ಜನ ಮನದ ನಾಡಿ ಮಿಡಿತ

ಇತ್ತೀಚಿನ ಸುದ್ದಿ
ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…! ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು. ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆ…! ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳ ಅವಲೋಕನ ನಡೆಸಿದರು. ಸೂರಿಕುಮೇರು: ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಪಿಕಪ್ ವಾಹನ ಡಿ*ಕ್ಕಿ..! ಉಡುಪಿ: ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕನ ಬಂಧನ…!
Advertisement

ಉಡುಪಿಯ ಖ್ಯಾತ ಮಧುಮೇಹ ತಜ್ಞೆ ಡಾ. ಶೃತಿ ಬಲ್ಲಾಳ್‌ ಗೆ ಪ್ರತಿಷ್ಠಿತ ಮಿಸೆಸ್‌ ಅರ್ಥ್ ಇಂಟರ್‌ನ್ಯಾಶನಲ್‌ ಟೂರಿಸಂ -2024 ಅವಾರ್ಡ್

ಉಡುಪಿ: ಉಡುಪಿಯ ಖ್ಯಾತ ಮಧುಮೇಹ ತಜ್ಞೆ ಡಾ. ಶೃತಿ ಬಲ್ಲಾಳ್‌ ಅವರು ಫಿಲಿಫೈನ್ಸ್‌ನ ಮನಿಲಾದಲ್ಲಿ ನಡೆದ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರತಿಷ್ಠಿತ ಮಿಸೆಸ್‌ ಅರ್ಥ್ ಇಂಟರ್‌ನ್ಯಾಶನಲ್‌ ಟೂರಿಸಂ -2024 ಕಿರೀಟ ಗೆದ್ದುಕೊಂಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಶೃತಿ ಸ್ವತಃ ತಮ್ಮ ಅನುಭವ ಹಂಚಿಕೊಂಡರು.ಮಂಗಳೂರಿನ ಪಾತ್‌ವೇ ಎಂಟರ್‌ಪ್ರೈಸಸ್‌ನಿಂದ ಸೌಂದರ್ಯ ಸ್ಪರ್ಧೆಗೆ ತಾವು ಕಾಲಿಟ್ಟಿದ್ದು, ಮಂಗಳೂರು ವಲಯ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿಯನ್ನು ಗೆದ್ದುಕೊಂಡೆ. ನಂತರ ಬೆಂಗಳೂರಿನಲ್ಲಿ ಆಗಸ್ಟ್‌ ತಿಂಗಳಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಮಿಸೆಸ್‌ ಇಂಡಿಯಾ ಅರ್ತ್‌ ಇಂಟರ್‌ನ್ಯಾಶನಲ್ ಪ್ರಶಸ್ತಿಯನ್ನು ಗೆದ್ದು, ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾದೆ.ಆ ಬಳಿಕ ಮನಿಲಾದಲ್ಲಿ ನಡೆದ ಅಂತರಾಷ್ಟ್ರೀಯ ಸ್ಪರ್ಧೆಯು ಬಹಳ ಸವಾಲಿನದ್ದಾಗಿತ್ತು. ಇಲ್ಲಿ 10 ದಿನಗಳ ಕಾಲ ನಡೆದ ಸೌಂದರ್ಯದ ಜೊತೆಗೆ ಬುದ್ದಿಮತ್ತೆ, ದಯೆ, ಪರಿಸರದ ಬಗ್ಗೆ ತೋರಿದ ಬದ್ದತೆಯು ಜ್ಯೂರಿಗಳ ಗಮನ ಸೆಳೆದು ಈ ಪ್ರಶಸ್ತಿಯನ್ನು ಗೆದ್ದುಕೊಂಡೆ ಎಂದರು.

ಈ ಪ್ರಶಸ್ತಿಯೊಂದಿಗೆ ತನ್ನನ್ನು 5 ದೇಶಗಳಲ್ಲಿ ಪರಿಸರದ ಬಗ್ಗೆ ಜಾಗೃತಿಗಾಗಿ ಕೆಲಸ ಮಾಡಲು ಆಯ್ಕೆ ಮಾಡಲಾಗಿದೆ ಎಂದವರು ಸಂತಸ ವ್ಯಕ್ತಪಡಿಸಿದರು.

ಈ ಅಂತರಾಷ್ಟ್ರೀಯ ಸ್ಪರ್ಧೆಗೆ ತನ್ನನ್ನು ಆಸ್ಟ್ರಲ್‌ ಮಿಸೆಸ್‌ ಇಂಡಿಯಾದ ಕರ್ನಾಟಕ ನಿರ್ದೇಶಕಿ ಪ್ರತಿಭಾ ಸೌನ್ಶಿಮಠ್‌ ಅವರು ಮಾರ್ಗದರ್ಶನ ಮಾಡಿದ್ದರು ಎಂದು ಕೃತಜ್ಞತೆ ಸಲ್ಲಿಸಿದರು.ಸುದ್ದಿಗೋಷ್ಠಿಯಲ್ಲಿ ಪಾತ್‌ವೇ ಎಂಟರ್‌ಪ್ರೈಸಸ್‌ನ ದೀಪಕ್ ಗಂಗೂಲಿ ಮತ್ತು ಮರ್ಸಿ ಬ್ಯೂಟಿ ಅಕಾಡೆಮಿಯ ವೀಣಾ ಡಿಸೋಜ, ಅನಿಷಾ ಮತ್ತು ವಿನ್ಸೆಂಟ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆ…!

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳ ಅವಲೋಕನ ನಡೆಸಿದರು.

ಸೂರಿಕುಮೇರು: ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಪಿಕಪ್ ವಾಹನ ಡಿ*ಕ್ಕಿ..!

ಉಡುಪಿ: ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕನ ಬಂಧನ…!

ಉಡುಪಿ: ನಾವುಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರು ಮತ್ತು ಟ್ರಕ್ ನಡುವೆ ಭೀಕರ ಅಪಘಾತ….!

ಪುಂಜಾಲಕಟ್ಟೆ: ಪುಂಜಾಲಕಟ್ಟೆಯ ಬಸವನಗುಡಿ ಎಂಬಲ್ಲಿ ಸ್ಕೂಟರ್‌ಗೆ ಕೆ.ಎಸ್ ಆರ್ ಟಿಸಿ ಬಸ್ ಡಿ*ಕ್ಕಿ….!

ನಾಟೇಕಲ್: ಮನೆ ಗೋಡೆಗೆ ಹಾರಿ ಬಡಿದ ಕಾರು; ಪಾರಾದ ಪ್ರಯಾಣಿಕರು….!

error: Content is protected !!