ಜನ ಮನದ ನಾಡಿ ಮಿಡಿತ

Advertisement

ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಮಧ್ಯೆ ಮತ್ತೊಮ್ಮೆ ಅತಿರೇಕದ ಜಗಳ..!

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಹೊಡೆದಾಡಿಕೊಂಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಜಗದೀಶ್, ಉಗ್ರಂ ಮಂಜು ಹಾಗೂ ರಂಜಿತ್ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ.

ಬಿಗ್‌ಬಾಸ್‌ ಸೀಸನ್ 11ರ ಮನೆಯಲ್ಲಿ ಜಗದೀಶ್ ಹಾಗೂ ರಂಜಿತ್ ಕೈ ಕೈ ಮಿಲಾಯಿಸಿದ್ದು, ಇಬ್ಬರನ್ನು ಎವಿಕ್ಷನ್ ಮಾಡಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ನಿನ್ನೆಯಿಂದಲೂ ಸ್ಪರ್ಧಿಗಳ ಮಧ್ಯೆ ಅತಿರೇಕದ ಜಗಳ ನಡೆಯುತ್ತಿತ್ತು.

ಕಳೆದ ಸೋಮವಾರ ಚೈತ್ರಾ ಕುಂದಾಪುರ ಜೊತೆ ಜಗದೀಶ್ ಅವರು ಜಗಳ ಮಾಡಿದ್ದರು. ಸಿಟ್ಟಿಗೆದ್ದ ಚೈತ್ರಾ ಅವರು ಅಪ್ಪನಿಗೆ ಹುಟ್ಟಿದ್ರೆ ಎದುರುಗಡೆ ನಿಂತು ಮಾತನಾಡು ಎಂದು ಸವಾಲು ಹಾಕಿದ್ದರು. ಚೈತ್ರಾ, ಜಗದೀಶ್ ಕೆಂಗಣ್ಣಿನಿಂದ ಗುರಾಯಿಸಿದ್ದು, ಮನೆಯ ವಾತಾವರಣ ರಣರಂಗವಾಗುವಂತೆ ಮಾಡಿತ್ತು.

ನಿನ್ನೆ ರಾತ್ರಿ ರಂಜಿತ್‌ ಮತ್ತು ಜಗದೀಶ್ ಹಾಗೂ ಉಗ್ರಂ ಮಂಜು ಮತ್ತು ಜಗದೀಶ್ ಮಧ್ಯೆ ಜೋರು ಗಲಾಟೆಯಾಗಿದೆ. ಬಿಗ್‌ಬಾಸ್‌ ಶೋ ಬಗ್ಗೆ ಜಗದೀಶ್ ಅವರು ಅವಾಚ್ಯವಾಗಿ ಮಾತನಾಡುತ್ತಿದ್ದು ಈ ಬಗ್ಗೆ ಎಲ್ಲಾ ಸ್ಪರ್ಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಾಗ್ವಾದದ ಮಧ್ಯೆ ಮಾನಸ ವಿಚಾರವಾಗಿ ರಂಜಿತ್ ಮತ್ತು ಜಗದೀಶ್ ಮಧ್ಯೆ ಜಗಳವಾಗಿದ್ದು ಅತಿರೇಕದ ಹಂತಕ್ಕೆ ಹೋಗಿದೆ.

ಇದಾದ ಮೇಲೆ ರಂಜಿತ್ ಮತ್ತು ಜಗದೀಶ್ ಇಬ್ಬರು ಕೈ ಕೈ ಮಿಲಾಯಿಸಿಕೊಂಡಿದ್ದು ಬಿಗ್ ಬಾಸ್ ಮನೆಯಿಂದ ಎವಿಕ್ಷನ್ ಮಾಡಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಈ ರೀತಿ ಸ್ಪರ್ಧಿಗಳು ಔಟ್ ಆಗಿರೋದು ಇದೇ ಮೊದಲಲ್ಲ. ಕನ್ನಡ ಬಿಗ್‌ ಬಾಸ್ ಇತಿಹಾಸದಲ್ಲಿ ಈ ಹಿಂದೆ ಹುಚ್ಚ ವೆಂಕಟ್‌ನ ಶೋನಿಂದ ಎವಿಕ್ಷನ್ ಮಾಡಲಾಗಿತ್ತು. ಎರಡನೇ ಬಾರಿಗೆ ಕಿರಿಕ್ ಪಾರ್ಟಿ ಸಿನಿಮಾದ ನಟಿ ಸಂಯುಕ್ತ ಹೆಗೆಡೆ ಅವರು ಎವಿಕ್ಷನ್ ಆಗಿದ್ದರು.

Leave a Reply

Your email address will not be published. Required fields are marked *

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ಪಾಕಿಸ್ತಾನದಲ್ಲಿ ಭೀಕರ ಗಣಿ ಸ್ಫೋಟ; 32 ಕಾರ್ಮಿಕರ ದುರ್ಮರಣ…!

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಕುಂದಾಪುರ: ಐವನ್ ಮಸ್ಕರೇನಸ್ ಹತ್ಯೆ; ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ..!

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ…!

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

error: Content is protected !!