ಬಂಟ್ವಾಳ ಪರಿಸರದಾದ್ಯಂತ ಸೋಮವಾರ ಬೆಳಗ್ಗೆ ಗಾಳಿ ಮಳೆಯಾಗಿದ್ದು, ಬಿ.ಮೂಡ ಗ್ರಾಮದ ಪೆಲತ್ತಿಮಾರ್ ಅರ್ಕಮೆ ಎಂಬಲ್ಲಿ ಕುಲಾಲ್ ಭವನ ಸಹಿತ ಕೆಲವು ಮನೆಗಳನ್ನು ಸಂಪರ್ಕಿಸುವ ರಸ್ತೆಗೆ ವಿದ್ಯುತ್ ತಂತಿ ಸಮೇತ ಮರ ಉರುಳಿಬಿದ್ದಿದೆ.

ಸ್ಥಳಕ್ಕೆ ಕಂದಾಯ, ಮೆಸ್ಕಾಂ ಸಹಿತ ನಾನಾ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿ.ಮೂಡ ಗ್ರಾಮದ ಪೆಲತ್ತಿಮಾರು ಅರ್ಕಮೆಯ ಈ ಭಾಗದಲ್ಲಿ ಘಟನೆಯಿಂದ ಸ್ಥಳೀಯರು ನಡೆದುಕೊಂಡು ಹೋಗಲೂ ಪರದಾಡುವಂಥ ಸ್ಥಿತಿ ತಲೆದೋರಿದೆ. ಬೆಳಗ್ಗೆಯಿಂದ ಮಳೆಯಾಗುತ್ತಿದ್ದು, ನದಿ ನೀರಿನ ಮಟ್ಟದಲ್ಲೂ ಏರಿಳಿತವಾಗುತ್ತಿದೆ.



