ಸುರತ್ಕಲ್: ಶಿಬರೂರು ತುಕಾರಾಮ ಶೆಟ್ಟಿ ಪರ್ಲಬೈಲ್ ಗುತ್ತು (76ವರ್ಷ) ಗುರುವಾರ ಹೃದಯಾಘಾತದಿಂದ ನಿಧನರಾದರು.

ತುಕಾರಾಮ ಶೆಟ್ಟಿ ಮುಂಬೈಯಲ್ಲಿ ಹೊಟೇಲು ಉದ್ಯಮಿಯಾಗಿದ್ದರು. ಶಿಬರೂರು ದೈವಸ್ಥಾನಕ್ಕೆ ಸಂಬಂಧಿಸಿದಂತೆ ಗಡಿಕಾರರಾಗಿ ವರ್ಷದ ಹಿಂದೆ ಪಟ್ಟ ಪಡೆದಿದ್ದರು. ಶಿಬರೂರು ದೈವಸ್ಥಾನ ಬ್ರಹ್ಮಕಲಶೋತ್ಸವದ ಸಮಿತಿಯಲ್ಲಿದ್ದು, ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದ್ದರು. ಕೊಡುಗೈದಾನಿಯಾಗಿದ್ದರು. ಮೃತರು ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಶಿಬರೂರು ದೈವಸ್ಥಾನದ ಆಡಳಿತ ಸಮಿತಿಯ ಸದಸ್ಯರು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ



