ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನವೆಂಬರ್ 26ರಂದು ಬೀಸಿದ ಗಾಳಿ ಹಾಗೂ ಸುರಿದ ಮಳೆಯಿಂದ ಮನೆಗಳಿಗೆ ಹಾನಿಯಾಗಿದ್ದು, ಮತ್ತೊಂದೆಡೆ ಕೊಟ್ಟಿಗೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಭಾಗಶಃ ಹಾನಿಯಾಗಿದೆ.

ಕಾಡೇಶ್ವಾಲ್ಯ ಗ್ರಾಮದ ದೊಡ್ಡಜೆ ಎಂಬಲ್ಲಿ ಗಾಳಿಯ ರಭಸಕ್ಕೆ ಮರ ಬಿದ್ದು ವಾರಿಜಾ ಕೋಂ. ಬಾಬು ಪೂಜಾರಿ ಅವರ ಮನೆಗೆ ಹಾನಿಯಾಗಿದೆ. ಕರಿಯಂಗಳ ಗ್ರಾಮದ ಕಲ್ಕುಟದಲ್ಲಿ ಮಹೇಶ್ ಅವರಿಗೆ ಸೇರಿದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಭಾಗಶಃ ಹಾನಿಯಾಗಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇನ್ನು ನವೆಂಬರ್ 26ರಂದು ಸುರಿದ ಮಳೆಯಿಂದ ತೆಂಕಬೆಳ್ಳೂರು ಗ್ರಾಮದ ಯೋಗೀಶ್ ಆಚಾರಿ ಅವರ ಮನೆಯ ಚಾವಣಿಗೆ ಹಾನಿಯಾಗಿದೆ. ಮೂರು ಪ್ರತ್ಯೇಕ ಘಟನೆಗಳಿಂದ ಸಂತ್ರಸ್ತರಿಗೆ ನಷ್ಟ ಉಂಟಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಹಾನಿಯ ಪ್ರಮಾಣ ಅಂದಾಜಿಸುವ ನಿರೀಕ್ಷೆಯಿದೆ.



