ಜನ ಮನದ ನಾಡಿ ಮಿಡಿತ

Advertisement

ಎಡಕ್ಕಾನ ರಾಜಾರಾಂ ಭಟ್ ಹೃದಯಾಘಾತದಿಂದ ನಿಧನ

ಪುತ್ತೂರು: ಉದ್ಯಮಿ ಹಾಗೂ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಅರುಣ್ ಕುಮಾ‌ರ್ ಅವರ ಪುತ್ತಿಲ ಪರಿವಾರದಲ್ಲಿ ಪ್ರಧಾನವಾಗಿ ಗುರುತಿಸಿಕೊಂಡಿದ್ದ ಎಡಕ್ಕಾನ ರಾಜಾರಾಮ ಭಟ್ ರವರು ಇಂದು ಮುಂಜಾನೆ ದುಬೈಯಲ್ಲಿ ಹೃದಯಾಘಾತದಿಂದ ನಿಧನಾರಾದರೆಂದು ತಿಳಿದುಬಂದಿದೆ.

ಸುಳ್ಯದ ಕಲ್ಮಡ್ಕ ಗ್ರಾಮದ ಶೆಟ್ಟಿಗದ್ದೆ ಎಂಬಲ್ಲಿಯ ನಿವಾಸಿಯಾದ ರಾಜಾರಾಮ ಭಟ್ ರು ಎಡಕ್ಕಾನ ಟ್ರೇಡರ್ಸ್ ಎಂಬ ವ್ಯಾಪಾರ ಮಳಿಗೆಯನ್ನು ಹೊಂದಿದ್ದರಲ್ಲದೆ, ದುಬೈ, ಮಸ್ಕತ್ ಗಳಲ್ಲಿ ಖರ್ಜೂರದ ವ್ಯಾಪಾರ ಕೂಡ ಹೊಂದಿದ್ದರು. ವ್ಯವಹಾರದ ನಿಮಿತ್ತ ಕೆಲದಿನಗಳ ಹಿಂದೆ ದುಬೈಗೆ ಹೋಗಿದ್ದ ಅವರು ಅಲ್ಲಿ ಇಂದು ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭ ಅರುಣ್ ಕುಮಾರ್ ಪುತ್ತಿಲ ಬಿ.ಜೆ.ಪಿ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವಲ್ಲಿ ಎಡಕ್ಕಾನ ರಾಜಾರಾಮರು ಪ್ರಧಾನ ಪಾತ್ರ ವಹಿಸಿದ್ದರು. ಚುನಾವಣೆ ಕಳೆದು ಒಂದು ವರ್ಷದ ಬಳಿಕ ಪುತ್ತಿಲರೊಂದಿಗೆ ಭಿನ್ನಾಭಿಪ್ರಾಯ ಬಂದು ಅವರು ಪುತ್ತಿಲ ಪರಿವಾರ ತೊರೆದಿದ್ದರಲ್ಲದೆ, ಪುತ್ತಿಲರ ವಿರುದ್ಧ ಕೇಸು ಆಗುವುದರಲ್ಲೂ ಪಾತ್ರ ವಹಿಸಿದ್ದರು.

ಈ ಹಿಂದೆಯೂ ಒಮ್ಮೆ ಹೃದಯಾಘಾತಕ್ಕೊಳಗಾಗಿದ್ದರು.

Leave a Reply

Your email address will not be published. Required fields are marked *

ಆಂಧ್ರಪದೇಶದಲ್ಲಿ ಫ್ಲೋರ್ ಮಾಸ್ಟರ್ಸ್ ಮೊದಲ ಫ್ಲಾಟ್ ಬ್ರೆಡ್ ಸ್ಥಾವರ; ರೂ. 100 ಕೋಟಿ ಹೂಡಿಕೆ, ರಫ್ತು ಆಧಾರಿತ ಉದ್ಯಮ..!

ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಬಳಿ ಬಸ್-ಕಾರು ಡಿಕ್ಕಿ; ಮಕ್ಕಳಿದ್ದ ಕಾರು ಅಪಾಯದಿಂದ ಪಾರು

ನ್ಯೂಯಾರ್ಕ್: ಅಮೆರಿಕ-ಇರಾನ್ ಮಿಲಿಟರಿ ವಿರಾಮದ ಪರಿಣಾಮ; ಕಚ್ಚಾ ತೈಲ ಬೆಲೆ ಇಳಿಕೆ, ಹಣದುಬ್ಬರಕ್ಕೂ ಬ್ರೇಕ್?

ನವದೆಹಲಿ: ಜಿರಳೆ ಹೋರಾಟಕ್ಕೆ ಕೊನೆಗೂ ಮಣಿದ ಕೇಂದ್ರ ಸರಕಾರ; ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ…!

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ಭೀಕರ ದಾಳಿ…!

ಬಂಟ್ವಾಳ: ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಆರೋಗ್ಯದಲ್ಲಿ ಸುಧಾರಣೆ..!

ಬಂಟ್ವಾಳ: ತ್ಯಾಜ್ಯ ನಿರ್ವಹಣೆ ಸಂಪೂರ್ಣ ಹದಗೆಟ್ಟು ಸಾರ್ವಜನಿಕರಲ್ಲಿ ಆತಂಕ..!

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

error: Content is protected !!