ಜನ ಮನದ ನಾಡಿ ಮಿಡಿತ

Advertisement

ಮುಂಬಯಿ: ಐಪಿಎಲ್ ಪ್ಲೇಆಫ್ ಗೆ ಎಂಟ್ರಿ ಕೊಟ್ಟ ಬ್ಲೂ ಆರ್ಮಿ

18ನೇ ಆವೃತ್ತಿ ಐಪಿಎಲ್‌ ಪ್ಲೇ-ಆಫ್‌ ರೇಸ್‌ ಕೊನೆಗೊಂಡಿದೆ. ನಾಲ್ಕು ತಂಡಗಳಾದ ಆರ್‌ಸಿಬಿ, ಗುಜರಾತ್‌, ಮುಂಬೈ ಮತ್ತು ಪಂಜಾಬ್‌ ತಂಡಗಳು ನಾಕೌಟ್‌ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಪ್ಲೇ ಆಫ್‌ ಸ್ಥಾನ ಖಚಿತಗೊಂಡರೂ ಅಗ್ರ ಎರಡು ಸ್ಥಾನಗಳ ಪೈಪೋಟಿ ಮಾತ್ರ ಇನ್ನೂ ಕೊನೆಗೊಂಡಿಲ್ಲ. ನಾಲ್ಕನೇ ಸ್ಥಾನಿಯಾಗಿರುವ ಮುಂಬೈ ತಂಡಕ್ಕೂ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ಈ ಲೆಕ್ಕಾಚಾರದ ಮಾಹಿತಿ ಹೀಗಿದೆ.

ಸದ್ಯ ಗುಜರಾತ್‌ ಟೈಟಾನ್ಸ್‌(18) ಅಗ್ರಸ್ಥಾನದಲ್ಲಿದೆ. ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ ತಲಾ 17 ಅಂಕದೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ. ಈ ಮೂರು ತಂಡಗಳಿಗಿಗೂ ಇನ್ನು ಎರಡು ಪಂದ್ಯಗಳು ಬಾಕಿ ಇದೆ. ಮುಂಬೈಗೆ ಉಳಿದಿರುವುದು ಒಂದು ಪಂದ್ಯ ಮಾತ್ರ. ಈ ಪಂದ್ಯ ಗೆದ್ದರೆ ತಂಡ 18 ಅಂಕ ಕಲೆಹಾಕಲಿದೆ. ಅಗ್ರ ಎರಡನೇ ಸ್ಥಾನ ಪಡೆಯಬೇಕಿದ್ದರೆ ಈ ಅಂಕ ಮಾತ್ರ ಸಾಕಾಗುದಿಲ್ಲ. ಇಲ್ಲಿಯೂ ಕೆಲವು ಲೆಕ್ಕಾಚಾರದ ಆಟವಿದೆ.

ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಪಂದ್ಯವನ್ನು ಗೆಲ್ಲಲೇ ಬೇಕು. ಜತೆಗೆ ಪ್ರಸ್ತುತ 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಗುಜರಾತ್ ತಂಡ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತನ್ನ ಕೊನೆಯ ಎರಡು ಪಂದ್ಯಗಳನ್ನು ಸೋಲಬೇಕು.

ಮತ್ತೊಂದೆಡೆ, 17 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಆರ್‌ಸಿಬಿ ತಂಡ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ವಿರುದ್ಧ ತನ್ನ ಉಳಿದ ಪಂದ್ಯಗಳನ್ನು ಸೋಲಬೇಕು. ಏತನ್ಮಧ್ಯೆ, 17 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್‌ಗೆ ಮುಂಬೈ ವಿರುದ್ಧ ಪಂದ್ಯವಿದೆ. ಇದರಲ್ಲಿ ಮುಂಬೈ ಗೆಲ್ಲಬೇಕು ಮತ್ತು ಪಂಜಾಬ್‌ ಡೆಲ್ಲಿ ವಿರುದ್ಧ ಸೋಲಬೇಕು. ಹೀಗಾದರೆ ಮಾತ್ರ ಮುಂಬೈಗೆ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ಆರ್‌ಸಿಬಿ ಮತ್ತು ಗುಜರಾತ್‌ ಎರಡು ಪಂದ್ಯಗಳ ಪೈಕಿ ಕನಿಷ್ಠ ಒಂದೊಂದು ಪಂದ್ಯ ಗೆದ್ದರೂ ಮುಂಬೈಗೆ ಅಗ್ರ ಎರಡು ಸ್ಥಾನ ಪಡೆಯಲು ಸಾಧ್ಯವಾಗುದಿಲ್ಲ.

Leave a Reply

Your email address will not be published. Required fields are marked *

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

ಮಂಗಳೂರು: ಅಕ್ರಮ ಆನೆದಂತಗಳ ಮಾರಾಟ; ಆರೋಪಿಗಳ ಬಂಧನ..!

ಬೆಂಗಳೂರು: ಕಾರ್ಕಳದಲ್ಲಿ ತುಳು ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ..!

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ್ಯು…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿ…!

error: Content is protected !!