ಜನ ಮನದ ನಾಡಿ ಮಿಡಿತ

Advertisement

ದೇರಳಕಟ್ಟೆ: ಶಾಲಾ ದ್ವಾರದ ಬಳಿ ವಿದ್ಯುತ್ ತಂತಿ ಮೇಲೆ ಉರಳಿದ ತೆಂಗಿನ ಮರ: ತಪ್ಪಿದ ಅನಾಹುತ


ಕೊಣಾಜೆ: ಭಾರೀ ಗಾಳಿ ಮಳೆಗೆ ದೇರಳಕಟ್ಟೆಯ ನೇತಾಜಿ ಸುಭಾಶ್ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆಯ ಗೇಟ್ ಬಳಿ ಇದ್ದ ತೆಂಗಿನ ಮರವೊಂದು ವಿದ್ಯುತ್ ತಂತಿ‌ಗೆ ಬಿದ್ದು ನೆಲಕ್ಕುರುಳಿದ ಘಟನೆ ಶುಕ್ರವಾರ ಸಂಭವಿಸಿದೆ.


ಶುಕ್ರವಾರ ಬೆಳಿಗ್ಗೆ ಶಾಲೆ ಆರಂಭವಾಗುವ ಮುನ್ನ ಗಾಳಿ ಮಳೆಗೆ ತೆಂಗಿನ ಮರವು ವಿದ್ಯುತ್ ತಂತಿ ಮೇಲೆ ಉರುಳಿ ಬಿದ್ದಿದ್ದು ಈ ಸಂದರ್ಭದಲ್ಲಿ ವಿದ್ಯುತ್ ಕಂಬ ಸಹಿತ ಮರವು ನೆಲಕ್ಕುರುಳಿದೆ. ಈ ಸಂದರ್ಭದಲ್ಲಿ ಕೆಲವು ಶಾಲೆಯೊಳಗಿದ್ದು, ಶಾಲಾ ಗೇಟ್ ಬಳಿ ಯಾವ ವಿದ್ಯಾರ್ಥಿಗಳೂ ಇರಲಿರಲಿಲ್ಲ. ಆದರೆ ತೆಂಗಿನ ಮರ ಉರುಳುವ ಒಂದು ನಿಮಿಷ ಮುಂಚೆಯಷ್ಟೇ ವಿದ್ಯಾರ್ಥಿಗಳು ತುಂಬಿದ್ದ ಅಟೋ ರಿಕ್ಷಾ ವೊಂದು ಇದೇ ದ್ವಾರದ ಬಂದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸದೆ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಬಳಿಕ ಕೂಡಲೆ ಶಾಲಾ ಶಿಕ್ಷಕರು ಹಾಗೂ ಸಾರ್ವಜನಿಕರು ಗಮನ‌ಹರಿಸಿ ಮೆಸ್ಕಾಂ ಮಾಹಿತಿ ನೀಡಿ ಮರ ಹಾಗೂ ವಿದ್ಯುತ್ ತಂತಿಗಳನ್ನು ತೆರವು ಗೊಳಿಸಿದ್ದಾರೆ. ವಿದ್ಯುತ್ ತಂತಿ ಹಾಗೂ ಮರ ತೆರವು ಗೊಳಿಸಲು ಸಮಯ ಹಿಡಿದಿದ್ದು ಗೇಟ್ ನ ಒಳಗಿದ್ದ ಮಕ್ಕಳನ್ನು ಪಾಲಕರೊಂದಿಗೆ ಮನೆಗೆ ಕಳುಹಿಸಲಾಗಿದ್ದು, ಶಾಲಾ ಒಳಗಿದ್ದ ಮಕ್ಕಳಿಗೆ ಮಾತ್ರ ಪಾಠ ಮಾಡಲಾಗಿತ್ತು. ಮರ ತೆರವು ಗೊಳಿಸುವ ವೇಳೆ ಶಾಲಾ ಗೇಟ್ ಬಳಿ ಇದ್ದ ಇನ್ನೆರಡು ತೆಂಗಿನ ಮರಗಳನ್ನೂ ಮುನ್ನೆಚ್ಚರಿಕೆಯಾಗಿ ಕಡಿದು ತೆರವುಗೊಳಿಸಲಾಯಿತು.

Leave a Reply

Your email address will not be published. Required fields are marked *

ಉಡುಪಿ : ಕಾಪುವಿನಲ್ಲಿ ಭೀಕರ ಅಪಘಾತ…!

ಬಂಟ್ವಾಳ : ಸಜಿಪದಲ್ಲಿ ಭೀಕರ ಅಪಘಾತ…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

error: Content is protected !!