ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಮಳೆಗಾಲ ಆರಂಭವಾಗುತ್ತಿದ್ದಂತೆ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ ಹಲವು ಗ್ರಾಮಗಳ ಸಂಪರ್ಕದ ಕೊಂಡಿ ಕಳಚಿ ಬಿದ್ದು, ಜನರು ದ್ವೀಪದಂತೆ, ಹಳ್ಳಿಯೊಳಗೆ ಕುಳಿತುಕೊಳ್ಳಬೇಕಾದ ಸ್ಥಿತಿಯೊಂದು ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಎಂಬಲ್ಲಿ ನಡೆದಿದೆ.

ಹಲವು ಗ್ರಾಮಗಳನ್ನು ಸಂಪರ್ಕಿಸುತ್ತಿದ್ದ ತಾರಬಳಿ ಸಂಪರ್ಕ ಸೇತುವೆ ಕುಸಿತ ಕಂಡ ಕಾರಣದಿಂದ, ನಿತ್ಯ ಇದನ್ನೇ ನಂಬಿ ಸಂಚರಿಸುತ್ತಿದ್ದ ನೂರಾರು ಜನರು ದಿಕ್ಕು ತೋಚದಂತಾಗಿ ಕಂಗಲಾಗಿದ್ದಾರೆ. ತಾರಬಳಿ ಸೇತುವೆ ಕುಸಿತದ ಬಳಿಕ ಇದೀಗ ಕಿರಲೆ, ಭಟ್ಟಾಜೆ, ಸೊರ್ನಾಡು, ಎರ್ಮಲಪದವು, ಕುರಿಯಾಳ, ಬಾಳಿಕೆ, ಬಂಡಸಾಲೆ ಸೇತುವೆಯ ಒಂದು ಕಡೆಯಾದರೆ, ಕೊಳತ್ತಮಜಲು, ಬಡಗಬೆಳ್ಳೂರು, ಪೊಳಲಿ ಮತ್ತೊಂದು ಕಡೆ. ಈ ಎರಡೂ ಕಡೆಯ ಸಂಪರ್ಕಕ್ಕೆ ತಾರಬಳಿ ಸೇತುವೆಯೇ ಆಧಾರ.

ಆದರೆ, ಗ್ರಾಮೀಣ ಜನರ ನಿತ್ಯ ಓಡಾಟದ ಕೊಂಡಿ ಇಲ್ಲಿ ಕೈ ತಪ್ಪಿದೆ. ಬಂಟ್ವಾಳ ತಾಲೂಕು ಬಡಗ ಬೆಳ್ಳೂರು ಗ್ರಾಮದ ಭಟ್ಟಾಜೆ ಎಂಬಲ್ಲಿನ ತಾರಬಳಿ ಸೇತುವೆ ಕಳೆದ ಕೆಲವು ತಿಂಗಳಿನಿಂದ ಅಪಾಯಕಾರಿಯ ಕರೆ ಘಂಟೆ ಬಾರಿಸಿ, ಸಂಬಂಧಿಸಿವರ ಗಮನ ಸೆಳೆದಿತ್ತು. ಹೀಗಾಗಿ ಸೇತುವೆಯ ಮೂಲಕ ಘನವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಕೇವಲ ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಸಂಚಾರ ನಿಯಂತ್ರಣಕ್ಕಾಗಿ ಪಂಚಾಯತ್ ವತಿಯಿಂದ ಎರಡೂ ರಸ್ತೆಯ ಕಡೆಯಲ್ಲಿ ಕಲ್ಲಿನ ಗೋಡೆ ಕಟ್ಟಿ ಘನ ವಾಹನಗಳಿಗೆ ನಿಯಂತ್ರಣ ಹೇರಲಾಗಿತ್ತು. ದಿನಕಳೆದಂತೆ ಸೇತುವೆ ಮತ್ತಷ್ಟು ಅಪಾಯಕಾರಿಯಾಗಿ ಬದಲಾಗುತ್ತಿರುವುದು ಕಂಡ ಸ್ಥಳೀಯರು ಜೀವ ಬಲಿಯಾಗುವ ಮುನ್ನ ಸೇತುವೆ ತೆರವು ಮಾಡುವಂತೆ ಒತ್ತಾಯ ಮಾಡಿದ್ದಾರೆ.

Leave a Reply

Your email address will not be published. Required fields are marked *

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಂಜುನಾಥ್ ಶೆಟ್ಟಿ ದಂಪತಿಗೆ ಸನ್ಮಾನ

ಉಡುಪಿ: ಕರಾವಳಿ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ…!

ಬಂಟ್ವಾಳ: ಮಾಣಿ ಸಮೀಪ ಜೋಗಿಬೆಟ್ಟು ರಸ್ತೆ ಕೆರೆಯಂತಾದ ದೃಶ್ಯ….!

ವಾಷಿಂಗ್ಟನ್: ಉತ್ತರ ಅಮೆರಿಕಾ ಬಂಟರ ಸಂಘದ `ದಿಬ್ಬಣ’ ಮಹಾ ಅಧಿವೇಶನ..!

ಮಂಗಳೂರು: ಮಂಗಳೂರಿನಲ್ಲಿ ಎಐ ಸಿ.ಸಿ ಕ್ಯಾಮರಾಗಳ ಅಳವಡಿಕೆ….!

ಬಂಟ್ವಾಳ: ಮಳೆ ಅನಾಹುತ: ರಾಯಿಯ ಜೀವನ್ ಪಿಂಟೋ ಮೃತದೇಹ ಪ*ತ್ತೆ…..!

ಬಂಟ್ವಾಳದಲ್ಲಿ ಮಳೆ ಅವಾಂತರ; ಮರ ಬಿದ್ದು ಸ್ಥಳೀಯರ ಪರದಾಟ

ಶ್ರೀಲಂಕಾ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾಗೆ ಆಕಿಬ್ ನಬಿ ಎಂಟ್ರಿ

ಬಿಹಾರದ ಸಹರ್ಸಾದಲ್ಲಿ ರೈಲು ಅಗ್ನಿ ಅವಘಡ; ತಪ್ಪಿದ ಭಾರೀ ಅನಾಹುತ

error: Content is protected !!