ಜನ ಮನದ ನಾಡಿ ಮಿಡಿತ

Advertisement

ಕಲೆಗೂ ಸೈ, ಕಲಿಕೆಗೂ ಸೈ ಕಲಾ ಚೇತನ ದೀಕ್ಷಾ ಎನ್ ಕಲ್ಮಾಡಿ

ಕಲಾವಲ್ಲಭೆ, ಕಲಾ ಜಗತ್ತಿನಲ್ಲಿ ಚಿಕ್ಕದಾಗಿ ಮೊಳಕೆ ಒಡೆದು ಉತ್ತಮ ಕಲಾವಿದೆಯಾಗಿ ಮಿಂಚುತ್ತಿರುವ ತುಳುನಾಡಿನ ಪ್ರತಿಭೆ ದೀಕ್ಷ ಎನ್ ಕಲ್ಮಾಡಿ. ಇವರು ನವೀನ್ ಕಲ್ಮಾಡಿ ಮತ್ತು ಉಷಾ ನವೀನ್ ದಂಪತಿಗಳ ಅಕ್ಕರೆಯ ಸಕ್ಕರೆಯ ಕುಮಾರಿ. ಇದೀಗ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೇವಲ ವ್ಯಾಸಂಗಕ್ಕೆ ಮಾತ್ರ ತನ್ನ ಸಮಯವನ್ನು ಮೀಸಲಿಡದೆ ಕಲಾ ಆರಾಧನೆಯಲ್ಲಿ ತನ್ನನ್ನು ತಾನು ಅರ್ಪಿಸಿಕೊಂಡು ಎರಡನ್ನೂ ಸಮ ಪ್ರಮಾಣದಲ್ಲಿ ಕೊಂಡುಹೋಗುತ್ತಿದ್ದು, ಎರಡರಲ್ಲೂ ಯಶಸ್ಸನ್ನು ಕಾಣುತ್ತಿದ್ದಾರೆ.

ಸಂಗೀತ,ಭರತನಾಟ್ಯ,ನಟನೆ ಹಾಗೂ ಮೊಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಯನ್ನು ಮಾಡುವ ಅಭಿಲಾಷೆ ಈ ಕುಮಾರಿಗೆ . ಅದಕ್ಕೆ ಕೈಗನ್ನಡಿಯನ್ನು ಹಿಡಿಯುವಂತೆ ಸಾಕಷ್ಟು ಮುಖ್ಯ ವೇದಿಕೆಯಲ್ಲಿ ತನ್ನ ಪ್ರತಿಭಾ ಕೌಶಲ್ಯ ಈಗಾಗಲೇ ಪ್ರದರ್ಶನ ಮಾಡಿರುತ್ತಾರೆ.

ಅಭಿಮತ ವಾಹಿನಿ ಸೇರಿದಂತೆ ಹಲವು ಟೆಲಿವಿಷನ್ ಚಾನೆಲ್ಗಳಲ್ಲಿ ಕಾರ್ಯಕ್ರಮ ನೀಡುತ್ತಾ ಬಂದಿರುತ್ತಾರೆ. ನಮ್ಮ ವಾಯ್ಸ್ ಆಫ್ ಆರಾಧನಾ ಕಾರ್ಯಕ್ರಮ ಸೇರಿದಂತೆ 100ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಭರತನಾಟ್ಯವನ್ನು ಡಾಕ್ಟರ್ ವಿದುಷಿ ಮಂಜರಿ ಚಂದ್ರ ಪುಷ್ಪರಾಜ್ ಬಳಿ ಕರಗತ ಮಾಡಿದರೆ , ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮಧೂರು ಪಿ ಬಾಲಸುಬ್ರಮಣ್ಯಂ ಹಾಗೂ ಸುಗಮ ಸಂಗೀತವನ್ನು ಚಂದ್ರಶೇಖರ್ ಸರ್ ಹಾಗೂ ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಸ್ಟುಡಿಯೋದಲ್ಲಿ ಕಂಠಾಭ್ಯಾಸವನ್ನು ಮಾಡುತ್ತಿದ್ದಾರೆ.


ಇನ್ನು ಮಾಡಲಿಂಗ್ ಕ್ಷೇತ್ರದಲ್ಲೂ ಆಸಕ್ತಿಯನ್ನು ಹೊಂದಿರುವ ಇವರು ಈಗಾಗಲೇ ಚಾಂಪಿಯನ್ಸ್ ಫ್ಯಾಷನ್ ಶೋ ಹಾಗೂ ಕೋಸ್ಟಲ್ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ . ಬೆಳ್ಳಿ ತೆರೆಯ ಮೇಲೂ ಮಿಂಚಲು ರೆಡಿಯಾದ ದೀಕ್ಷಾ ಸ್ಕೂಲ್ ಲೀಡರ್ ಚಲನಚಿತ್ರದಲ್ಲಿ ಈಗಾಗಲೇ ಅಭಿನಯಿಸಿರುತ್ತಾರೆ. ಭರತನಾಟ್ಯ ಜೂನಿಯರ್ ಪರೀಕ್ಷೆ ಮತ್ತು ಡ್ರಾಯಿಂಗ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನೊಂದಿಗೆ ತೇರ್ಗಡೆ ಹೊಂದಿರುತ್ತಾರೆ .

ಇವರು ಹಲವಾರು ಪ್ರಶಸ್ತಿಗಳನ್ನು ಇದಾಗಲೇ ಮುಡಿಗೇರಿಸಿ ಕೊಂಡಿದ್ದಾರೆ. ಅವುಗಳೆಂದರೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸೇವರತ್ನ ಪ್ರಶಸ್ತಿ, ಜನಸ್ಪಂದನ ಕಲಾಸಿರಿ ರತ್ನ ಪ್ರಶಸ್ತಿ, ರಾಜ್ಯ ಮಟ್ಟದ ಗಾನ ಕೋಗಿಲೆ ಪ್ರಶಸ್ತಿ, ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಲಭೂಮಿ ರಾಜ್ಯೋತ್ಸವ ಪ್ರಶಸ್ತಿ, ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಹಾಗು ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಮೂಲಕ ನಮ್ಮ ಸಮಾಜ ಹೆಮ್ಮೆ ಪಡುವ ಕಲಾ ಆರಾಧಕಿಯಾಗಿ , ಕಲಿಕೆಯಲ್ಲಿ ಸಾಧಕಿಯಾಗಿ , ಸರಸ್ವತಿ ಸೇವಕಿಯಾಗಿ ತೌಳವ ಮಾತೆ ನೆಲೆಯೂರಿದ ಈ ಮಣ್ಣ ಹಿರಿಮೆಯನ್ನು ಇನ್ನಷ್ಟು ಉನ್ನತಿಗೆ ಕೊಡುಹೋಗುವ ರಾಯಭಾರ ಈ ಬಾಲಕಿಯ ಮೇಲಿದೆ .

Leave a Reply

Your email address will not be published. Required fields are marked *

ಸುಳ್ಯ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಸುಳ್ಯ ಪೊಲೀಸರ ವಶಕ್ಕೆ…!

ಕಾಸರಗೋಡು: ಮುಗುರೋಡ್‌ನಲ್ಲಿ ಕಾರು-ಬೈಕ್ ಅಪಘಾತ: ಬೈಕ್ ಸವಾರ ಸಾವು, ಪತ್ನಿಗೆ ಗಂಭೀರ ಗಾಯ..!

ಸುಳ್ಯ: ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ: ಇಬ್ಬರು ಆರೋಪಿಗಳ ಬಂಧನ…!

ಉಡುಪಿ: ಉಡುಪಿಯಲ್ಲಿ ಅ.23ರಿಂದ ‘ನಡಿಗೆ’ ಸಾಮಾಜಿಕ ಅಭಿಯಾನ; ಬಡ ಮಕ್ಕಳಿಗೆ ಪಾದರಕ್ಷೆ ವಿತರಣೆ

ಮಂಗಳೂರು: ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಛತಾ ಶ್ರಮದಾನ

ಉಡುಪಿ: ಉಡುಪಿಯಲ್ಲಿ ಬಿಸಿಲಿನ ಝಳ ಹೆಚ್ಚಳ; ನದಿಗಳ ನೀರಿನ ಮಟ್ಟ ಕುಸಿತ, ನೀರಿನ ಕೊರತೆಯ ಆತಂಕ..!

ನವದೆಹಲಿ, ಅ.2: ಗಾಂಧಿ ಜಯಂತಿ- ರಾಜಘಾಟ್‌ನಲ್ಲಿ ಗಾಂಧೀಜಿಗೆ ಪ್ರಧಾನಿ ಮೋದಿ ಪುಷ್ಪ ನಮನ

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಭರ್ಜರಿ ಡ್ರಗ್ಸ್ ಬೇಟೆ: ₹3 ಸಾವಿರ ಕೋಟಿ ಮೌಲ್ಯದ ಮಾದಕವಸ್ತು ವಶ..!

ಮಂಗಳೂರು: MRPL ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭೇಟಿ; ಪರಿಸ್ಥಿತಿ ಪರಿಶೀಲನೆ..!

error: Content is protected !!