ಜನ ಮನದ ನಾಡಿ ಮಿಡಿತ

Advertisement

ಯುವತಿಯರನ್ನು ನಂಬಿಸಿ ಕೈಕೊಟ್ಟ ಭೂಪನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ…!

ಮಂಗಳೂರು

ಮುಂಬೈ, ಉಡುಪಿ, ಬೆಂಗಳೂರು, ಕಾರ್ಕಳದಲ್ಲಿ ಯುವತಿಯರನ್ನು ನಂಬಿಸಿ ಕೈಕೊಟ್ಟ ಭೂಪನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

ಮ್ಯಾಟ್ರಿಮನಿ ಸೈಟ್‌ನಲ್ಲಿ ನಂಬಿಸಿ ಉಂಡೂ ಹೋದ ಕೊಂಡೂ ಹೋದ ಕುಖ್ಯಾತಿ ಕಾವೂರ ಈ ಪೋರನದ್ದಾಗಿದೆ.

ಕಾವೂರು ಮೂಲದ ನಿವಾಸಿ ಯುವಕ ಮ್ಯಾಟ್ರಿಮನಿ ಸೈಟ್ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಮದುವೆಯಾಗುತ್ತೇನೆಂದು ನಂಬಿಸಿ ಮುಂಬೈ, ಉಡುಪಿ ಹೀಗೆ ಹಲವೆಡೆ ಯುವತಿಯರನ್ನು ಮದುವೆಯಾಗಿ ಅವರಿಂದ ಹಣ ಪಡೆದು ವಂಚಿಸಿದ್ದ, ಇನ್ನೂ ಹಲವು ಯುವತಿಯರನ್ನು ಮದುವೆಯಾಗುವ ಭರವಸೆ ನೀಡಿ ಹಣ ಪಡೆದು ಮೋಸಗೈಯುತ್ತಿದ್ದ. ಅಂತಿಮವಾಗಿ ಆತ ಕಾವೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸುಶಾಂತ್ ಪೂಜಾರಿ ಅಲಿಯಾಸ್ ಸುಶಾಂತ್ ಅಂಕುಶ್ ಪೂಜಾರಿ, ಸುಶಾಂತ್ ಜಿ. ಕರ್ಕೇರಾ ಎಂದು ಕರೆಸಿಕೊಳ್ಳುತ್ತಿದ್ದ ಈ ಯುವಕನ ವಂಚನಾ ಪ್ರಕರಣಗಳು ಈಗ ಒಂದೊಂದಾಗಿ ಹೊರಬರುತ್ತಿವೆ. ಈತನನ್ನು ಮತ್ತು ಈತನಿಗೆ ಮುಂಬೈಯಲ್ಲಿ ಮದುವೆಯಾಗಲು ಸಹಕರಿಸಿದ್ದ ಮುಲ್ಕಿ ನಿವಾಸಿ ಭಾಸ್ಕರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈ ಮೂಲದ ಮಹಿಳೆಗೆ ಸುಶಾಂತ್ ಪೂಜಾರಿ ಮ್ಯಾಟ್ರಿಮೊನಿ ಸೈಟ್ ಮೂಲಕ ಪರಿಚಯವಾಗಿದ್ದು ನವ ಮುಂಬೈ ನಲ್ಲಿ 2025ರ ಫೆ.2ರಂದು ಆಕೆಯನ್ನು ಮದುವೆಯಾಗಿದ್ದ. ಆನಂತರ, ಹಂತ ಹಂತವಾಗಿ 6,60,000 ರೂ. ಹಣವನ್ನು ಪಡೆದು ಕಳೆದ ನವೆಂಬರ್ 15ರಂದು ನಾಪತ್ತೆಯಾಗಿದ್ದ. ನಂತರದ ದಿನಗಳಲ್ಲಿ ಮಹಿಳೆ ಅನುಮಾನಗೊಂಡು ಆತನ ಬಗ್ಗೆ ವಿಚಾರಿಸಿದಾಗ ಇದೇ ರೀತಿ ಹಲವಾರು ಕಡೆ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ಯುವತಿಯರನ್ನು ಮೋಸ ಮಾಡಿರುವ ವಿಷಯ ತಿಳಿದುಬಂತು. ಅಲ್ಲದೆ, ಈತನಿಗೆ ಈ ಮೊದಲು ಒಂದು ಮದುವೆ ಆಗಿರುವ ವಿಚಾರವೂ ತಿಳಿದ ಮೇರೆಗೆ ನೊಂದ ಮುಂಬೈ ಮೂಲದ ಮಹಿಳೆ ಪೊಲೀಸ್ ದೂರು ದಾಖಲಿಸಿದ್ದರು. ರೋಪಿ ಸುಶಾಂತ್ ಪೂಜಾರಿಯನ್ನು ಫೆ.05ರಂದು ಪತ್ತೆಹಚ್ಚಿ ದಸ್ತಗಿರಿ ಮಾಡಲಾಗಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಸಂಚರಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆ*ಂಕಿ…!

ಬಂಟ್ವಾಳ: ಹಗ್ಗ ಕಡಿದು ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು ಪಾರು….!

ಕಡೇಶಿವಾಲಯ: ನೆತ್ತರ ಬಾಬು ಪೂಜಾರಿಯವರ ಮನೆಗೆ ಸಿಡಿಲು ಬಡಿದು ಹಾನಿ….!

ಬಂಟ್ವಾಳ: ಸಿಡಿಲು ಬಡಿದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ ಅರೆಬೆಟ್ಟು..!

ಬಂಟ್ವಾಳ: ಕರಾವಳಿಯ ಕಾರಣೀಕ ದೈವ ಕೊರಗಜ್ಜನಿಗೆ ಕೋಲ ಸೇವೆ ಸಲ್ಲಿಸಿದ ಖ್ಯಾತ ಚಲನಚಿತ್ರ ನಟಿಯಾಗಿರುವ ರಚಿತರಾಮ್..!

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಹತೋಬಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಬಡಿದ ಸಿಡಿಲು..!

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಕೆಲ ಮನೆಗಳಿಗೆ ಸಿಡಿಲು ಬಡಿದು ಹಾನಿ..!

ಹಾಸನ: ಸಿಡಿಲು ಬಡಿದು ಆಂಜನೇಯ ಸ್ವಾಮಿ ದೇವಾಲಯದ ಅರ್ಚಕ ಮೃತ್ಯು..!

ಮಂಗಳೂರು : ಶ್ರೀ ಭದ್ರಕಾಳಿ ಚೆಂಡೆ ತಂಡದ ಮಾಲೀಕ ಹೃ*ದಯಾಘಾ*ತದಿಂದ ಮೃ*ತ್ಯು..!

error: Content is protected !!