18ನೇ ಆವೃತ್ತಿ ಐಪಿಎಲ್ ಪ್ಲೇ-ಆಫ್ ರೇಸ್ ಕೊನೆಗೊಂಡಿದೆ. ನಾಲ್ಕು ತಂಡಗಳಾದ ಆರ್‌ಸಿಬಿ, ಗುಜರಾತ್, ಮುಂಬೈ ಮತ್ತು ಪಂಜಾಬ್ ತಂಡಗಳು ನಾಕೌಟ್ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಪ್ಲೇ ಆಫ್ ಸ್ಥಾನ ಖಚಿತಗೊಂಡರೂ ಅಗ್ರ ಎರಡು ಸ್ಥಾನಗಳ ಪೈಪೋಟಿ ಮಾತ್ರ ಇನ್ನೂ ಕೊನೆಗೊಂಡಿಲ್ಲ. ನಾಲ್ಕನೇ ಸ್ಥಾನಿಯಾಗಿರುವ ಮುಂಬೈ ತಂಡಕ್ಕೂ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ಈ ಲೆಕ್ಕಾಚಾರದ ಮಾಹಿತಿ ಹೀಗಿದೆ.

ಸದ್ಯ ಗುಜರಾತ್ ಟೈಟಾನ್ಸ್(18) ಅಗ್ರಸ್ಥಾನದಲ್ಲಿದೆ. ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಲಾ 17 ಅಂಕದೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ. ಈ ಮೂರು ತಂಡಗಳಿಗಿಗೂ ಇನ್ನು ಎರಡು ಪಂದ್ಯಗಳು ಬಾಕಿ ಇದೆ. ಮುಂಬೈಗೆ ಉಳಿದಿರುವುದು ಒಂದು ಪಂದ್ಯ ಮಾತ್ರ. ಈ ಪಂದ್ಯ ಗೆದ್ದರೆ ತಂಡ 18 ಅಂಕ ಕಲೆಹಾಕಲಿದೆ. ಅಗ್ರ ಎರಡನೇ ಸ್ಥಾನ ಪಡೆಯಬೇಕಿದ್ದರೆ ಈ ಅಂಕ ಮಾತ್ರ ಸಾಕಾಗುದಿಲ್ಲ. ಇಲ್ಲಿಯೂ ಕೆಲವು ಲೆಕ್ಕಾಚಾರದ ಆಟವಿದೆ.
ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಪಂದ್ಯವನ್ನು ಗೆಲ್ಲಲೇ ಬೇಕು. ಜತೆಗೆ ಪ್ರಸ್ತುತ 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಗುಜರಾತ್ ತಂಡ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತನ್ನ ಕೊನೆಯ ಎರಡು ಪಂದ್ಯಗಳನ್ನು ಸೋಲಬೇಕು.
ಮತ್ತೊಂದೆಡೆ, 17 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಆರ್‌ಸಿಬಿ ತಂಡ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ವಿರುದ್ಧ ತನ್ನ ಉಳಿದ ಪಂದ್ಯಗಳನ್ನು ಸೋಲಬೇಕು. ಏತನ್ಮಧ್ಯೆ, 17 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್‌ಗೆ ಮುಂಬೈ ವಿರುದ್ಧ ಪಂದ್ಯವಿದೆ. ಇದರಲ್ಲಿ ಮುಂಬೈ ಗೆಲ್ಲಬೇಕು ಮತ್ತು ಪಂಜಾಬ್ ಡೆಲ್ಲಿ ವಿರುದ್ಧ ಸೋಲಬೇಕು. ಹೀಗಾದರೆ ಮಾತ್ರ ಮುಂಬೈಗೆ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ಆರ್‌ಸಿಬಿ ಮತ್ತು ಗುಜರಾತ್ ಎರಡು ಪಂದ್ಯಗಳ ಪೈಕಿ ಕನಿಷ್ಠ ಒಂದೊಂದು ಪಂದ್ಯ ಗೆದ್ದರೂ ಮುಂಬೈಗೆ ಅಗ್ರ ಎರಡು ಸ್ಥಾನ ಪಡೆಯಲು ಸಾಧ್ಯವಾಗುದಿಲ್ಲ.



