ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ: ಹತ್ತಾರು ವಾಹನಗಳು ಸಂಚಾರ ಮಾಡುವ ಹೆದ್ದಾರಿಯ ಬದಿಯಲ್ಲಿ ಬೀಳುವ ರೀತಿಯಲ್ಲಿ ಪ್ಲೆಕ್ಸ್ ಅಳವಡಿಕೆ….!

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಬಿಸಿರೋಡು ರೈಲ್ವೆ ಮೇಲ್ಸೇತುವೆಯ ಪಕ್ಕ ಹಾಕಲಾಗಿದ್ದ ಪ್ಲೆಕ್ಸ್ ಹೆದ್ದಾರಿಯ ಮಧ್ಯ ಭಾಗಕ್ಕೆ ಬಿದ್ದಿದೆ.

ಕಳೆದ ವಾರ ಇದೇ ರೀತಿ ಸರ್ಕಲ್ ಬಳಿಯಲ್ಲಿ ಹಾಕಲಾಗಿದ್ದ ಪ್ಲೆಕ್ಸ್ಗಳು ಹೆದ್ದಾರಿ ಮೇಲೆ ಬಿದ್ದ ಬಗ್ಗೆ ವರದಿ ಮಾಡಲಾಗಿತ್ತು. ಸೆಕೆಂಡ್‌ಗೆ ಹತ್ತಾರು ವಾಹನಗಳು ಸಂಚಾರ ಮಾಡುವ ಹೆದ್ದಾರಿಯ ಬದಿಯಲ್ಲಿ ಬೀಳುವ ರೀತಿಯಲ್ಲಿ ಪ್ಲೆಕ್ಸ್ ಅಳವಡಿಕೆಗೆ ಪುರಸಭೆ ಅನಧಿಕೃತವಾಗಿ ಅವಕಾಶ ನೀಡಿರುವುದು ಮುಂದೊಂದು ದಿನ ಅನಾಹುತಗಳು ನಡೆಯುವುದಕ್ಕೆ ಕಾರಣವಾಗಬಹುದು. ಅನಧಿಕೃತ ಪ್ಲೆಕ್ಸ್ ಅಳವಡಿಕೆಗೆ ಅವಕಾಶ ನೀಡಬಾರದು ಮತ್ತು ಪ್ಲೆಕ್ಸ್ ಬಿದ್ದು ಅನಾಹುತಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು ಕೂಡ ಯಾವುದೇ ಸ್ಪಂದನೆ ಪುರಸಭೆಯಿಂದ ಸಿಕ್ಕಿದಂತೆ ಕಂಡು ಬಂದಿಲ್ಲ. ರಸ್ತೆ ಬದಿಯಲ್ಲಿ ರಾಜರೋಷವಾಗಿ ಬ್ಯಾನರ್‌ಗಳು, ಪ್ಲೆಕ್ಸ್ಗಳು ತಲೆಎತ್ತಿ ನಿಂತಿವೆ. ಜೊತೆಗೆ ದಿನವೊಂದಕ್ಕೆ ಪ್ಲೆಕ್ಸ್ಗಳು ಕೆಳಗೆ ಬೀಳುತ್ತಲೇ ಇವೆ. ಆದರೆ ಕಣ್ಣಿದ್ದು ಕುರುಡನಂತೆ ಆಗಿರುವ ಪುರಸಭೆಯ ಕಿವಿ ಹಿಂಡುವವರು ಯಾರು ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ತಿರುವನಂತಪುರಂ: ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಸುಪಾರಿ ಆರೋಪ: ಮಹಿಳೆ ಸೇರಿ ಐವರ ಬಂಧನ

ಉಡುಪಿ: ಕೊಲ್ಲೂರಿನಲ್ಲಿ ದನವನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಪ್ರಕರಣ: ಪ್ರಮುಖ ಆರೋಪಿ ಬಂಧನ

ಸುಳ್ಯ: ಸುಳ್ಯದಲ್ಲಿ ಅ.5ರಂದು ಗಾಂಧಿ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ

ಮಂಗಳೂರು: ರಾಜಾಜಿ ಉದ್ಯಾನವನದಲ್ಲಿ ಗಾಂಧಿ ಜಯಂತಿ ಆಚರಣೆ

ಸುಳ್ಯ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಸುಳ್ಯ ಪೊಲೀಸರ ವಶಕ್ಕೆ…!

ಕಾಸರಗೋಡು: ಮುಗುರೋಡ್‌ನಲ್ಲಿ ಕಾರು-ಬೈಕ್ ಅಪಘಾತ: ಬೈಕ್ ಸವಾರ ಸಾವು, ಪತ್ನಿಗೆ ಗಂಭೀರ ಗಾಯ..!

ಸುಳ್ಯ: ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ: ಇಬ್ಬರು ಆರೋಪಿಗಳ ಬಂಧನ…!

error: Content is protected !!