ಜನ ಮನದ ನಾಡಿ ಮಿಡಿತ

Advertisement

ಉಳ್ಳಾಲ: ರಿಯಲ್ ಎಸ್ಟೇಟ್ ಉದ್ಯಮಿ ರಘುರಾಮ ಶೆಟ್ಟಿ ಹೃದಯಾಘಾತಕ್ಕೆ ಬಲಿ….!

ಕೃಷಿಕರು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಸೋಮೇಶ್ವರ ಗ್ರಾಮದ ಪಿಲಾರು ದೇಲಂತ ಬೆಟ್ಟು ನಿವಾಸಿ ರಘುರಾಮ ಶೆಟ್ಟಿಯವರು ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ಹಠತ್ತನೆ ಸಾವನ್ನಪ್ಪಿದ್ದಾರೆ.

ಲವಲವಿಕೆಯಿಂದಲೇ ಪುತ್ರನನ್ನ ಶಾಲೆಗೆ ಬಿಟ್ಟು ಬಂದು, ತೋಟದ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ರಘುರಾಮ್ ಅವರು ದಣಿದ ಕಾರಣ ಮನೆಯೊಳಗೆ ನಿದ್ದೆಗೆ ಜಾರಿದ್ರು, ಮನೆಗೆ ಬಂದಿದ್ದ ಸಹೋದರಿಯು ರಘುರಾಮ್ ಅವರನ್ನ ಎಬ್ಬಿಸಲು ಹೋದಾಗ ಅವರ ದೇಹವು ಪ್ರತಿಕ್ರಿಯಿಸದಿದ್ದಾಗ ವೈದ್ಯರನ್ನ ಕರೆಸಿ ಪರಿಶೀಲಿಸಿದ್ದು, ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿರೋದಾಗಿ ಖಚಿತ ಪಡಿಸಿದ್ದಾರೆ. ರಘುರಾಮ್ ಶೆಟ್ಟಿಯವರ ಬಾವ ಚಂದ್ರಹಾಸ್ ಶೆಟ್ಟಿ ಅವರು ಶಬರಿ ಮಲೆ ಯಾತ್ರೆಗೆ ತೆರಳಿದ್ದ ವೇಳೆ ಎರಿಮಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ಮಾರನೇ ದಿನ ಚಂದ್ರಹಾಸ್ ಅವರ ಪಾರ್ಥಿವ ಶರೀರವನ್ನ ತಂದು ಅಂತ್ಯಕ್ರಿಯೆ ನಡೆಸಲಾಗಿತ್ತು. ಇದೀಗ ಚಂದ್ರಹಾಸ್ ಅವರ ಬಾಮೈದ ರಘುರಾಮ್ ಅವರು ಅಕಾಲಿಕವಾಗಿ ಸಾವನ್ನಪ್ಪಿದ್ದು, ಪಿಲಾರು ದೇಲಂತ ಬೆಟ್ಟುವಿನ ಮನೆಯಲ್ಲಿ ವಾರದಂತರದಲ್ಲೇ ಎರಡು ಸಾವು ಸಂಭವಿಸಿದ್ದು ಕುಟುಂಬಸ್ಥರನ್ನ ದು:ಖದ ಕಡಲಲ್ಲಿ ಮುಳುಗಿಸಿದೆ.

Leave a Reply

Your email address will not be published. Required fields are marked *

ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..!

ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ…!

ವಿ ಡಿ ಸತೀಶನ್ ಅವರನ್ನು ಕಾಸರಗೋಡಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು…!

ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ…!

ಬಂಟ್ವಾಳ: ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ (65) ಹೃದಯಾಘಾತದಿಂದ ನಿಧನ!

ಮಂಗಳೂರು: ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ!

ಮಂಗಳೂರು: ಪಚ್ಚನಾಡಿ ರೈಲ್ವೇ ಹಳಿಯಲ್ಲಿ ಯುವಕನ ಮೃ*ತದೇಹ ಪತ್ತೆ; ಸಂಶಯಾಸ್ಪದ ಸಾ*ವು..!

ಬಂಟ್ವಾಳ: ಪಾಣೆಮಂಗಳೂರು ಸಮೀಪ ನೇತ್ರಾವತಿ ನದಿಯಲ್ಲಿ ಮೃ*ತದೇಹ ಪ*ತ್ತೆ….!

ಮಂಗಳೂರು: ಸಂಹಿತೆಗಳ ಜಾರಿಯಿಂದ ಯೂನಿಯನ್ ಮುಕ್ತ ಭಾರತವಾಗುವ ಅಪಾಯವಿದೆ- ಫಣೀಂದ್ರ ಕೆ ಎಚ್ಚರ!

error: Content is protected !!