ಜನ ಮನದ ನಾಡಿ ಮಿಡಿತ

Advertisement

ಉಡುಪಿ: 25 ಗಂಟೆಗಳ ನಿರಂತರ ದಾಸರಪದ ಗಾಯನಕ್ಕೆ ಸಂಗೀತ ಬಾಲಚಂದ್ರ ಸಜ್ಜು

ಸಂಗೀತ ಕ್ಷೇತ್ರದಲ್ಲಿ 25 ವರ್ಷಗಳ ಪಯಣ ಪೂರ್ಣಗೊಳಿಸಿರುವ ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದೆ ಹಾಗೂ ಚಲನಚಿತ್ರ ಹಿನ್ನೆಲೆ ಗಾಯಕಿ ಸಂಗೀತ ಬಾಲಚಂದ್ರ ಅವರು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸಾಧನೆಗಾಗಿ 25 ಗಂಟೆಗಳ ಕಾಲ ನಿರಂತರವಾಗಿ ದಾಸರಪದಗಳನ್ನು ಹಾಡುವ ಐತಿಹಾಸಿಕ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಪಂಚವಿಂಶತಿ’ ಹೆಸರಿನ ಈ ಕಾರ್ಯಕ್ರಮವು ಭೀಮಾ ಜ್ಯುವೆಲ್ಲರ್ಸ್ ಪ್ರಾಯೋಜಕತ್ವದಲ್ಲಿ ಆ.23ರಂದು ಬೆಳಿಗ್ಗೆ 6.30ಕ್ಕೆ ಉಡುಪಿಯ ಶ್ರೀಕೃಷ್ಣ ಮಠದ ಸಮೀಪದ ಗೀತಾ ಮಂದಿರದ ಶ್ರೀ ಪುತ್ತಿಗೆ ನೃಸಿಂಹ ಸಭಾಂಗಣದಲ್ಲಿ ಆರಂಭವಾಗಲಿದೆ. ಆ.24ರಂದು ಬೆಳಿಗ್ಗೆ 7.30ಕ್ಕೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.

ಒಟ್ಟು 25 ಗಂಟೆಗಳ ಕಾಲ ನಡೆಯಲಿರುವ ಗಾಯನದಲ್ಲಿ ಹೊಸದಾಗಿ ಸ್ವರಸಂಯೋಜನೆ ಮಾಡಲಾದ 250 ದಾಸರಪದಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಕೀಬೋರ್ಡ್, ರಿದಮ್ ಪ್ಯಾಡ್, ಕೊಳಲು ಹಾಗೂ ತಬಲಾ ವಾದಕರನ್ನೊಳಗೊಂಡ ಎರಡು ತಂಡಗಳು ನಿರಂತರ ಲೈವ್ ಸಂಗೀತ ಸಾಥ್ ನೀಡಲಿವೆ.

ಮಹಿಳಾ ಗಾಯಕಿಯೊಬ್ಬರು ದಾಸರಪದಗಳನ್ನು ಆಯ್ಕೆ ಮಾಡಿಕೊಂಡು 25 ಗಂಟೆಗಳ ಕಾಲ ನಿರಂತರ ಗಾಯನ ನಡೆಸುತ್ತಿರುವುದು ರಾಜ್ಯದಲ್ಲೇ ಅಪರೂಪದ ಹಾಗೂ ಮೊದಲ ಪ್ರಯತ್ನ ಎಂದು ಸಂಗೀತ ಬಾಲಚಂದ್ರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Get started with WrBet Kenya: essential registration tips for new players

Claim your rewards at CCTV Rush Hour: Understanding promo offers and player advantages

ಮಧ್ಯ ಆಫ್ರಿಕಾ : ಗಣರಾಜ್ಯದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಚಿನ್ನದ ಗಣಿ ಕುಸಿದು ಸುಮಾರು ೧೦೦ ಮಂದಿ ಮೃ*ತ್ಯು…!

Jak zainstalować Mostbet APK na Androidzie krok po kroku?

Лучшие слоты в Pin-Up Casino: где найти самые высокие выплаты?

Обзор 1win казино: Тренды в разработке игр и предпочтениях игроков

Топовые игры на Pin-Up Casino: от слотов до живых столов

Создание устойчивых инвестиционных портфелей с 1вин: Подробный обзор онлайн-казино

Регуляторные стандарты, регулирующие деятельность Pinco Casino Зеркало

error: Content is protected !!