ಪುತ್ತೂರು: ಎರಡು ವಾರಗಳ ಹಿಂದೆ ಚೆಂಬು ಗ್ರಾಮದ ಕುದುರೆಪಾಯದಲ್ಲಿ ಸಹೋದರರಿಂದ ಹತ್ಯೆಗೀಡಾದ ಉಸ್ಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿಯನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ.

ಸುಳ್ಯ ಕಾಲೇಜು ಸಮೀಪದ ನಿವಾಸಿ ಮುಬಾರಕ್ (37) ಬೆಂಗಳೂರಿನಲ್ಲಿ ಬೇಕರಿ ನಡೆಸುತಿದ್ದ. ಕರೋನಾ ಅವಧಿಯ ನಂತರ, ಬೇಕರಿ ಮುಚ್ಚಿ ಊರಿಗೆ ಬಂದು ನೆಲೆಸಿದ್ದ ಇವರಲ್ಲಿ ಬ್ರೆಡ್ ಹಾಗೂಮತ್ತಿತ್ತರ ವಸ್ತುಗಳನ್ನು ಕತ್ತರಿಸುವ ಚೂಪಾದ ಕತ್ತಿಯಿತ್ತು ಮತ್ತು ಕೊಲೆಯ ಹಿಂದಿನ ದಿನವೇ ಮುಬಾರಕ್ ತನ್ನ ಚಿಕ್ಕಪ್ಪ ಮತ್ತು ದೊಡ್ಡಪ್ಪನಿಗೆ ಚಾಕು ನೀಡಿದ್ದ ಎನ್ನಲಾಗಿದೆ.
ಉಸ್ಮಾನ್‌ರನ್ನು ಕೊಲೆಗೈಯ್ಯಲು ಆತನ ಸಹೋದರಾದ ರಫೀಕ್ ಮತ್ತು ಸತ್ತಾರ್ ಬಳಸಿ ಚೂರಿಯನ್ನು ಮುಬಾರಕ್ ಒದಗಿಸಿದ್ದನೆಂದು ಪೊಲೀಸರು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.
ಕೊಲೆ ಪ್ರಕರಣದ ತನಿಖಾಧಿಕಾರಿ ಮಡಿಕೇರಿ ಸರ್ಕಲ್ ಇನ್ಸ್ ಪೆಕ್ಟರ್ ಉಮೇಶ್ ಉಪ್ಪಳಿಕೆ ಅವರು ಜೂ.27ರಂದು ಸುಳ್ಯದಲ್ಲಿ ದಾಳಿ ನಡೆಸಿ ಮುಬಾರಕ್ ನನ್ನು ಬಂಧಿಸಿದ್ದರು. ಆರೋಪಿಯನ್ನು ನಿನ್ನೆ ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ.



