ಗೇಮ್ ಈಸ್ ನಾಟ್ ಓವರ್?.. ಇದು ನಿನ್ನೆ ಇರಾನ್ ಕೈಗೊಂಡಿದ್ದ ರಣಪ್ರತಿಜ್ಞೆ. ಶಕ್ತಿಶಾಲಿ ಪರಮಾಣು ನೆಲೆಗಳನ್ನು ಧ್ವಂಸ ಮಾಡಿ ಗಹಗಹಿಸಿದ್ದ ಅಮೆರಿಕಕ್ಕೆ ಸವಾಲೆಸೆದಿದ್ದ ಇರಾನ್.

ಇನ್ನೂ ಆಟ ಮುಗಿದಿಲ್ಲ, ಯಾರನ್ನೂ ಬಿಡುವ ಮಾತೇ ಇಲ್ಲ ಅಂತ ಶಪಥಗೈದಿತ್ತು. ಇವತ್ತು ಕೆಣಕಿದ ದೊಡ್ಡಣ್ಣನ ಮೇಲೆ ದಾಳಿ ಮಾಡುವ ಮೂಲಕ ಇರಾನ್ ನನಗ್ಯಾರ ಭಯವಿಲ್ಲ ಅಂತ ಎದೆಯೊಡ್ಡಿದೆ. ಇದರ ಬೆನ್ನಲ್ಲೇ ಟ್ರಂಪ್, ಇರಾನ್ ಮತ್ತು ಇಸ್ರೇಲ್ ಕದನ ವಿರಾಮ ಘೋಷಿಸಿವೆ ಎಂದು ಹೇಳಿಕೊಂಡಿದ್ದಾರೆ. ಆದರೆ ಟ್ರಂಪ್ ಹೇಳಿಕೆಯನ್ನು ಇರಾನ್ ತಿರಸ್ಕರಿಸಿದೆ. ಅಮೆರಿಕ ಏಟಿಗೆ ಇರಾನ್ ಎದುರೇಟು.. ಅಮೆರಿಕ ವಾಯುನೆಲೆಗಳ ಮೇಲೆ ತೂಫಾನ್‌ಗಳಂತೆ ತೂರಿಬಂದ ಮಿಸೈಲ್‌ಗಳು. ರಾತ್ರಿ ಆಕಾಶದಲ್ಲಿ ಬಾಂಬ್‌ಗಳ ಸುರಿಮಳೆ.. ಹೆದರಿ ಕಕ್ಕಾಬಿಕ್ಕಿಯಾಗಿ ಓಡಿದ ನಾಗರಿಕರು. ಪ್ರತೀಕಾರ ತೀರಿಸಿಕೊಳ್ಳುವ ಶಪಥ ಮಾಡಿದಂತೆ ಅಮೆರಿಕ ವಿರುದ್ಧ ಇರಾನ್ ಯುದ್ಧ ಆರಂಭಿಸಿದೆ. ಆಪರೇಷನ್ ಬಷಯೇರ್ ಅಲ್ ಫತಾಹ್ ಅಂದ್ರೆ ಟೈಡಿಂಗ್ ಆಫ್ ವಿಕ್ಟರಿ ಅನ್ನೋ ಹೆಸರಲ್ಲಿ ಇರಾನ್ ದಾಳಿ ನಡೆಸಿದೆ. ಕತಾರ್ ಕ್ಯಾಪಿಟಲ್ ದೋಹಾದಲ್ಲಿರುವ ಅಲ್ ಉದೈದ್ ಏರ್‌ಬೇಸ್ ಟಾರ್ಗೆಟ್ ಮಾಡಿದೆ. ಸೇನಾ ನೆಲೆಗಳ ಮೇಲೆ ಇರಾನ್ 6 ಖಂಡಾಂತರ ಕ್ಷಿಪಣಿಗಳ ದಾಳಿ ನಡೆಸಿದೆ. ಜನ ಪ್ರಾಣಭಯದಿಂದ ಓಡಿದ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.



