ಜನ ಮನದ ನಾಡಿ ಮಿಡಿತ

Advertisement

ಡಾ| ದೇವುದಾಸ್ ಕಾಪಿಕಾಡ್ ರಚಿಸಿ ನಿರ್ದೇಶಿಸುವ “ಸುಣ್ಣದ ಬೊಟ್ಟು” ನಾಟಕದ ಅಧ್ಧೂರಿ ಮುಹೂರ್ತ..!

ಕಳೆದ 30 ದಶಕಗಳಿಂದ ತುಳುರಂಗಭೂಮಿಯಲ್ಲಿ ತನ್ನದೆ ಚಾಪು ಮೂಡಿಸಿತ್ತಿರುವ ಮಂಗಳೂರಿನ ಖ್ಯಾತ ಚಾಪರ್ಕ ತಂಡದ 61ನೇ ನಾಟಕದ ಮೂಹೂರ್ತ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ನಡೆಯಿತು.

ಕಳೆದ 30 ದಶಕಗಳಿಂದ ಜನರಿಗೆ ಹಾಸ್ಯದೊಂದಿಗೆ ಸಾಮಾಜಿಕ ಕಳಕಳಿಯ ನಾಟಗಳನ್ನು ನಿರಂತರವಾಗಿ ನೀಡಿದ ಕೀರ್ತಿ ಚಾ ಪರ್ಕ ತಂಡದ ರೂವಾರಿ ತೆಲಿಕೆದ ಬೊಳ್ಳಿ ಡಾ| ದೇವುದಾಸ್ ಕಾಪಿಕಾಡ್ ರವರಿಗೆ ಸಲ್ಲುತ್ತದೆ. ಈ ಬಾರಿಯೂ ವಿಭಿನ್ನ ಕಥಾಹಂದರವನ್ನು ಹೊಂದಿರುವ ನೂತನ ನಾಟಕ “ಸುಣ್ಣದ ಬೊಟ್ಟು” ಮೂಲಕ ಕಲಾಪ್ರೇಕ್ಷಕರಿಗೆ ರಸದೌತಣ ನೀಡಲು ತಯಾರಿಯಲ್ಲಿದ್ದಾರೆ.

 

ಶ್ರೀಮತಿ ಶರ್ಮಿಳಾ ಕಾಪಿಕಾಡ್ ನಿರ್ಮಾಣದಲ್ಲಿ ಡಾ| ದೇವುದಾಸ್ ಕಾಪಿಕಾಡ್ ರಚಿಸಿ ನಿರ್ದೇಶಿಸುವ “ಸುಣ್ಣದ ಬೊಟ್ಟು” ನಾಟಕದ ಸಂಗೀತದ ಹೊಣೆಯನ್ನು ಗುರು ಬಾಯಾರ್ ಹೊರಲಿದ್ದಾರೆ. ಇನ್ನು ಕಲಾವಿದರಾಗಿ ಸಾಯಿ ಕೃಷ್ಣ, ಸದಾಶಿವ ಅಮೀನ್, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಪಾಂಡುರಂಗ ಅಡ್ಯಾರ್, ಪ್ರಕಾಶ್ ಶೆಟ್ಟಿ ಧರ್ಮನಗರ, ಪ್ರವೀಣ್ ಬಿ.ಸಿ ರೋಡ್ ಸಾಯಿ ಚೇತನ್, ತಿಲಕ್ ರಾಜ್ ಕೊಯಿಲಾ, ನಿತಿನ್ ಹೊಸಂಗಡಿ, ಸಚ್ಚಿನ್ ಅರ್ಕುಳ, ಸುಜಾತ ಶಕ್ತಿನಗರ, ಚೈತ್ರ ಕಲ್ಲಡ್ಕ, ಹರ್ಷಿಣಿ ಪೂಜಾರಿ ಅಭಿನಯಿಸಲಿದ್ದಾರೆ. ತಾಂತ್ರಿಕ ವರ್ಗದಲ್ಲಿ ರಾಜೇಶ್ ಮಂಜೇಶ್ವರ, ರಮಾನಂದ ಸಜಿಪ, ಶ್ರವಣ್ ಬಿ.ಸಿ ರೋಡ್, ಪ್ರಸನ್ನ ಬೋಳಾರ್, ಅಶಿಕ್ ಉಡುಪಿ ಕಾರ್ಯ ನಿರ್ವಹಿಸಲಿದ್ದಾರೆ. ಮಂಗಳೂರಿನ ಪುರಭವನದಲ್ಲಿ ಸೆಪ್ಟೆಂಬರ್‌ನಲ್ಲಿ ಅದ್ದೂರಿ ಪ್ರದರ್ಶನದೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಚಾ ಪರ್ಕ ತಂಡದ “ಸುಣ್ಣದ ಬೊಟ್ಟು” ರೆಡಿಯಾಗಲಿದೆ.

Leave a Reply

Your email address will not be published. Required fields are marked *

ಮಂಗಳೂರು: ಕ್ರೀಡಾಪಟು ಎಂ.ಆರ್. ಪೂವಮ್ಮಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ

ಮಂಗಳೂರು: 2026ನೇ ಸಾಲಿನ ಕಾರಂತ ಪ್ರಶಸ್ತಿಗೆ ಹಿರಿಯ ಸಾಹಿತಿ ವೈದೇಹಿ ಆಯ್ಕೆ..!

ಕಡಬ: ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಸಾವು

ಮಂಗಳೂರು: ಕರ್ನಾಟಕದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ಹೆಚ್ಚಿಸಿ: ಎಂ.ಆರ್. ಪೂವಮ್ಮ ಆಗ್ರಹ

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ತಿರುವನಂತಪುರಂ: ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಸುಪಾರಿ ಆರೋಪ: ಮಹಿಳೆ ಸೇರಿ ಐವರ ಬಂಧನ

ಉಡುಪಿ: ಕೊಲ್ಲೂರಿನಲ್ಲಿ ದನವನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಪ್ರಕರಣ: ಪ್ರಮುಖ ಆರೋಪಿ ಬಂಧನ

ಸುಳ್ಯ: ಸುಳ್ಯದಲ್ಲಿ ಅ.5ರಂದು ಗಾಂಧಿ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ

error: Content is protected !!