ಜನ ಮನದ ನಾಡಿ ಮಿಡಿತ

Advertisement

35 ಅರ್ಹ ವಿಕಲಾಂಗರಿಗೆ ಕೃತಕ ಅಂಗಗಳನ್ನು ವಿತರಿಸುವ ಕಾರ್ಯಕ್ರಮ

ಮಂಗಳೂರು : ಲಯನ್ಸ್ ಜಿಲ್ಲೆ 317D ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿನ ಲಯನ್ಸ್ ಲಿಂಬ್ ಸೆಂಟರ್ ಸಹಯೋಗದಲ್ಲಿ 2024 – 25 ನೇ ಸಾಲಿನ ಲಯನ್ಸ್‌ ವರ್ಷದ ಲಯನ್ಸ್‌ ಜಿಲ್ಲಾ ಯೋಜನೆ ಅಡಿಯಲ್ಲಿ 35 ಅರ್ಹ ವಿಕಾಲಾಂಗರಿಗೆ ಕೃತಕ ಅಂಗಗಳನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ವಿಶೇಷ ಯೋಜನೆಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅರ್ಹ ವಿಕಲಾಂಗರಿಗೆ ಮೀಸಲಾಗಿದ್ದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಶೀಘ್ರವೇ ವಿತರಿಸಲಾಗುವುದು, ಫಲಾನುಭವಿಗಳಿಂದ ಅರ್ಜಿಯನ್ನು ಸ್ವೀಕರಿಸುವ ಕಾರ್ಯ ಶುರುವಾಗಿದೆ ಎಂದು ಲಯನ್ಸ್ ಲಿಂಬ್ ಸೆಂಟರ್ ನ ನಿರ್ದೇಶಕರಾಗಿರುವ ಡಾ. ಎಂ. ಶಾಂತರಾಮ್ ಶೆಟ್ಟಿ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಪಘಾತದಲ್ಲಿ ಅಂಗವಿಕಲರಾಗಿರುವವರಿಗೆ ಕೃತಕ ಕಾಲಿನ ಜೋಡಣೆಯ ಪ್ರಕ್ರಿಯೆಯನ್ನು ನಡೆಸಲಾಗುವುದು . ಈ ರೀತಿಯ ಕೃತಕ ಕಾಲುಗಳು ಸಂಪೂರ್ಣ ಸ್ಟೀಲ್ ಲೋಹದಿಂದ ಮಾಡಲ್ಪಟ್ಟಿರುತಗತವೆ, ಒಂದು ಕೃತಕ ಕಾಲಿಗೆ ಅಂದಾಜು ೨. ೫ ಲಕ್ಷ ರೂ ವೆಚ್ಚ ತಗುಲುತ್ತದೆ . ಈ ವೆಚ್ಚವನ್ನು ಲಯನ್ಸ್ ಸಂಸ್ಥೆಯೇ ಖುದ್ದು ಭರಿಸಲಿದೆ ಎಂದರು. ಜೊತೆಗೆ ಯಾವ ರೀತಿಯಾಗಿ ನಡೆದಾಡ ಬೇಕು ಎನ್ನುವ ತರಬೇತಿಯನ್ನು ನಮ್ಮ ಸಂಸ್ಥೆಯವರು ನೀಡುತ್ತಾರೆ . ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ನಿಯಮದಂತೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಜಿಲ್ಲೆ 317 ಡಿ ಯ ಭಾರತಿ ಬಿ ಎಂ , ಸುರೇಶ್ ಶೆಟ್ಟಿ , ವಸಂತ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಂಜುನಾಥ್ ಶೆಟ್ಟಿ ದಂಪತಿಗೆ ಸನ್ಮಾನ

ಉಡುಪಿ: ಕರಾವಳಿ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ…!

ಬಂಟ್ವಾಳ: ಮಾಣಿ ಸಮೀಪ ಜೋಗಿಬೆಟ್ಟು ರಸ್ತೆ ಕೆರೆಯಂತಾದ ದೃಶ್ಯ….!

ವಾಷಿಂಗ್ಟನ್: ಉತ್ತರ ಅಮೆರಿಕಾ ಬಂಟರ ಸಂಘದ `ದಿಬ್ಬಣ’ ಮಹಾ ಅಧಿವೇಶನ..!

ಮಂಗಳೂರು: ಮಂಗಳೂರಿನಲ್ಲಿ ಎಐ ಸಿ.ಸಿ ಕ್ಯಾಮರಾಗಳ ಅಳವಡಿಕೆ….!

ಬಂಟ್ವಾಳ: ಮಳೆ ಅನಾಹುತ: ರಾಯಿಯ ಜೀವನ್ ಪಿಂಟೋ ಮೃತದೇಹ ಪ*ತ್ತೆ…..!

ಬಂಟ್ವಾಳದಲ್ಲಿ ಮಳೆ ಅವಾಂತರ; ಮರ ಬಿದ್ದು ಸ್ಥಳೀಯರ ಪರದಾಟ

ಶ್ರೀಲಂಕಾ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾಗೆ ಆಕಿಬ್ ನಬಿ ಎಂಟ್ರಿ

ಬಿಹಾರದ ಸಹರ್ಸಾದಲ್ಲಿ ರೈಲು ಅಗ್ನಿ ಅವಘಡ; ತಪ್ಪಿದ ಭಾರೀ ಅನಾಹುತ

error: Content is protected !!