ಜನ ಮನದ ನಾಡಿ ಮಿಡಿತ

Advertisement

ಚಿಕ್ಕೋಡಿ: ಮದುವೆ ಆದ ಮೂರೇ ದಿನಕ್ಕೆ ದೇಶ ಕಾಯಲು ಪತಿಯನ್ನು ಕಳುಹಿಸಿದ ಪತ್ನಿ

ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಹೊತ್ತಲ್ಲಿ ಮದುವೆಯಾದ ಮೂರೇ ದಿನಕ್ಕೆ ಸೈನಿಕರೊಬ್ಬರು ದೇಶ ಸೇವೆಗೆ ವಾಪಸ್ ತೆರಳಿದ್ದಾರೆ.

ಹೌದು, ಮಹಾರಾಷ್ಟ್ರದ ಜಳಗಾಂವ್‌ನ ಪಾಚೋರಾದ ಯೋಧ ಮನೋಜ್ ಪಾಟೀಲ್ ಮದುವೆ ಇದೇ ಮೇಲೆ 5ರಂದು ಅದ್ದೂರಿಯಾಗಿ ನೆರವೇರಿತು. ಇತ್ತ ಮನೆಯಲ್ಲಿ ಮದುವೆ ಸಂಭ್ರಮ ಮನೆಮಾಡಿದ್ರೆ, ಅತ್ತ ಭಾರತ-ಪಾಕ್ ಗಡಿಯಲ್ಲಿ ಆಕ್ರಮಣಕಾರಿ ದಾಳಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮನೋಜ್ ಕುಮಾರ್‌ಗೆ ತುರ್ತಾಗಿ ಸೇನೆಯಿಂದ ಕರೆ ಬಂದಿದೆ. ಮಹಾರಾಷ್ಟ್ರದ ಮನೋಜ್ ಪಾಟೀಲ್ ಹಾಗೂ ನಾಚಂಖೇಡೆಯ ರಾಮಚಂದ್ರ ಪಾಟೀಲ್ ಅವರ ಪುತ್ರಿ ಯಾಮಿನಿ ಅವರಿಗೆ ಮೇ.5 ರಂದು ಅದ್ದೂರಿ ಮದುವೆ ನಿಶ್ಚಯವಾಗಿತ್ತು. ಇದರಿಂದಾಗಿ ಮನೋಜ್ ರಜೆ ಹಾಕಿ ಹಳ್ಳಿಗೆ ಬಂದಿದ್ರು. ಇತ್ತ ಮದುವೆ ಸಂಭ್ರಮದ ನಡುವೆಯೇ ಯೋಧ ಮನೋಜ್ ಪಾಟೀಲ್ ಅವರಿಗೆ ಸೇನೆಯಿಂದ ಕರೆ ಬಂದಿತ್ತು. ತುರ್ತಾಗಿ ಸೇನೆಯಲ್ಲಿ ಸೇರಿಕೊಳ್ಳುವಂತೆ ಸೂಚಿಸಲಾಗಿತ್ತು. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಯುದ್ಧದ ಆತಂಕ ಶುರುವಾಯಿತು.

ಇತ್ತ ಮದುವೆಯಾದ ಮೂರನೇ ದಿನ ಮಗನನ್ನ ಸೇನೆಗೆ ಕಳುಹಿಸಬೇಕಲ್ಲಾ ಎಂದು ಪೋಷಕರು ಚಿಂತಿತರಾಗಿದ್ರೆ, ಪತಿಯೊಂದಿಗೆ ಜೀವನದ ಸುಂದರ ಕನಸು ಕಂಡಿದ್ದ ಪತ್ನಿ ಯಾಮಿನಿ ಕಣ್ಣೀರಿಡುತ್ತಾ ಮೌನಕ್ಕೆ ಜಾರಿದ್ದರು. ಈ ವೇಳೆ ಮನೋಜ್ ಪಾಟೀಲ್ ಏನು ಮಾಡಲಾಗದೇ ಸೇನೆಗೆ ಹೊರಟು ನಿಂತ್ರೆ, ಯೋಧನ ಕೈ ಹಿಡಿದ ಸಂಗಾತಿ ಆತನಿಗೆ ಧೈರ್ಯ ತುಂಬುತ್ತಾ ನನಗೆ ದೇಶ ಸೇವೆ ಮುಖ್ಯ. ನನ್ನ ಕುಂಕುಮವನ್ನು ಗಡಿಗೆ ಕಳಿಸುತ್ತಿರುವುದು ನನಗೆ ಹೆಮ್ಮೆ ಇದೆ ಎಂದು ಕಣ್ಣೀರು ಹಾಕಿದ್ದಾರೆ. ಇದೀಗ ಮೇ.8ನೇ ತಾರೀಕು ಮನೋಜ್ ಪಾಟೀಲ್ ದೇಶ ಸೇವೆಗೆ ಹೊರಡುವ ಸಮಯ ಬಂದೇ ಬಿಟ್ಟಿತು. ಒಂದು ಕಡೆ ಮನೆಯವರು ಮದುವೆಯ ಮೂರನೇ ದಿನಕ್ಕೆ ಗಡಿಗೆ ಕಳುಹಿಸಲು ಇಷ್ಟವಿಲ್ಲದಿದ್ದರೂ,ದೇಶ ಸೇವೆಯೇ ಮುಖ್ಯ ಅಂತ ಮಗನ ಜೊತೆ ನಿಂತರು. ಇತ್ತ ಪತ್ನಿ ಕೂಡ ಗಂಡನಿಗೆ ಧೈರ್ಯ ಹೇಳುತ್ತಾ ರೈಲ್ವೇ ನಿಲ್ದಾಣದ ಕಡೆಗೆ ಹೊರಟು ಬಿಟ್ಟರು. ಯೋಧ ಮನೋಜ್ ಪಾಟೀಲ್ ಅರಿಶಿನ ಹಚ್ಚಿದ ದೇಹ, ಕೈಯಲ್ಲಿ ಮೆಹಂದಿಯೊAದಿಗೆ ಗಡಿಗೆ ದೇಶ ಸೇವೆಗೆ ಹೊರಟರು. ಈ ವೇಳೆ ಪತ್ನಿ ದೇಶ ಸೇವೆಗೆ ಹೊರಡುತ್ತಿರುವ ಪತಿಗೆ ಕಣ್ಣೀರ ವಿದಾಯ ಹೇಳಿದ್ದು, ಒಂದು ಕ್ಷಣ ಇಡೀ ರೈಲ್ವೇ ನಿಲ್ದಾಣವೇ ಕಣ್ಣೀರ ಕಡಲಲ್ಲಿ ಮುಳುಗಿತು.

Leave a Reply

Your email address will not be published. Required fields are marked *

ಉಡುಪಿ: ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…!

ಉಡುಪಿ: ಉಡುಪಿಯಲ್ಲಿ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ ಕಳವು: ಮುದ್ದಾಡಿ ಹಾಡಿಯಲ್ಲಿ ಪತ್ತೆ…!

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮಂಗಳೂರು ವಿವಿಯ 16 ಪಿಜಿ ಕೋರ್ಸ್‌ಗಳು ಸ್ಥಗಿತ.

ಮಂಗಳೂರು: ಮಂಗಳೂರು-ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೊಸ ಆಶಾಕಿರಣ

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಗಾಯಗೊಂಡಿದ್ದ ಚಾಲಕ ಸಾವು

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ-ಭೂಕುಸಿತಕ್ಕೆ 27 ಮಂದಿ ಬಲಿ; ನಾಲ್ವರು ನಾಪತ್ತೆ…!

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತ್ಯು…!

ಬಂಟ್ವಾಳ: ಮಾಣಿ ಭಾಗದಲ್ಲಿ ಮಾರ್ಗಸೂಚಿ ಫಲಕಗಳ ಕೊರತೆ: ವಾಹನ ಸವಾರರಿಗೆ ಗೊಂದಲ, ಅಪಘಾತದ ಆತಂಕ

ಬಂಟ್ವಾಳ: ಕಲ್ಲಡ್ಕ ಫ್ಲೈಓವರ್‌ನಲ್ಲಿ ದನ ಸಾಗಿಸುತ್ತಿದ್ದ ಲಾರಿ ತಡೆ: ಪೊಲೀಸರಿಂದ ವಾಹನ ವಶಕ್ಕೆ

error: Content is protected !!