ಬಂಟ್ವಾಳ: ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಮಾಜಿ ಸಿ.ಎಂ. ಕುಮಾರ ಸ್ವಾಮಿ ಅವರ ಹೇಳಿಕೆಯನ್ನು ವಿರೋಧಿಸಿ ಬಿಸಿರೋಡಿನ ಪ್ಲೈ ಓವರ್ ನ ಅಡಿಭಾಗದಲ್ಲಿ ಪ್ರತಿಭಟನೆ ನಡೆಯಿತು.

ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿತಪ್ಪುತ್ತಿದ್ದಾರೆ ಎಂಬ ಹೇಳಿಕೆಯನ್ನು ಕುಮಾರ ಸ್ವಾಮಿ ನೀಡಿದ್ದು, ಇದು ಖಂಡನೀಯ ಎಂದು ಮಹಿಳಾ ಕಾಂಗ್ರೆಸ್ ತಿಳಿಸಿದೆ.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ , ಹೆಣ್ಣು ಮಕ್ಕಳಿಗೆ ಅಪಮಾನ ಮಾಡಿದ್ದು,ಈ ಮಾತಿನಿಂದ ಹೇಳಿಕೆ ನೀಡಿದವರ ಮೌಲ್ಯ ಕುಸಿಯುತ್ತದೆ ಎಂದು ತಿಳಿಸಿದರು.
ಬಿಜೆಪಿಯವರು ಮಾತೆಯರು,ಮಾತೆಯರು ಎಂದು ಮತಪಡೆಯುತ್ತಾರೆ ವಿನಹಃ ಅವರಿಗೆ ಗೌರವ ನೀಡಲು ಗೊತ್ತಿಲ್ಲ ಎಂದು ಆರೋಪ ಮಾಡಿದರು.
ಈ ಹೇಳಿಕೆಗೆ ಮಹಿಳೆಯರು ಒಂದಾಗಿ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸಬೇಕು ಎಂದು ಅವರು ತಿಳಿಸಿದರು.
ಪ್ರತಿಭಟನೆಯಲ್ಲಿ ಜೊಸ್ಪಿನ್ ಡಿಸೋಜ,ಜಯಂತಿ ಪೂಜಾರಿ,ಜೆಸಿಂತಾ ಡಿಸೋಜ,ಮಲ್ಲಿಕಾ ಶೆಟ್ಟಿ,ಅಶ್ವನಿಕುಮಾರ್ ರೈ,
ಬೇಬಿಕುಂದರ್,ಸುದೀಪ್ ಕುಮಾರ್ ರೈ,ಮಾಯಿಲಪ್ಪ ಸಾಲಿಯಾನ್,ಐಡಾ ಸುರೇಶ್ ,ಸುದರ್ಶನ್ ಜಯುನ್ ಶೋಭಾ ಶೆಟ್ಟಿ,ಜನಾರ್ದನ ಚಂಡ್ತಿಮಾರ್, ಪದ್ಮಶೇಖರ್ ಜೈನ್ ,ಸಂಜೀವ ಪೂಜಾರಿ, ಮಧುಸೂದನ್ ಶೆಣೈ,ಪರಮೇಶ್ವರ ಮೂಲ್ಯ,ಅಬ್ಬಾಸ್ ಆಲಿ,ಚಂದ್ರಪ್ರಕಾಶ್ ಶೆಟ್ಟಿ,ಸದಾಶಿವ ಬಂಗೇರ ಉಪಸ್ಥಿತರಿದ್ದರು.



