ಜನ ಮನದ ನಾಡಿ ಮಿಡಿತ

Advertisement

ಕಡಬ: ಶ್ರೀ ದುರ್ಗಾಂಬಿಕಾ ದೇಗುಲ ಸಂಭ್ರಮದ ಏಕಾಹ ಭಜನ ಮಹೋತ್ಸವ

ಕಡಬ, ಎ. 13: ಇಲ್ಲಿನ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವ ಸ್ಥಾನದಲ್ಲಿ 63ನೇ ವರ್ಷದ ಏಕಾಹ ಭಜನ ಮಹೋತ್ಸವವು ಶುಕ್ರವಾರ ಮುಂಜಾನೆ ಆರಂಭಗೊಂಡು ಶನಿವಾರ ಬೆಳಿಗ್ಗೆ ವರೆಗೆ ನಡೆಯಿತು.

ದೇಗುಲದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಕೆದಿಲಾಯ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಭಜನೆಗೆ ಚಾಲನೆ ನೀಡಿದರು.
ಅ ಬಳಿಕ ಕಡಬ ದುರ್ಗಾಂಬಿಕಾ ಭಜನ
ಮಂಡಳಿಯ ಸದಸ್ಯರು ಭಜನ ಸೇವೆ ನೆರವೇರಿಸಿದರು. ಬಳಿಕ ವಿವಿಧ ಭಜನ ಸಂಘಗಳ ಸದಸ್ಯರಿಂದ ಭಜನ ಸೇವೆ ನಡೆಯಿತು. ಸಂಜೆ ದುರ್ಗಾಪೂಜೆ ನೆರವೇರಿತು. ರಾತ್ರಿ ಜರಗಿದ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀಗಳನ್ನು ಗಣಪತಿ ದೇವಸ್ಥಾನದಿಂದ ಪೂರ್ಣಕುಂಭ ಸ್ವಾಗತದ ಮೂಲಕ ಮೆರವಣಿಗೆಯಲ್ಲಿ ಕರೆತರಲಾಯಿತು. ಬಳಿಕ ಶ್ರೀ ದೇವರಿಗೆ ಉಲ್ಪೆ ಸಮರ್ಪಣೆ ನಡೆಯಿತು.

ದೈವಜ್ಞ ಸುಬ್ರಹ್ಮಣ್ಯ ಬೈಪಾಡಿತ್ತಾಯ ಕೆಂಚಭಟ್ರೆ, ದೇವಸ್ಥಾನದ ಅರ್ಚಕ ಪ್ರಶಾಂತ ಕೆದಿಲಾಯ, ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ಜನಾರ್ದನ ಗೌಡ ಪಣೆಮಜಲು, ಸೀತಾರಾಮ್ ಗೌಡ ಪೊಸವಳಿಕೆ ಡಾ|ರವೀಂದ್ರ ಮಲ್ಯ ಬ್ರಹ್ಮಕಲಶೋತ್ಸವ ಸಮಿತಿಯ ಕೃಷ್ಣ ಶೆಟ್ಟಿ ಕಡಬ, ಏಕಾಹ ಸಮಿತಿಯ ಅಧ್ಯಕ್ಷ ಕಿಶನ್ ಕುಮಾರ್ ರೈ ಪೆರಿಯಡ್ಕ ಗುತ್ತು, ಕಾರ್ಯದರ್ಶಿ ಶ್ರೀಕೃಷ್ಣ ಎಂ.ಆರ್., ಜತೆ ಕಾರ್ಯದರ್ಶಿ ರಾಕೇಶ್ ಪೆಲತ್ತೋಡಿ, ಕೋಶಾಧಿಕಾರಿ ಸೀತಾರಾಮ ಗೌಡ ಎ., ಕಡಬ ಎಸ್‌ಐ ಅಭಿನಂದನ ಎಂ.ಎಸ್., ಶ್ರೀ ದುರ್ಗಾಂಬಿಕಾ ಭಜನ ಮಂಡಳಿಯ ಅಧ್ಯಕ್ಷ ಸೋಮಪ್ಪ ನ್ಯಾಕ್, ಕಾರ್ಯದರ್ಶಿ ಮನೋಹರ ರೈ ಬೆದ್ರಾಜೆ, ಶ್ರೀ ಶ್ರೀಕಂಠ ಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದ
ಸಮಿತಿ ಮಾಜಿ ಅಧ್ಯಕ್ಷ ಮುತ್ತುಕುಮಾರ್, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಸತೀಶ್ ನ್ಯಾಕ್ ಮೇಲಿನಮನೆ, ಸರಸ್ವತೀ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್, ಅಧ್ಯಕ್ಷ ರವಿರಾಜ್ ಶೆಟ್ಟಿ ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷ ಸುಂದರ ಗೌಡ ಮಂಡೆಕರ, ಪ್ರಮುಖರಾದ ಅಶೋಕ್ ಕುಮಾರ್ ಪಿ., ಪ್ರಕಾಶ್ ಎನ್.ಕೆ., ಅಜಿತ್ ರೈ ಆರ್ತಿಲ, ಮೋನಪ್ಪ ಗೌಡ ನಾಡೋಳಿ, ವಿಶ್ವನಾಥ ರೈ ಪೆರ್ಲ, ಪ್ರಮೋದ್ ರೈ ನಂದುಗುರಿ, ಶಿವಪ್ರಸಾದ್ ರೈ ಮೈಲೇರಿ, ಯಶೋದರ ಪೂವಳ, ಸವಿತಾ ಕಾಮತ್, ನಾಗೇಶ್ ಕಾಮತ್, ಜಿನ್ನಪ್ಪ ಸಾಲಿಯಾನ್, ರಾಧಾಕೃಷ್ಣಕೋಲ್ಪೆ,ಮುಂತಾದ ವರು ಉಪಸ್ಥಿತರಿದ್ದರು.
.
ಜೆಸಿಐ ಕಡಬ ಕದಂಬ ಘಟಕದ ವತಿಯಿಂದ ಭಕ್ತಾದಿಗಳಿಗೆ ಉಚಿತವಾಗಿ ಮಜ್ಜಿಗೆ ವಿತರಣೆ ಕಾರ್ಯಕ್ರಮಕ್ಕೆ ಮಾಜಿ ಸಚಿವ ಎಸ್.ಅಂಗಾರ ಅವರು ಚಾಲನೆ ನೀಡಿದರು. ಉತ್ಸವದ ಅಂಗವಾಗಿ ದೇವಾಲಯವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು.

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!