ಜನ ಮನದ ನಾಡಿ ಮಿಡಿತ

Advertisement

ಮಂಗಳೂರು: ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಸಾವು

ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಸುರತ್ಕಲ್‌ನ ಕೃಷ್ಣಾಪುರ ಹಿಲ್‌ಸೈಡ್ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ಮೃತರನ್ನು ಹಿಲ್‌ಸೈಡ್ ನಿವಾಸಿ ಅಸ್ಗರ್ ಅಲಿ ಅವರ ಪುತ್ರ 18 ವರ್ಷದ ಅಫ್ತಾಬ್ ಎಂದು ಗುರುತಿಸಲಾಗಿದೆ. ಇವರು ಸುರತ್ಕಲ್‌ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಫ್ತಾಬ್ ಮನೆಯಲ್ಲಿ ಸ್ನಾನಕ್ಕೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಅಫ್ತಾಬ್ ಅಸ್ಗರ್ ಅಲಿ ಅವರ ನಾಲ್ಕು ಮಕ್ಕಳಲ್ಲಿ ಏಕೈಕ ಪುತ್ರ. ಅವರ ಮೂವರು ಸಹೋದರಿಯರು ವಿವಾಹವಾಗಿದ್ದಾರೆ. ಅವರ ತಾಯಿ ಕೋವಿಡ್ ಸಮಯದಲ್ಲಿ ನಿಧನರಾಗಿದ್ರು. ಅಂದಿನಿಂದ ತಂದೆ ಮತ್ತು ಮಗ ಮಾತ್ರ ಒಟ್ಟಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ. ಆಟೋ ರಿಕ್ಷಾ ಚಾಲಕರಾದ ಅಲಿ, ಮಧ್ಯಾಹ್ನದವರೆಗೂ ತಮ್ಮ ಮಗನೊಂದಿಗೆ ಮನೆಯಲ್ಲಿದ್ರು. ಅವರು ಸುಮಾರು 1 ಗಂಟೆಗೆ ಕೆಲಸಕ್ಕೆ ಹೋದ ನಂತರ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

ಸುಳ್ಯ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಸುಳ್ಯ ಪೊಲೀಸರ ವಶಕ್ಕೆ…!

ಕಾಸರಗೋಡು: ಮುಗುರೋಡ್‌ನಲ್ಲಿ ಕಾರು-ಬೈಕ್ ಅಪಘಾತ: ಬೈಕ್ ಸವಾರ ಸಾವು, ಪತ್ನಿಗೆ ಗಂಭೀರ ಗಾಯ..!

ಸುಳ್ಯ: ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ: ಇಬ್ಬರು ಆರೋಪಿಗಳ ಬಂಧನ…!

ಉಡುಪಿ: ಉಡುಪಿಯಲ್ಲಿ ಅ.23ರಿಂದ ‘ನಡಿಗೆ’ ಸಾಮಾಜಿಕ ಅಭಿಯಾನ; ಬಡ ಮಕ್ಕಳಿಗೆ ಪಾದರಕ್ಷೆ ವಿತರಣೆ

ಮಂಗಳೂರು: ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಛತಾ ಶ್ರಮದಾನ

ಉಡುಪಿ: ಉಡುಪಿಯಲ್ಲಿ ಬಿಸಿಲಿನ ಝಳ ಹೆಚ್ಚಳ; ನದಿಗಳ ನೀರಿನ ಮಟ್ಟ ಕುಸಿತ, ನೀರಿನ ಕೊರತೆಯ ಆತಂಕ..!

ನವದೆಹಲಿ, ಅ.2: ಗಾಂಧಿ ಜಯಂತಿ- ರಾಜಘಾಟ್‌ನಲ್ಲಿ ಗಾಂಧೀಜಿಗೆ ಪ್ರಧಾನಿ ಮೋದಿ ಪುಷ್ಪ ನಮನ

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಭರ್ಜರಿ ಡ್ರಗ್ಸ್ ಬೇಟೆ: ₹3 ಸಾವಿರ ಕೋಟಿ ಮೌಲ್ಯದ ಮಾದಕವಸ್ತು ವಶ..!

ಮಂಗಳೂರು: MRPL ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭೇಟಿ; ಪರಿಸ್ಥಿತಿ ಪರಿಶೀಲನೆ..!

error: Content is protected !!