ಜನ ಮನದ ನಾಡಿ ಮಿಡಿತ

Advertisement

ವರುಣನ ಆರ್ಭಟ: ಚಿಕ್ಕಮಗಳೂರಿನಲ್ಲಿ ಮಳೆಯೋ ಮಳೆ!. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು, ಭೂಮಿ ಕುಸಿತ, ಕಾಲುಸಂಕ ಮುಳುಗಡೆ

ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಭೂಕುಸಿತ ಉಂಟಾಗಿದೆ. ಮರಗಳು ಧರೆಗುರುಳಿದ್ದು, ಕಾಲುಸಂಕ ಮುಳುಗಡೆಯಾಗಿದೆ.
ಶೃಂಗೇರಿ ತಾಲೂಕಿನ ಮೇಲು ಬೈಲು ಗ್ರಾಮದಲ್ಲಿ ಮಣ್ಣು ಕುಸಿದು ಆರು ಮನೆಗಳು ಅಪಾಯಕ್ಕೆ ಸಿಲುಕಿವೆ.
ಉತ್ತಮೇಶ್ವರ ರಸ್ತೆ ಕಾಮಗಾರಿ ಇಲಾಖೆಯಿಂದ ಗ್ರಾಮ ಸಡಖ್ ಯೋಜನೆಯಲ್ಲಿ ರಸ್ತೆ ನಿರ್ಮಾಣ ಮಾಡುವಾಗ ಇಲ್ಲಿ ಮಣ್ಣು ತೆಗೆಯಲಾಗಿತ್ತು. ಇದೇ ರಸ್ತೆಯ ಮತ್ತೊಂದು ಕಡೆಯಲ್ಲಿ ಕುಸಿತ ಉಂಟಾಗಿದೆ. ಸ್ಥಳಕ್ಕೆ ಶೃಂಗೇರಿ ತಹಶೀಲ್ದಾರ್ ಗೌರಮ್ಮ ಹಾಗೂ ಅರ್.ಐ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು, ಕಳೆದ ಎರಡು ದಿನದಿಂದ ಮೇಲ್ಪಾಲ್ ಸುತ್ತಮುತ್ತ ಭಾರಿ ಮಳೆ ಸುರಿಯುತ್ತಿದೆ. ಮನೆಯ ಮುಂಗಡ ನಿಂತಿದ್ದ ಸಂದರ್ಭ ಧರೆ ಕುಸಿತ ಉಂಟಾಗಿದ್ದು, ವ್ಯಕ್ತಿಯೊಬ್ಬರು ಅದೃಷ್ಟವಶಾತ್ ಪಾರಾದ ಘಟನೆ ಎನ್. ಆರ್. ಪುರ ತಾಲೂಕಿನ ಮೇಲ್ಪಾಲ್​ನಲ್ಲಿ ನಡೆದಿದೆ. ಮೇಲ್ಪಾಲ್ ಮೂಲದ ಶಶಿಕುಮಾರ್ ಎಂಬುವರ ಮನೆ ಮುಂದೆ ಭೂಮಿ ಕುಸಿದಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

ತುಂಗಾ, ಭದ್ರಾ, ಹೇಮಾವತಿ ನದಿಗಳು ರಭಸದಿಂದ ಹರಿಯುತ್ತಿದ್ದು, ದಿನದಿಂದ ದಿನಕ್ಕೆ ತುಂಗಾ ನದಿ ನೀರಿನ ಮಟ್ಟ ಹೆಚ್ಚಾಗುತ್ತಿದೆ.
ತುಂಗಾ ನದಿಯಲ್ಲಿ ಮರದ ದಿಮ್ಮಿಗಳು ಕೊಚ್ಚಿಕೊಂಡು ಬರಲು ಪ್ರಾರಂಭವಾಗಿದೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆ ಭಾಗದಲ್ಲಿ ಧಾರಾಕಾರ ಮಳೆ ಆಗುತ್ತಿದ್ದು, ಶಾರಾದಾಂಬೆ ದೇವಾಲಯದ ತುಂಗಾ ನದಿ ತಟದಲ್ಲಿರುವ ಕಪ್ಪೆ ಶಂಕರ ದೇವಾಲಯ ಮುಳುಗಡೆಯಾಗಿದೆ. ಭಾರಿ ಮಳೆ ಹಿನ್ನೆಲೆ ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದ್ದು, ಮಲೆನಾಡಿನ 34 ಗ್ರಾಮ ಪಂಚಾಯಿತಿಯ 77 ಗ್ರಾಮಗಳಿಗೆ ಅಪಾಯವಿದೆ ಎಂದು ಗುರುತು ಮಾಡಲಾಗಿದೆ.

Leave a Reply

Your email address will not be published. Required fields are marked *

ಬೆಂಗಳೂರು: ಜ್ಯೋತಿಷ್ಯದ ನೆಪದಲ್ಲಿ ₹40 ಲಕ್ಷ ವಂಚನೆ: ಎಐ ವಿಡಿಯೋ ಮೂಲಕ ಅಪಘಾತದ ನಾಟಕ!

ಉಡುಪಿ: ನಿಟ್ಟೆ ಹಲಸು ಸಂಸ್ಕರಣಾ ಘಟಕ ನಾಮಕಾವಸ್ಥೆ: ಅನುದಾನದ ಬಳಕೆ ಬಗ್ಗೆ ಅನುಮಾನ…!

ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲೆಯಾಗಿ ಡಾ. ಸುಧಾ ಯಾದವ್ ನೇಮಕ?

ರಾಂಚಿ: ಮೈದಾನದಲ್ಲಿ ಅನುಚಿತ ವರ್ತನೆ: ವೆಸ್ಟ್ ಇಂಡೀಸ್‌ನ ಪೊವೆಲ್, ರದರ್‌ಫೋರ್ಡ್‌ಗೆ ಐಸಿಸಿ ಎಚ್ಚರಿಕೆ

ರಾಜ್‌ಕೋಟ್: ರಣಜಿ ಟ್ರೋಫಿಯಲ್ಲಿ ರವೀಂದ್ರ ಜಡೇಜಾ ಶತಕದ ಅಬ್ಬರ; ನ್ಯೂಜಿಲೆಂಡ್ ಸರಣಿಗೆ ಭರ್ಜರಿ ತಾಲೀಮು

ಬಂಟ್ವಾಳ: ಯು.ಟಿ. ಖಾದರ್ ಜನ್ಮದಿನ: ಬಂಟ್ವಾಳ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣುಹಂಪಲು ವಿತರಣೆ

ವಾಷಿಂಗ್ಟನ್: ರಷ್ಯಾ–ಉಕ್ರೇನ್ ಇಂಧನ ಕದನ ವಿರಾಮಕ್ಕೆ ಒಪ್ಪಿಗೆ: ಟ್ರಂಪ್ ಘೋಷಣೆ

ನವದೆಹಲಿ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ 24 ಗಂಟೆಯೊಳಗೆ ದಿನಾಂಕ ನಿಗದಿಪಡಿಸಿ: ಸಿಜೆಪಿ ಆಗ್ರಹ

ಮಂಗಳೂರು: ದಸರಾ ರಜೆ ವೇಳೆ ಸೆಮಿಸ್ಟರ್ ಪರೀಕ್ಷೆ: ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜು ಎದುರು ವಿದ್ಯಾರ್ಥಿಗಳ ಪ್ರತಿಭಟನೆ

error: Content is protected !!