ಜನ ಮನದ ನಾಡಿ ಮಿಡಿತ

Advertisement

ಚಾಲಕನ‌ ನಿಯಂತ್ರಣ ತಪ್ಪಿ ಟೆಂಪೋ ಟ್ರಾವೆಲ್ ವಾಹನವೊಂದು ರಾ.ಹೆ ಮಂಗಳೂರು ‌ಬೆಂಗಳೂರು ಹೆದ್ದಾರಿಯ ಫರಂಗಿಪೇಟೆ ಎಂಬಲ್ಲಿ ಪಲ್ಟಿ..!

ಬಂಟ್ವಾಳ: ಚಾಲಕನ‌ ನಿಯಂತ್ರಣ ತಪ್ಪಿ ಟೆಂಪೋ ಟ್ರಾವೆಲ್ ವಾಹನವೊಂದು ರಾಷ್ಟ್ರೀಯ ಹೆದ್ದಾರಿ ಮಂಗಳೂರು ‌ಬೆಂಗಳೂರು ಹೆದ್ದಾರಿಯ ಫರಂಗಿಪೇಟೆ ಎಂಬಲ್ಲಿ ಪಲ್ಟಿಯಾಗಿದೆ.

 


ಬೆಂಗಳೂರಿನಿಂದ ಮಂಗಳೂರು ‌ಕಡೆಗೆ ಬರುತ್ತಿರುವ ಟಿ.ಟಿ.ವಾಹನ ಬೆಳಿಗ್ಗೆ 6.30 ರ ಅಂದಾಜಿಗೆ ಫರಂಗಿಪೇಟೆ ಜಂಕ್ಷನ್‌ ನಲ್ಲಿ ಡಿವೈಡರ್ ಮೇಲೆ ಏರಿ ಬಳಿಕ ಹೆದ್ದಾರಿಗೆ ಪಲ್ಟಿಯಾಗಿದೆ.
ಟಿ.ಟಿ.ಯಲ್ಲಿ ಸುಮಾರು ‌10 ಮಂದಿ ಪ್ರಯಾಣಿಕರಿದ್ದು,ಯಾವುದೇ ಪ್ರಾಣಾಯಾವಿಲ್ಲದೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
‌ಮಂಗಳೂರಿನಲ್ಲಿ ನಡೆಯುವ ಮದುವೆ ಕಾರ್ಯಕ್ರಮವೊಂದಕ್ಕೆ ಸ್ಟೇಜ್ ಡೆಕೋರೇಶನ್ ನ ಗುತ್ತಿಗೆ ವಹಿಸಿಕೊಂಡ ಬೆಂಗಳೂರಿನ ಇವೆಂಟ್ ನ ಮಾಲಕ ಡೆಕೋರೇಶನ್ ಸಾಮಾಗ್ರಿಗಳ ಜೊತೆ ಬರುತ್ತಿರುವ ವೇಳೆ ಘಟನೆ ‌ನಡೆದಿದೆ.
ಟಿ.ಟಿ.ಯಲ್ಲಿ ಪ್ತಯಾಣಿಸುತ್ತಿದ್ದವರ ಸರಿಯಾದ ಮಾಹಿತಿ ಲಭ್ಯವಾಗಿಲ್ಲ.
ಬೆಳಿಗ್ಗಿನ ಹೊತ್ತು ಚಾಲಕ ನಿದ್ಧೆ ಮಂಪರಿನಲ್ಲಿ ನಿಯಂತ್ರಣ ‌ಕಳೆದು ಡಿವೈಡರ್ ನ ಮೇಲೆ ಹತ್ತಿ ಬಳಿಕ ಪಲ್ಟಿಯಾಗಿದೆ ಎಂದು ಹೇಳಲಾಗಿದೆ. ಯಾವುದೇ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಡೆಕೋರೇಶನ್ ಸಾಮಾಗ್ರಿಗಳು ಚೆಲ್ಲಾಪಿಲ್ಲಿಯಾಗಿವೆ. ಘಟನೆಯಿಂದ ಕೆಲಹೊತ್ತು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು
ಸ್ಥಳಕ್ಕೆ ಪಾಣೆಮಂಗಳೂರು ಟ್ರಾಫಿಕ್ ಪೋಲೀಸರು ಬೇಟಿ ನೀಡಿದ್ದಾರೆ

Leave a Reply

Your email address will not be published. Required fields are marked *

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಭರ್ಜರಿ ಡ್ರಗ್ಸ್ ಬೇಟೆ: ₹3 ಸಾವಿರ ಕೋಟಿ ಮೌಲ್ಯದ ಮಾದಕವಸ್ತು ವಶ..!

ಮಂಗಳೂರು: MRPL ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭೇಟಿ; ಪರಿಸ್ಥಿತಿ ಪರಿಶೀಲನೆ..!

ಬಂಟ್ವಾಳ: ಮಂಗಳೂರು ರೈಲು ಪ್ರದೇಶ ಮೈಸೂರು ವಿಭಾಗಕ್ಕೆ: ಪ್ರಮುಖ ನಿಲ್ದಾಣಗಳಿಗೆ ಅಧಿಕಾರಿಗಳ ಭೇಟಿ.

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಶಾಲಾ ಸಮಯ ಬದಲಾವಣೆಗೆ ಚಿಂತನೆ.

ಉಡುಪಿ: ಶಂಕರಪುರ ಮಠದಲ್ಲಿ ಅ.3, 4ರಂದು ಸಾಯಿ ಈಶ್ವರ್ ಗುರೂಜಿ ಪಂಚಾಶತ್ ಜನ್ಮ ವೈಭವ…!

ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ವಿತರಣೆ ಆರೋಪ; ಅಧಿಕಾರಿಗಳಿಂದ ವಿಚಾರಣೆ

ನವದೆಹಲಿ: ಮೋದಿ–ಟ್ರಂಪ್ ದೂರವಾಣಿ ಮಾತುಕತೆ: ವ್ಯಾಪಾರ, ರಕ್ಷಣೆ, ಇಂಧನ ಸಹಕಾರದ ಕುರಿತು ಚರ್ಚೆ

ಮಂಗಳೂರು: ಮಂಗಳೂರು ರೈಲು ಪ್ರದೇಶ ಇಂದಿನಿಂದ ಮೈಸೂರು ವಿಭಾಗದ ಅಧೀನಕ್ಕೆ…!

ದುಬೈ: ಫ್ಲೈದುಬೈ ವಿಮಾನದಲ್ಲಿ ಕಾಕ್‌ಪಿಟ್ ಘಟನೆ: ಸಹ ಪೈಲಟ್‌ನ ಯತ್ನ ತಡೆದ ಭಾರತೀಯ ಪೈಲಟ್…!

error: Content is protected !!