ಜನ ಮನದ ನಾಡಿ ಮಿಡಿತ

Advertisement

ಕೊಣಾಜೆ ರಿಕ್ಷಾ ಅಪಘಾತ ; ಕುಂಬಳೆ ನಿವಾಸಿ ವ್ಯಕ್ತಿ ಮೃತ್ಯು..!

ಉಳ್ಳಾಲ: ರಿಕ್ಷಾ ಅಪಘಾತದಲ್ಲಿ ಚಾಲಕ ಸಾವನ್ನಪ್ಪಿರುವ ಘಟನೆ ಕೊಣಾಜೆ ಕಲ್ಕಾರ್ ಎಂಬಲ್ಲಿ  ಸಂಭವಿಸಿದೆ.

ಕುಂಬಳೆ ಮಂಜಂತ್ತಡ್ಕ ನಿವಾಸಿ ನಾರಾಯಣ ಗಟ್ಟಿ (50) ಮೃತರು. ಕುಂಬಳೆಯಿಂದ ಕೊಲ್ಯ ಅಡ್ಕ ಸಮೀಪ ನಡೆದಿದ್ದ ಸಂಬಂಧಿಕರ ಹುಟ್ಟುಹಬ್ಬ ಸಮಾರಂಭಕ್ಕೆ ಖಾಸಗಿ ರಿಕ್ಷಾದಲ್ಲಿ ಆಗಮಿಸಿದ್ದ ಅವರು ಅಲ್ಲಿಂದ ಸಂಬಂಧಿಕರನ್ನು ಕೊಣಾಜೆ ಕಲ್ಕಾರ್ ಎಂಬಲ್ಲಿಗೆ ಬಿಟ್ಟು ಬರಲು ರಿಕ್ಷಾದಲ್ಲೇ ತೆರಳಿದ್ದರು. ಕಲ್ಕಾರ್ ಇಳಿಜಾರು ಪ್ರದೇಶದಲ್ಲಿ ರಿಕ್ಷಾ ಇಳಿಯುತ್ತಿದ್ದಂತೆ ಬ್ರೇಕ್ ವೈಫಲ್ಯಕ್ಕೀಡಾಗಿ ಮರವೊಂದಕ್ಕೆ
ರಿಕ್ಷಾ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ರಿಕ್ಷಾದೊಳಗಿದ್ದ ಮಹಿಳೆ, ಅವರ ಪುತ್ರ ಹಾಗೂ ಇನ್ನೋರ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಾರಾಯಣ ಗಟ್ಟಿ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

ಮಂಗಳೂರು: ಸಂಕೀರ್ಣ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಹೊಸ ಜೀವನ ನೀಡಿದ ಫಾದರ್ ಮುಲ್ಲರ್ ವೈದ್ಯರ ತಂಡ…!

ಬಂಟ್ವಾಳ: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ..!

ಮಂಗಳೂರು: ಖಾಸಗಿ ಬಸ್- ಆಟೋ ನಡುವೆ ಮುಖಾಮುಖಿ ಡಿಕ್ಕಿ; ಮೂವರಿಗೆ ಗಾಯ..!

ಚಿಕ್ಕಬಳ್ಳಾಪುರ: ಹಣ ಮತ್ತು ಚಿನ್ನಾಭರಣಕ್ಕಾಗಿ ಚಿಕ್ಕಮ್ಮನ ಕೊಲೆ…!

ವಿಶಾಖಪಟ್ಟಣ: ಪಾರ್ಟಿಗೆ ತೆರಳಿದ್ದ ಯುವತಿ ಲಾಡ್ಜ್ ನಲ್ಲಿ ಶ*ವವಾಗಿ ಪತ್ತೆ..!

ಮಂಗಳೂರು: ಎ.20ರಂದು ಐಸಿಡಿಎಸ್ 50ರ ಸುವರ್ಣ ಸಂಭ್ರಮ ಮತ್ತು ಜಿಲ್ಲಾ ಸಮಾವೇಶ….!

ಮಂಗಳೂರು: ಶಕ್ತಿನಗರದ ಹೇಮಂತ್ ಚಮಗಾರರಿಗೆ ಸೇರಿದ ಮನೆಯಲ್ಲಿ ಬೆಂಕಿ ಅವಘಡ..!

ಬಂಟ್ವಾಳ: ಕೆಎಸ್.ಆರ್.ಟಿ.ಸಿ. ಬಸ್ ,ಬೈಕ್ ಮತ್ತು ಗೂಡ್ಸ್ ರಿಕ್ಷಾಗಳ ನಡುವೆ ಸರಣಿ ಅಪ*ಘಾತ….!

ಮಂಜೇಶ್ವರ: ಏ. 19ರಂದು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ವೈದ್ಯಕೀಯ & ರಕ್ತದಾನ ಶಿಬಿರ..!

error: Content is protected !!