ಜನ ಮನದ ನಾಡಿ ಮಿಡಿತ

Advertisement

ಆಳ್ವಾಸ್ ಪತ್ರಿಕೋದ್ಯಮ ವಿಭಾಗದಲ್ಲಿ ಪೋಷಕ- ಶಿಕ್ಷಕರ ಸಭೆ; ವೃತ್ತಿ ಬದುಕಿನಲ್ಲಿ ಸ್ವಚ್ಛ ಮನಸ್ಸು ಮುಖ್ಯ: ಕುರಿಯನ್

ವಿದ್ಯಾಗಿರಿ: ‘ಮಾಧ್ಯಮದಲ್ಲಿ ವೃತಿ ಬದುಕು ಕಂಡುಕೊಳ್ಳುವವರಿಗೆ ಸ್ವಚ್ಛ ಮನಸ್ಸು ಮುಖ್ಯ’ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು.

ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಶಿಕ್ಷಕ- ರಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಪತ್ರಿಕೋದ್ಯಮದ ಪಾತ್ರ ಬಹುಮುಖ್ಯ. ನಿರ್ಮಲ ಮನಸ್ಸಿನಿಂದ ಸಮಾಜದ ಸ್ವಾಸ್ಥ್ಯತೆ ಕಾಪಾಡುವ ಜವಾಬ್ದಾರಿಯನ್ನು ಪತ್ರಕರ್ತ ಹೊಂದಿರಬೇಕು. ಪತ್ರಕರ್ತನ ಕರ್ತವ್ಯದಲ್ಲಿ ಒಳಿತು- ಕೆಡುಕುಗಳೆರಡೂ ಅಡಕವಾಗಿದೆ ಎಂದರು. ವಿದ್ಯಾರ್ಥಿ ಮೇಲೆ ಶಿಕ್ಷಕರು ತೋರಿಸುವ ವಿಶ್ವಾಸವು, ಆ ವಿದ್ಯಾರ್ಥಿ ನಂಬಿಕೆಯನ್ನು ಸೂಚಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ವಿಶ್ವಾಸಾರ್ಹತೆ ಗಳಿಸುವುದು ಮುಖ್ಯ ಎಂದರು. ಆಳ್ವಾಸ್ ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಆಳ್ವಾಸ್ ಎಂದರೆ ವಿದ್ಯಾಸಾಗರ. ಇಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶವೂ ಅಧಿಕ. ತಮ್ಮ ಮನೆಯ ಮಕ್ಕಳು ಆಳ್ವಾಸ್‌ನಲ್ಲಿ ಕಲಿಯಬೇಕು ಎಂಬ ಹಂಬಲ ಹಲವರದ್ದು ಎಂದರು. ಪತ್ರಿಕೋದ್ಯಮ ವಿಭಾಗ ಹಾಗೂ ವಿದ್ಯಾರ್ಥಿಗಳ ಕಾರ್ಯನಿರ್ವಹಿಸುವ ರೀತಿ ನಿಜಕ್ಕೂ ಪ್ರಶಂಸಾರ್ಹ. ಮಕ್ಕಳನ್ನು ಉತ್ತಮ ವಿದ್ಯಾಸಂಸ್ಥೆಗೆ ಕಳುಹಿಸಿದ ಪೋಷಕರಾದ ನೀವೆಲ್ಲರೂ ಧನ್ಯರು ಎಂದರು.

Leave a Reply

Your email address will not be published. Required fields are marked *

ಮಂಗಳೂರು: ಕ್ರೀಡಾಪಟು ಎಂ.ಆರ್. ಪೂವಮ್ಮಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ

ಮಂಗಳೂರು: 2026ನೇ ಸಾಲಿನ ಕಾರಂತ ಪ್ರಶಸ್ತಿಗೆ ಹಿರಿಯ ಸಾಹಿತಿ ವೈದೇಹಿ ಆಯ್ಕೆ..!

ಕಡಬ: ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಸಾವು

ಮಂಗಳೂರು: ಕರ್ನಾಟಕದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ಹೆಚ್ಚಿಸಿ: ಎಂ.ಆರ್. ಪೂವಮ್ಮ ಆಗ್ರಹ

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ತಿರುವನಂತಪುರಂ: ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಸುಪಾರಿ ಆರೋಪ: ಮಹಿಳೆ ಸೇರಿ ಐವರ ಬಂಧನ

ಉಡುಪಿ: ಕೊಲ್ಲೂರಿನಲ್ಲಿ ದನವನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಪ್ರಕರಣ: ಪ್ರಮುಖ ಆರೋಪಿ ಬಂಧನ

ಸುಳ್ಯ: ಸುಳ್ಯದಲ್ಲಿ ಅ.5ರಂದು ಗಾಂಧಿ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ

error: Content is protected !!