ಸೂಪರ್ ಸ್ವ್ಕಾಡ್ ಬೋಳ ಇವರ ವತಿಯಿಂದ ಅ. 5 ರಂದು ಬೆಳ್ಳಿಗೆ 9 ಗಂಟೆಗೆ ಬೋಳ ಪಂಚಾಯತ್ ಬಳಿ ದ್ವಿತೀಯ ವರ್ಷದ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟ ನಡೆಯಲಿದೆ.

1500 ರೂಪಾಯಿ ಪ್ರವೇಶ ಶುಲ್ಕವನ್ನು ಪಾವತಿಸುವುದರ ಜೊತೆಗೆ ಪಂದ್ಯಾಕೂಟ ಕೆಲವೊಂದು ನಿಯಾಮಾವಳಿಗಳನ್ನು ಒಳಗೊಂಡಿದೆ. ಎರಡನೇ ವರ್ಷದ ವಾಲಿಬಾಲ್ ಪಂದ್ಯಾಟದ ಪ್ರಥಮ ವಿಜೇತರಿಗೆ ರೂ 22,222 ನಗದು ಹಾಗೂ ಸೂಪರ್ ಸ್ವ್ಕಾಡ್ ಟ್ರೋಫಿ, ದ್ವಿತೀಯ ತಂಡದ ವಿಜೇತರಿಗೆ ರೂ 13333 ನಗದು ಹಾಗೂ ಸೂಪರ್ ಸ್ವ್ಕಾಡ್ ಟ್ರೋಫಿ, ತೃತೀಯ ತಂಡದ ವಿಜೇತರಿಗೆ ರೂ 5555 ನಗದು ಹಾಗೂ ಸೂಪರ್ ಸ್ವ್ಕಾಡ್ ಟ್ರೋಫಿಯನ್ನು ನೀಡಲಾಗುತ್ತದೆ. ಅದರ ಜೊತೆಗೆ ಉತ್ತಮ ಅಟ್ಯಾಕರ್, ಉತ್ತಮ ಆಲ್ ರೌಂಡರ್, ಉತ್ತಮ ಪಾಸರ್ ಹಾಗೂ ಉತ್ತಮ ಲಿಬೆರೋ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇನ್ನು ಈ ಜಿದ್ದಾಜಿದ್ದಿನ ವಾಲಿಬಾಲ್ ಪಂದ್ಯಾಟದ ದೃಶ್ಯಾವಳಿಗಳು ನಿಮ್ಮ ನೆಚ್ಚಿನ ಅಭಿಮತ ಯೂಟ್ಯೂಬ್ ಚಾನಲ್‌ನಲ್ಲಿ ನೇರಪ್ರಸಾರಗೊಳ್ಳಲಿದೆ.



