ಚಿತ್ರದುರ್ಗ ಕೋಟೆ ವೀಕ್ಷಣೆಗೆ ತೆರಳಿದ್ದ ಪ್ರವಾಸಿಗನ ಮೇಲೆ ಮುಶ್ಯಾ ದಾಳಿ ಮಾಡಿದೆ.

ಪ್ರವಾಸಿಗನ ತಲೆಗೆ ಕಪ್ಪು ಮುಶ್ಯಾ ಬಲವಾಗಿ ಕಚ್ಚಿದ್ದರಿಂದ ಆತ ಗಾಯಗೊಂಡಿದ್ದಾನೆ. ಚಿತ್ರದುರ್ಗದ ಏಳು ಸುತ್ತಿನ ಕೋಟೆಯ ಉಯ್ಯಾಲೆ ಕಂಬದ ಬಳಿ ಈ ಘಟನೆ ನಡೆದಿದೆ. ಚಿತ್ರದುರ್ಗ ತಾಲೂಕಿನ ಸಿದ್ಧಾಪುರದ ಕಾರ್ತಿಕ್ ಗಾಯಗೊಂಡ ವ್ಯಕ್ತಿ. ಪ್ರವಾಸಿ ಮಿತ್ರ ತಂಡದಿಂದ ಗಾಯಾಳು ಕಾರ್ತಿಕನನ್ನು ರಕ್ಷಣೆ ಮಾಡಲಾಗಿದ್ದು, ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.



