ಜನ ಮನದ ನಾಡಿ ಮಿಡಿತ

Advertisement

ಕಟ್ಟಡ ನಿರ್ಮಾಣ ಹಾಗೂ ಕೈಗಾರಿಕೋದ್ಯಮಕ್ಕೆ ಹೊಸ ಸಮಸ್ಯೆ ಶುರುವಾಗಿದೆ; ಡಾ.ಧನಂಜಯ ಸರ್ಜಿ

ಹೊಸ ಮನೆ ನಿರ್ಮಾಣಕ್ಕೆ ವಿದ್ಯುತ್ ಸಂಪರ್ಕದ ಓ.ಸಿ ಬಿಸಿ ತಟ್ಟುತ್ತಿದ್ದು, ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ವಿದ್ಯುತ್ ಸಂಪರ್ಕಕ್ಕೆ ನಿಯಮ ಸಡಿಲೀಕರಣಗೊಳಿಸುವಂತೆ ವಿಧಾನ ಪರಿಷತ್‌ನಲ್ಲಿ ಡಾ.ಧನಂಜಯ ಸರ್ಜಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ರಾಜ್ಯದಲ್ಲಿ ಹೊಸ ವಿದ್ಯುತ್ ಸಂಪರ್ಕಗಳಿಗೆ ಸ್ವಾಧೀನಾನುಭವ ಪತ್ರ ಕಡ್ಡಾಯಗೊಳಿಸಿರುವುದರಿಂದ, ಕಟ್ಟಡ ನಿರ್ಮಾಣ ಹಾಗೂ ಕೈಗಾರಿಕೋದ್ಯಮಕ್ಕೆ ಹೊಸ ಸಮಸ್ಯೆ ಶುರುವಾಗಿದೆ. ವಿದ್ಯುತ್ ವಿತರಣಾ ಕಂಪನಿಗಳು ವಿದ್ಯುತ್ ಸಂಪರ್ಕ ನೀಡುವುದಕ್ಕೆ ನಿರಾಕರಿಸುತ್ತಿದ್ದು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಆದೇಶವು ಕಟ್ಟಡ ಮಾಲಿಕರ ಜೊತೆಗೆ ಇಂಧನ ಇಲಾಖೆಗೂ ಸಂಕಷ್ಟ ತಂದೊಡ್ಡಿದೆ. ಓ.ಸಿ ಕಡ್ಡಾಯದಿಂದ 2ಲಕ್ಷಕ್ಕೂ ಹೆಚ್ಚು ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಸಿಗದೆ ತೊಂದರೆ ಅನುಭವಿಸುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಶೂನ್ಯ ವೇಳೆಯಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ.

Leave a Reply

Your email address will not be published. Required fields are marked *

ಬೆಂಗಳೂರು: ಗ್ರಾಮ ಪಂಚಾಯತ್‌ನಿಂದ ವಿಧಾನಸಭೆಯವರೆಗೆ AI ಕಡ್ಡಾಯ- ಯು.ಟಿ. ಖಾದರ್

ಬೆಂಗಳೂರು: ಸೇಫ್ ಫುಟ್‌ಪಾತ್ ಅಭಿಯಾನ ಯಶಸ್ಸು; ಪೀಣ್ಯದಲ್ಲಿ ರಾತ್ರಿ ಟ್ರಾಫಿಕ್ ಡೈವರ್ಷನ್…!

18 ಸೈನಿಕರ ಸಾವಿನ ಬಳಿಕ ಇರಾನ್ ವಿರುದ್ಧ ಹೊಸ ಯುದ್ಧ ತಂತ್ರಕ್ಕೆ ಮೊರೆ ಹೋದ ಟ್ರಂಪ್ ಆಡಳಿತ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಂಜುನಾಥ್ ಶೆಟ್ಟಿ ದಂಪತಿಗೆ ಸನ್ಮಾನ

ಉಡುಪಿ: ಕರಾವಳಿ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ…!

ಬಂಟ್ವಾಳ: ಮಾಣಿ ಸಮೀಪ ಜೋಗಿಬೆಟ್ಟು ರಸ್ತೆ ಕೆರೆಯಂತಾದ ದೃಶ್ಯ….!

ವಾಷಿಂಗ್ಟನ್: ಉತ್ತರ ಅಮೆರಿಕಾ ಬಂಟರ ಸಂಘದ `ದಿಬ್ಬಣ’ ಮಹಾ ಅಧಿವೇಶನ..!

ಮಂಗಳೂರು: ಮಂಗಳೂರಿನಲ್ಲಿ ಎಐ ಸಿ.ಸಿ ಕ್ಯಾಮರಾಗಳ ಅಳವಡಿಕೆ….!

ಬಂಟ್ವಾಳ: ಮಳೆ ಅನಾಹುತ: ರಾಯಿಯ ಜೀವನ್ ಪಿಂಟೋ ಮೃತದೇಹ ಪ*ತ್ತೆ…..!

error: Content is protected !!