ಜನ ಮನದ ನಾಡಿ ಮಿಡಿತ

Advertisement

ಮಂಗಳೂರು: ಜೂ.28ರಂದು ಪುರಭವನದಲ್ಲಿ ನಡೆಯಲಿದೆ ವಿಧಾತ್ರಿ ಸಂಭ್ರಮ-2026′ ಕಾರ್ಯಕ್ರಮ….!

ಕಳೆದ 17 ವರ್ಷಗಳಿಂದ ತುಳು ರಂಗಭೂಮಿಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ವಿಧಾತ್ರಿ ಕಲಾವಿದೆರ್ ಕುಡ್ಲ ಸಂಸ್ಥೆಯ ವತಿಯಿಂದ ವಿಧಾತ್ರಿ ಸಂಭ್ರಮ-2026′ ಕಾರ್ಯಕ್ರಮವನ್ನು ಜೂನ್ 28ರಂದು ಸಂಜೆ 4.30ಕ್ಕೆ ಮಂಗಳೂರು ನಗರದ ಪುರಭವನ ನಲ್ಲಿ ಚಿದಾನಂದ ಅದ್ಯಪಾಡಿ ಸಾರಥ್ಯದಲ್ಲಿ , ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ಭರತ್ ಎಸ್ ಕರ್ಕೇರ ರಚನೆಯ ತುಳು ಮತ್ತು ಕನ್ನಡ ಭಾಷೆಯಲ್ಲಿ ರಚನೆಯಾದ ಜೈ ಹನುಮಾನ್ ನಾಟಕ ಪ್ರದರ್ಶನ ನಡೆಯಲಿದೆ.

ತುಳು ರಂಗಭೂಮಿ ಕಲಾವಿದ ಚಿದಾನಂದ ಅಡ್ಯಪಾಡಿ ಈ ಕುರಿತು ಮಾಹಿತಿ ನೀಡಿ, ವಿಧಾತ್ರಿ ಕಲಾವಿದೇರ್ ಕುಡ್ಲ ತಂಡವು ಕಳೆದ 17 ವರ್ಷಗಳಿಂದ ತುಳುನಾಡಿನಲ್ಲಷ್ಟೇ ಅಲ್ಲದೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಹಾಗೂ ಮುಂಬೈ ಸೇರಿದಂತೆ ವಿವಿಧೆಡೆಗಳಲ್ಲಿ ನಾಟಕ ಪ್ರದರ್ಶನಗಳನ್ನು ನೀಡಿ ಜನಮನ್ನಣೆ ಗಳಿಸಿದೆ ಎಂದು ತಿಳಿಸಿದ್ದಾರೆ. ಐತಿಹಾಸಿಕ, ಜಾನಪದ ಹಾಗೂ ಹಾಸ್ಯಮಯ ನಾಟಕಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ತಂಡವು ಈ ಬಾರಿ ವಿಶೇಷ ವೆಚ್ಚದಲ್ಲಿ ಅದ್ಧೂರಿ ರಂಗ ವಿನ್ಯಾಸ ಹಾಗೂ ಸಿನಿಮೀಯ ಮಾದರಿಯ ನಿರೂಪಣೆಯೊಂದಿಗೆ ‘ಜೈ ಹನುಮಾನ್’ ಎಂಬ ನಾಟಕವನ್ನು ಪ್ರದರ್ಶಿಸಲಿದೆ ಎಂದು ಹೇಳಿದ್ದಾರೆ. ತುಳುನಾಡಿನ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೊಸ ಬದಲಾವಣೆಯ ಹರಿಕಾರರೆಂದು ಗುರುತಿಸಿಕೊಂಡಿರುವ ಕಲಾ ಸಂಘಟಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ನಿರ್ದೇಶನದಲ್ಲಿ ನಾಟಕ ಮೂಡಿಬಂದಿದ್ದು, ಈಗಾಗಲೇ ಪ್ರೇಕ್ಷಕರಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ ಎಂದಿದ್ದಾರೆ. ಕಾರ್ಯಕ್ರಮದ ಅಂಗವಾಗಿ ‘ವಿಧಾತ್ರಿ ಸಂಭ್ರಮ-2026’ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಲಿದೆ. ತುಳುನಾಡಿನ ಕಲಾಭಿಮಾನಿಗಳು, ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ನಾಟಕಕ್ಕೆ ಉಚಿತ ಪ್ರವೇಶವಿದ್ದು, ತುಳುನಾಡಿನ ವಿವಿಧ ಸಂಘ-ಸAಸ್ಥೆಗಳು ಹಾಗೂ ನಾಟಕಾಸಕ್ತರು ಆಗಮಿಸಿ ನಾಟಕವನ್ನು ವೀಕ್ಷಿಸಿ ಸಹಕರಿಸುವಂತೆ ಆಯೋಜಕರು ಕೋರಿದ್ದಾರೆ.

Leave a Reply

Your email address will not be published. Required fields are marked *

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಭರ್ಜರಿ ಡ್ರಗ್ಸ್ ಬೇಟೆ: ₹3 ಸಾವಿರ ಕೋಟಿ ಮೌಲ್ಯದ ಮಾದಕವಸ್ತು ವಶ..!

ಮಂಗಳೂರು: MRPL ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭೇಟಿ; ಪರಿಸ್ಥಿತಿ ಪರಿಶೀಲನೆ..!

ಬಂಟ್ವಾಳ: ಮಂಗಳೂರು ರೈಲು ಪ್ರದೇಶ ಮೈಸೂರು ವಿಭಾಗಕ್ಕೆ: ಪ್ರಮುಖ ನಿಲ್ದಾಣಗಳಿಗೆ ಅಧಿಕಾರಿಗಳ ಭೇಟಿ.

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಶಾಲಾ ಸಮಯ ಬದಲಾವಣೆಗೆ ಚಿಂತನೆ.

ಉಡುಪಿ: ಶಂಕರಪುರ ಮಠದಲ್ಲಿ ಅ.3, 4ರಂದು ಸಾಯಿ ಈಶ್ವರ್ ಗುರೂಜಿ ಪಂಚಾಶತ್ ಜನ್ಮ ವೈಭವ…!

ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ವಿತರಣೆ ಆರೋಪ; ಅಧಿಕಾರಿಗಳಿಂದ ವಿಚಾರಣೆ

ನವದೆಹಲಿ: ಮೋದಿ–ಟ್ರಂಪ್ ದೂರವಾಣಿ ಮಾತುಕತೆ: ವ್ಯಾಪಾರ, ರಕ್ಷಣೆ, ಇಂಧನ ಸಹಕಾರದ ಕುರಿತು ಚರ್ಚೆ

ಮಂಗಳೂರು: ಮಂಗಳೂರು ರೈಲು ಪ್ರದೇಶ ಇಂದಿನಿಂದ ಮೈಸೂರು ವಿಭಾಗದ ಅಧೀನಕ್ಕೆ…!

ದುಬೈ: ಫ್ಲೈದುಬೈ ವಿಮಾನದಲ್ಲಿ ಕಾಕ್‌ಪಿಟ್ ಘಟನೆ: ಸಹ ಪೈಲಟ್‌ನ ಯತ್ನ ತಡೆದ ಭಾರತೀಯ ಪೈಲಟ್…!

error: Content is protected !!