ಇಲಿಯನ್ನು ಹಿಡಿಯಲು ಹೋಗಿ ಹಾವೊಂದು ಕಾರಿನಲ್ಲಿ ಸಿಲುಕಿಕೊಂಡ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ನಗರದ ನಿವಾಸಿಯೊಬ್ಬರ ಕಾರಿನಲ್ಲಿ ಈ ಘಟನೆ ನಡೆದಿದ್ದು, ಅವರು ಕಾರನ್ನು ಮನೆಯ ಶೆಡ್‌ನಲ್ಲಿ ಇಟ್ಟಿದ್ದರು.

ಹಾವೊಂದು ಇಲಿಯನ್ನು ಹಿಡಿಯಲು ಕಾರಿನ ಅಡಿಭಾಗಕ್ಕೆ ನುಗ್ಗಿದೆ. ಕಾರಿನ ಅಡಿ ಭಾಗದಲ್ಲಿರುವ ರಂಧ್ರವೊ0ದರ ಒಳಗೆ ನುಗ್ಗಿ ಇಲಿಯನ್ನು ಹಿಡಿದ ಹಾವಿಗೆ ಮತ್ತೆ ರಂಧ್ರದಿ0ದ ಹೊರಬರಲು ಸಾಧ್ಯವಾಗಿಲ್ಲ. ಈ ವಿಚಾರವನ್ನು ತಿಳಿಯದ ಕಾರಿನ ಮಾಲಕರು ಕಾರನ್ನು ಪುತ್ತೂರು ಪೇಟೆಗೆ ತಂದಿದ್ದಾರೆ. ಈ ಸಂದರ್ಭಸ್ಥಳೀಯರೊಬ್ಬರು ಕಾರಿನ ಅಡಿಭಾಗದಲ್ಲಿ ಹಾವೊಂದು ಇರುವುದನ್ನು ಗಮನಿಸಿದ್ದಾರೆ. ಆ ಬಳಿಕ ಸಾರ್ವಜನಿಕರು ಸೇರಿ ಹಾವನ್ನು ಹಿಡಿದು ಹೊರಗೆ ಎಳೆಯುವ ಪ್ರಯತ್ನ ಮಾಡಿದರೂ, ಹಾವು ಮಾತ್ರ ಹೊರಗೆ ಬರಲಾರದ ಸ್ಥಿತಿಯಲ್ಲಿತ್ತು.



