ಜನ ಮನದ ನಾಡಿ ಮಿಡಿತ

Advertisement

ಬೀಡ್​: ಕಾರು ಅಪಘಾತದಿಂದ ತಪ್ಪಿಸಿಕೊಂಡವರ ಮೇಲೆ ಲಾರಿ ಡಿಕ್ಕಿ; ಸ್ಥಳದಲ್ಲೇ 6 ಮಂದಿ ಸಾವು

ಮಹಾರಾಷ್ಟ್ರದ ಬೀಡ್​ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಘಾತಕಾರಿ ವಿಷಯವೇನೆಂದರೆ ಕಾರು ಮೊದಲ ಬಾರಿಗೆ ಅಪಘಾತಕ್ಕೀಡಾಗಿತ್ತು. ಕಾರು ಡಿವೈಡರ್​ಗೆ ಡಿಕ್ಕಿಯಾಗಿ ಮಗುಚಿ ಬಿದ್ದಿತ್ತು. ಆದರೂ ಎಲ್ಲರೂ ಬದುಕುಳಿದಿದ್ದರು. ಕಾರಿನಿಂದ ಹೊರ ಬಂದ ಬಳಿಕ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಘಟನೆಯು ಇಡೀ ಬೀಡ್ ಅನ್ನು ಬೆಚ್ಚಿಬೀಳಿಸಿದೆ ಮತ್ತು ಮೃತರ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ. ಬೀಡ್ ಜಿಲ್ಲೆಯ ಮೂಲಕ ಹಾದುಹೋಗುವ ಧುಲೆ-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗರ್ಹಿ ಸೇತುವೆಯಲ್ಲಿ ಗಂಭೀರ ಅಪಘಾತ ಸಂಭವಿಸಿದೆ. ಗೆವ್ರೈ ನಗರದ ಬಳಿಯ ಗರ್ಹಿ ಸೇತುವೆಯ ಮೇಲೆ ಎಸ್ಯುವಿ ವಾಹನವೊಂದು ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದಿತ್ತು.

ಯಾರಿಗೂ ಗಾಯವಾಗಿರಲಿಲ್ಲ, ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದು ಅಲ್ಲಿ ಸಿಲುಕಿಕೊಂಡಿತು ಹೀಗಾಗಿ ಕಾರಿನಲ್ಲಿದ್ದವರು ಹೇಗೋ ಮಾಡಿ ಕಾರಿನಿಂದ ಇಳಿದು ರಸ್ತೆಗೆ ಬಂದಿದ್ದರು. ಆದರೆ ಅದೇ ಹೆದ್ದಾರಿಯಲ್ಲಿ ಹಾದುಹೋಗುತ್ತಿದ್ದ ಟ್ರಕ್ ಅತಿ ವೇಗವಾಗಿ ಬಂದು ಅಲ್ಲಿ ನಿಂತಿದ್ದ ಜನರಿಗೆ ಡಿಕ್ಕಿ ಹೊಡೆದಿದೆ, ಅವರ ದೇಹಗಳು ಛಿದ್ದ ಛಿದ್ರವಾಗಿದೆ.

ಆ ಅಪಘಾತ ಎಷ್ಟು ಭೀಕರವಾಗಿತ್ತೆಂದರೆ, ಟ್ರಕ್ ಅಡಿಯಲ್ಲಿ ಸಿಲುಕಿ ಎಲ್ಲರೂ ಸಾವನ್ನಪ್ಪಿದ್ದಾರೆ. ಮೃತರ ಹೆಸರುಗಳು ಬಾಲು ಅಟ್ಕರೆ, ಮನೋಜ್ ಕರಂಡೆ, ಕೃಷ್ಣ ಜಾಧವ್, ದೀಪಕ್ ಸರೋಯಾ, ಭಾಗವತ್ ಪರಾಲ್ಕರ್ ಮತ್ತು ಸಚಿನ್ ನಾನ್ವಾರೆ. ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದ ನಂತರ ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದ್ದು, ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಟ್ರಕ್ ಚಾಲಕನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಭರ್ಜರಿ ಡ್ರಗ್ಸ್ ಬೇಟೆ: ₹3 ಸಾವಿರ ಕೋಟಿ ಮೌಲ್ಯದ ಮಾದಕವಸ್ತು ವಶ..!

ಮಂಗಳೂರು: MRPL ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭೇಟಿ; ಪರಿಸ್ಥಿತಿ ಪರಿಶೀಲನೆ..!

ಬಂಟ್ವಾಳ: ಮಂಗಳೂರು ರೈಲು ಪ್ರದೇಶ ಮೈಸೂರು ವಿಭಾಗಕ್ಕೆ: ಪ್ರಮುಖ ನಿಲ್ದಾಣಗಳಿಗೆ ಅಧಿಕಾರಿಗಳ ಭೇಟಿ.

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಶಾಲಾ ಸಮಯ ಬದಲಾವಣೆಗೆ ಚಿಂತನೆ.

ಉಡುಪಿ: ಶಂಕರಪುರ ಮಠದಲ್ಲಿ ಅ.3, 4ರಂದು ಸಾಯಿ ಈಶ್ವರ್ ಗುರೂಜಿ ಪಂಚಾಶತ್ ಜನ್ಮ ವೈಭವ…!

ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ವಿತರಣೆ ಆರೋಪ; ಅಧಿಕಾರಿಗಳಿಂದ ವಿಚಾರಣೆ

ನವದೆಹಲಿ: ಮೋದಿ–ಟ್ರಂಪ್ ದೂರವಾಣಿ ಮಾತುಕತೆ: ವ್ಯಾಪಾರ, ರಕ್ಷಣೆ, ಇಂಧನ ಸಹಕಾರದ ಕುರಿತು ಚರ್ಚೆ

ಮಂಗಳೂರು: ಮಂಗಳೂರು ರೈಲು ಪ್ರದೇಶ ಇಂದಿನಿಂದ ಮೈಸೂರು ವಿಭಾಗದ ಅಧೀನಕ್ಕೆ…!

ದುಬೈ: ಫ್ಲೈದುಬೈ ವಿಮಾನದಲ್ಲಿ ಕಾಕ್‌ಪಿಟ್ ಘಟನೆ: ಸಹ ಪೈಲಟ್‌ನ ಯತ್ನ ತಡೆದ ಭಾರತೀಯ ಪೈಲಟ್…!

error: Content is protected !!