ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ: ಬಿಸಿರೋಡು ಬಸ್ ನಿಲ್ದಾಣ ಬಳಿ ಕೇಸರು ನೀರಿನ ಸಿಂಚನ; ತಿಂಗಳು ಕಳೆದರೂ ರಸ್ತೆ ಗುಂಡಿ ಮುಚ್ಚುವ ಕಾರ್ಯ ಆಗಿಲ್ಲ!!

ಮಳೆ ನೀರು ಸರಾಗವಾಗಿ ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯ ಬಸ್ ನಿಲ್ದಾಣದಲ್ಲಿ ನೀರು ನಿಂತಿದ್ದು ಬಸ್‌ನಿಂದ ಇಳಿಯುವ ಪ್ರಯಾಣಿಕರಿಗೆ ಕೆಸರು ನೀರಿನ ಸಿಂಚನವಾಗುತ್ತಿದೆ.

ಇದರ ಜೊತೆ ರೈಲ್ವೆ ಮೇಲ್ಸೆತುವೆಯ ಮೇಲೆ ಕೂಡ ಗುಂಡಿಗಳು ಬಿದ್ದಿದ್ದು ವಾಹನಗಳು ಗುಂಡಿಗೆ ಬಿದ್ದು ಮತ್ತೆ ಎದ್ದುಕೊಂಡು ಹೋಗುವ ವೇಳೆ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಪಾದಾಚಾರಿಗಳಿಗಂತೂ ತೋಡಿನಲ್ಲಿ ನಡೆದುಕೊಂಡು ಹೋಗುವ ಪರಿಸ್ಥಿತಿ ಬಂದಿದೆ.

ಅದಲ್ಲದೆ, ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಿಸಿರೋಡು ಬಸ್ ನಿಲ್ದಾಣದ ಮುಂಭಾಗದಲ್ಲಿ ಬೃಹತ್ ಗುಂಡಿಯೊಂದು ಬಿದ್ದು ತಿಂಗಳು ಎರಡು ಕಳೆದರೂ ಗುಂಡಿ ಮುಚ್ಚುವ ಕಾರ್ಯ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ನಡೆದಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹಾಗಾಗಿ ಸಮಸ್ಯೆ ಬಗೆಹರಿಸುವ ಜವಬ್ದಾರಿ ಹೊತ್ತಿರುವ ಜನಪ್ರತಿನಿಧಿಗಳೆ ಒಮ್ಮೆ ನಮ್ಮ ಬಿಸಿರೋಡಿಗೆ ಬನ್ನಿ…ಇಲ್ಲಿನ ಚೆಂದವನ್ನು ಒಮ್ಮೆ ನೋಡಿ ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ : ಕಾಪುವಿನಲ್ಲಿ ಭೀಕರ ಅಪಘಾತ…!

ಬಂಟ್ವಾಳ : ಸಜಿಪದಲ್ಲಿ ಭೀಕರ ಅಪಘಾತ…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

error: Content is protected !!