ಜನ ಮನದ ನಾಡಿ ಮಿಡಿತ

Advertisement

ಉಡುಪಿ: ಮಾದಕ ದ್ರವ್ಯ ಪ್ರಕರಣ: ಉಡುಪಿಯಲ್ಲಿ ಆರೋಪಿಯ ಬಂಧನ

ಮಾದಕ ದ್ರವ್ಯಗಳ ಸಾಗಾಟ ಮತ್ತು ಮಾರಾಟ ಚಟುವಟಿಕೆಗಳಲ್ಲಿ ಪದೇಪದೇ ತೊಡಗಿಸಿಕೊಂಡ ಆರೋಪದ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗಬೆಟ್ಟು ಕೊಳಂಬೆ ಮಿಷನ್ ಕಂಪೌಂಡ್ ನಿವಾಸಿ ಇಕ್ಬಾಲ್ ಅಲಿಯಾಸ್ ಇಕ್ಬಾಲ್ ಶೇಖ್ ಎಂಬಾತನನ್ನು ಪೊಲೀಸರು ಪಿಐಟಿ-ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿ ಆಧರಿಸಿ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರು ಆ.13ರಂದು ಬಂಧನ ಆದೇಶ ಹೊರಡಿಸಿದ್ದರು. ಈ ಆದೇಶದಂತೆ ಪೊಲೀಸರು ಇಕ್ಬಾಲ್‌ನನ್ನು ಬಂಧಿಸಿದ್ದಾರೆ.

ಆರೋಪಿಯ ವಿರುದ್ಧ ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಮೂರು ಹಾಗೂ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎರಡು ಸೇರಿದಂತೆ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳು ಸದ್ಯ ನ್ಯಾಯಾಲಯದ ವಿಚಾರಣೆಯಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದಂತೆ ಮಣಿಪಾಲ ಹಾಗೂ ಉಡುಪಿ ನಗರ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದ್ದು, ಎರಡೂ ಪ್ರಕರಣಗಳಲ್ಲಿ ಆರೋಪಿಗೆ ಶಿಕ್ಷೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಕಪ್ಪೆಟ್ಟುವಿನಲ್ಲಿ ಅಂಬೇಡ್ಕರ್ ಕಲಾಕೃತಿ, ಪುರಾತನ ಸಂಸತ್ ಭವನದ ಮಾದರಿ

ಉಡುಪಿ: ಉಡುಪಿಯಲ್ಲಿ ಆ.15ರಂದು ‘ಆಟಿಡೊಂಜಿ ವಿಪ್ರಕೂಟ’ ಸಾಂಸ್ಕೃತಿಕ ಹಬ್ಬ..!

ಬಂಟ್ವಾಳ: ವಿದ್ಯುತ್ ತುರಿಮಣೆಯಲ್ಲಿ ಸಿಲುಕಿದ ಸಿಬ್ಬಂದಿ; ಸಮಯಪ್ರಜ್ಞೆ ಮೆರೆದ 5ನೇ ತರಗತಿ ವಿದ್ಯಾರ್ಥಿ

ಪುತ್ತೂರು: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಫಿಲೋ ಆಟಿದ ಕೂಟ’ ಸಂಭ್ರಮ

ಮಂಗಳೂರು: ಮಂಗಳೂರಿನ ಶೆಟ್ಟಿ ಟ್ರೇಡರ್ಸ್ ಮಾಲಕ ಧರ್ಮೇಂದ್ರ ಶೆಟ್ಟಿ ನಿಧನ

ಬಂಟ್ವಾಳ: ಯಕ್ಷಸಿರಿ ಪ್ರಶಸ್ತಿಗೆ ದುರ್ಗಾಪರಮೇಶ್ವರಿ ಕುಕ್ಕಿಲ ಆಯ್ಕೆ

ಬಂಟ್ವಾಳ: ಬಿಸಿಯೂಟ ಸಿಬ್ಬಂದಿಯ ಕೈ ತುರಿಮಣೆಯಲ್ಲಿ ಸಿಲುಕಿ ಅವಘಡ; ಸಮಯಪ್ರಜ್ಞೆ ಮೆರೆದ 5ನೇ ತರಗತಿ ಬಾಲಕ

ಮಂಗಳೂರು: ಕೆಪಿಟಿ ಸಿಗ್ನಲ್ ಬಳಿ ಭಾರೀ ಗುಂಡಿ; ಅಪಾಯದಂಚಿನಲ್ಲಿ ವಾಹನ ಸವಾರರು

ಬಂಟ್ವಾಳ: ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ವಿಶೇಷ ತೀರ್ಥಸ್ನಾನ

error: Content is protected !!