ಜನ ಮನದ ನಾಡಿ ಮಿಡಿತ

Advertisement

ಉಡುಪಿಯಲ್ಲಿ ಹೆಚ್ಚಾಗ್ತಾಯಿರುವ ಕಾಡು ಪ್ರಾಣಿಗಳ ಹಾವಳಿ; ಪರಿಹಾರಕ್ಕೆ ಆಗ್ರಹ

ಉಡುಪಿ: ರೈತರು ತಾವು ಬೆಳೆದ ಬೆಳೆಗಳನ್ನು‌ ಕಾಡು ಪ್ರಾಣಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ.


ಒಂದೆಡೆ ತಾವು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇನ್ನೊಂದೆಡೆ ರೈತರು ತಮ್ಮ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಪರ್ಯಾಯ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಮಂಗ, ಜಿಂಕೆ, ಕಾಡುಹಂದಿ, ನವಿಲು ಮತ್ತು ಕಾಡೆಮ್ಮೆಗಳು ಕೃಷಿ ಭೂಮಿಗಳಿಗೆ ದಾಳಿ ನಡೆಸಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳನ್ನು ನಾಶ ಮಾಡುತ್ತಿವೆ. ಕೃಷಿಕರು ಮಂಗಗಳನ್ನು ಭಯಭೀತಗೊಳಿಸಿ ಓಡಿಸಲು ಪರವಾನಿಗೆ ಪಡೆದ ಬಂದೂಕುಗಳನ್ನು ಬಳಸುತ್ತಿದ್ದಾರೆ. ಅದೇ ರೀತಿ ಪ್ರಾಣಿಗಳನ್ನು ಓಡಿಸಲು ಪಟಾಕಿಗಳನ್ನು ಕೂಡ ಬಳಸುತ್ತಿದ್ದಾರೆ. ಆದರೆ, ಇವೆಲ್ಲವೂ ತಾತ್ಕಾಲಿಕ ಪರಿಹಾರಗಳಾಗಿವೆ.
ಯಾವುದೇ ತೊಂದರೆ ಇಲ್ಲದೆ ಪ್ರಾಣಿಗಳನ್ನು ಓಡಿಸಲು ಬಳಸುವ ವಿವಿಧ ತಂತ್ರಗಳು ಹಾಗೂ ಮಾರ್ಗಗಳು ಇದೀಗ ಹಳೆಯದಾಗುತ್ತಿವೆ ಎನ್ನುತ್ತಾರೆ ಕೃಷಿಕರು.
ಉಡುಪಿ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳು ಕೃಷಿ ಮತ್ತು ಜನರ ಮೇಲೆ ದಾಳಿ ನಡೆಸಿದ ಪರಿಣಾಮ ಅಪಾರ ನಷ್ಟಗಳು ಸಂಭವಿಸಿವೆ. ಇದರ ಪರಿಹಾರಕ್ಕಾಗಿ ಮಂಕಿ ಪಾರ್ಕ್‌ ನಿರ್ಮಾಣ ಮಾಡುವ ಪ್ರಸ್ತಾಪ ಇದೆಯಾದರೂ ಸರ್ಕಾರ ಇತ್ತ ಕಡೆ ಗಮನ ಹರಿಸುತ್ತಿಲ್ಲ. ಇನ್ನು ಮುಂದೆಯಾದರೂ ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಕೃಷಿಕರ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಕೃಷಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

error: Content is protected !!