ಜನ ಮನದ ನಾಡಿ ಮಿಡಿತ

Advertisement

ವಾಷಿಂಗ್ಟನ್: ಉತ್ತರ ಅಮೆರಿಕಾ ಬಂಟರ ಸಂಘದ `ದಿಬ್ಬಣ’ ಮಹಾ ಅಧಿವೇಶನ..!

ಭಾರತ ಮತ್ತು ಅಮೆರಿಕಾಗಳು ಅನೇಕ ಸಾಮಾನ್ಯ ಅಂಶಗಳನ್ನು ಹೊಂದಿವೆ. ಅಮೆರಿಕಾ ಅವಕಾಶಗಳ ದೇಶ. ಇಲ್ಲಿಗೆ ವಲಸೆ ಬಂದು ವಾಸಿಸುತ್ತಿರುವ ಭಾರತೀಯರು ತಮ್ಮ ಮೂಲ ಸಂಸ್ಕೃತಿಯನ್ನು ಬಿಡದೆ ನವ ಪೀಳಿಗೆಗೂ ಅದರ ಅರಿವು ಮೂಡಿಸುತ್ತಿರುವುದು ಅನುಕರಣೀಯ ಕೆಲಸ ಎಂದು ಉದ್ಯಮಿ ಹಾಗು ಮಹಾ ದಾನಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಕುಳೂರು ಹೇಳಿದ್ದಾರೆ.

ಅಮೆರಿಕಾದ ಸಿಯಾಟೆಲ್ ನಲ್ಲಿ ಉತ್ತರ ಅಮೆರಿಕಾ ಬಂಟರ ಸಂಘ ಆಯೋಜಿಸಿದ್ದ 25 ನೇ ಹೆಗ್ಗುರುತು ಮಹಾ ಅಧಿವೇಶನ ‘ಬಾನ’ ದಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಶೆಟ್ಟಿ, ಅಮೆರಿಕಾ ತನ್ನ ಕನಸಿನ ದೇಶವಾಗಿತ್ತು ಎಂದರು. ಭಾರತ ಮತ್ತು ಅಮೆರಿಕಾ ನಡುವಣ ಸಾಮ್ಯತೆಗಳನ್ನು ಪಟ್ಟಿ ಮಾಡಿದ ಅವರು ಅಮೆರಿಕಾದ್ದು ಚಾರಿತ್ರಿಕ ಪ್ರಜಾಪ್ರಭುತ್ವವಾದರೆ, ಭಾರತವು ಅತಿ ದೊಡ್ಡ ಪ್ರಜಾಪ್ರಭುತ್ವ . ಅಭಿವೃದ್ದಿಗೆ ಸಂಬಂಧಿಸಿ ಅಮೆರಿಕಾ ಅಧ್ಯಕ್ಷರು ಮತ್ತು ಭಾರತದ ಪ್ರಧಾನಿಯವರ ಬಹುತೇಕ ಚಿಂತನೆಗಳಲ್ಲಿ ಹೋಲಿಕೆ ಇದೆ ಎಂದರು.

ಅಮೆರಿಕಾದ ಈ ಬಂಟರ ಸಂಘ ಆಯೋಜಿಸಿದ ಮಾಹಾಧಿವೇಶನಕ್ಕೆ `ಬಾನ’ ಎಂಬ ಶೀರ್ಷಿಕೆ ನೀಡಲಾಗಿದೆ. ಬಾನ ಎಂಬುದಕ್ಕೆ ಆಕಾಶ ಎಂಬ ಅರ್ಥವಿದೆ. ಈ ಸಂಘಟನೆ ವಿಸ್ತಾರವಾಗಿ ಮತ್ತು ಬಲಿಷ್ಟವಾಗಿ ಬೆಳೆಯಲಿ ಎಂದು ಹಾರೈಸಿದರು.

‘ಬಾನ’ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದ ಮಹತ್ವವನ್ನು ಪ್ರತಿಬಿಂಬಿಸಿದ ಡಾ. ಶೆಟ್ಟಿ ಹತ್ತು ನಿಮಿಷಗಳಲ್ಲಿ ಮಹಾಕಾವ್ಯ ರಾಮಾಯಣವನ್ನು ಪ್ರಸ್ತುತಪಡಿಸುವ ಕಾರ್ಯವನ್ನು ಮಾಡುವ ಮೂಲಕ ಅಮೆರಿಕಾದಲ್ಲಿ ಜನಿಸಿದ ನವ ಪೀಳಿಗೆಗೆ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಮನದಟ್ಟು ಮಾಡುವ ಯತ್ನವನ್ನು ಮಾಡಿರುವುದು ಭಾರತೀಯರಿಗೆಲ್ಲ ಹೆಮ್ಮೆಯ ಸಂಗತಿ. ಅಮೆರಿಕಾದ ನೆಲದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಸಂಗತಿಗಳನ್ನು ಹೊಂದಿಸಿಕೊಂಡು ಪ್ರಸ್ತುತಪಡಿಸುವುದು ಸಾಮಾನ್ಯ ಸಂಗತಿಯಲ್ಲ. ಇದಕ್ಕೆ ಅಪಾರ ಸಮಯ, ಸಂಪನ್ಮೂಲ ಹಾಗು ಶ್ರಮ ಬೇಕಾಗುತ್ತದೆ ಎಂದರು. ವಲಸೆ ಎಂಬುದು ಜಾಗತಿಕ ವಿದ್ಯಮಾನ ಎಂಬ ಅಂಶದತ್ತ ಗಮನ ಸೆಳೆದ ಡಾ. ಶೆಟ್ಟಿ, ಬಂಟ ಸಮುದಾಯ ಕೂಡ ಇದರಿಂದ ಮುಕ್ತವಾಗಿಲ್ಲ. ಅವರು ತಾವು ಹೋದಲ್ಲಿ ಸಂಘ ಕಟ್ಟಿಕೊಂಡು ಒಗ್ಗಟ್ಟು ಮೂಡಿಸುತ್ತಿದ್ದಾರೆ. ಇದಕ್ಕೆ ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಮುಂಬೈ ಬಂಟರ ಸಂಘ ಸಹಿತ ಅನೇಕ ಸಂಘಗಳು ಉದಾಹರಣೆಯಾಗಿವೆ ಎಂದವರು ದೃಢಪಡಿಸಿದರು.

ಸಂಘಗಳು ಬಲಿಷ್ಟವಾದರೆ ಏಕತೆ ಬರುತ್ತದೆ, ಸಾಂಸ್ಕೃತಿಕ ಆಚರಣೆಗಳು ನಡೆಯುತ್ತವೆ. ನವ ಪೀಳಿಗೆಗೆ ಸಂಸ್ಕೃತಿ ಕಲಿಸುವ ಕೆಲಸ ನಡೆಯುತ್ತದೆ ಎಂದವರು ಸಂಘಗಳ ಸಾಮಾಜಿಕ ಹಾಗು ಸಾಂಸ್ಕೃತಿಕ ಜವಾಬ್ದಾರಿಯನ್ನು ವಿಶ್ಲೇಷಿಸಿದರು. ಬಾನ ಮಹಾಧಿವೇಶನವನ್ನು ಮೈಲಿಗಲ್ಲು ಸಂಭ್ರಮ ಎಂದೂ ಡಾ. ಶೆಟ್ಟಿ ಬಣ್ಣಿಸಿದರು. ಬಾನದ ಅಧ್ಯಕ್ಷ ಮಂಜುನಾಥ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಮಂಗಳೂರು: ದಸರಾ ರಜೆ ವೇಳೆ ತರಗತಿ, ಪರೀಕ್ಷೆ ನಡೆಸಿದರೆ ಪ್ರತಿಭಟನೆ: ಪ್ರಮೋದ್ ಮುತಾಲಿಕ್

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಅಪರಿಚಿತ ಮಾನವನ ಅಸ್ಥಿಪಂಜರ ಪತ್ತೆ

ಉಡುಪಿ: ಉಡುಪಿಯಲ್ಲಿ ಸಾವಿರಾರು ರೆಕ್ಕೆ ಗೆದ್ದಲುಗಳ ಹಾರಾಟ; ಸಾರ್ವಜನಿಕರ ಗಮನ ಸೆಳೆದ ದೃಶ್ಯ

ಮುಂಬೈ: ಮುಂಬೈಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜಾ ಉದ್ಯಾಪನ…!

ಬಂಟ್ವಾಳ: ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹಸಂಚಾಲಕರಾಗಿ ಪ್ರದೀಪ್ ಅಜ್ಜಿಬೆಟ್ಟು ನೇಮಕ

ಉಡುಪಿ: ಸರ್ಕಾರಿ ಜಾಗದಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ; ₹16 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ: ಶ್ರೀಕೃಷ್ಣ ಮಠಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಭೇಟಿ; ಶ್ರೀಕೃಷ್ಣ ದೇವರ ದರ್ಶನ..!

ಮಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದ ಬಜ್ಪೆ ಇನ್ಸ್‌ಪೆಕ್ಟರ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಗುಜರಾತ್: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಕರಾವಳಿಯ ಮೂವರು ಪ್ರತಿಭೆಗಳಿಗೆ ರಾಷ್ಟ್ರ ಪ್ರಶಸ್ತಿ…!

error: Content is protected !!