ರಸ್ತೆ ಬದಿ ನಿಂತ್ತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 6 ಜನರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸಂಭವಿಸಿದೆ. ಕಾರಿನಲ್ಲಿದ್ದ ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬ್ಯಾಡಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮೃತರನ್ನು ಹರಿಹರ ನಿವಾಸಿ ಫರಾನ್ (27), ರಾಣೆಬೆನ್ನೂರು ನಿವಾಸಿ ಎಮ್ಮಿಶಿಪಾ (16), ಗೋವಾದ ಪಣಜಿ ನಿವಾಸಿಗಳಾದ ಅಲಿಷಾ (20), ಪುಲಖಾನ್ (17) ಎಂದು ಗುರ್ತಿಸಲಾಗಿದೆ. ತಷ್ಕಿನ್ ರಾಣೆಬೆನ್ನೂರು, ಪಿರೋಜ್ ಗಾಯಗೊಂಡವರು.



