನ ತಂಡದ ಸದಸ್ಯರ ಬಲದಿಂದ ಉತ್ತಮವಾದ ಸಮಾಜ ಸೇವೆಯನ್ನು ಮಾಡುತ್ತಿದ್ದು, ಪದ್ಮಶ್ರೀ ಭಟ್ಟರ ಮಾರ್ಗದರ್ಶನದಲ್ಲಿ ಇನ್ನಷ್ಟು ಸಮಾಜ ಸೇವೆಯಲ್ಲಿ ಸಾಧಿಸಲಿ.
ಸಾರ್ವಜನಿಕ ನಾಗರಿಕರು ವಾಯ್ಸ್ ಆಫ್ ಆರಾಧನಾ ಆರಾಧನೆ ಬದುಕು ತಂಡವನ್ನು ಅಭಿನಂದಿಸಿದ್ದಾರೆ, ಶುಭಾಶಯವನ್ನು ಹೇಳಿದ್ದಾರೆ.

Leave a Reply

Your email address will not be published. Required fields are marked *

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

ಮಂಗಳೂರು: ಅಕ್ರಮ ಆನೆದಂತಗಳ ಮಾರಾಟ; ಆರೋಪಿಗಳ ಬಂಧನ..!

ಬೆಂಗಳೂರು: ಕಾರ್ಕಳದಲ್ಲಿ ತುಳು ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ..!

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ್ಯು…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿ…!

error: Content is protected !!