ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಶೀರೂರು ಮಠದ ವತಿಯಿಂದ ನಡೆಯಲಿರುವ ವಿಟ್ಲಪಿಂಡಿ ಉತ್ಸವದ ಅಂಗವಾಗಿ ಮೊಸರುಕುಡಿಕೆ ಕಂಬದ ಮುಹೂರ್ತ ನೆರವೇರಿಸಲಾಯಿತು.

ಕೃಷ್ಣಮಠದ ಕನಕ ಗೋಪುರದ ಬಳಿ ಮೊಸರುಕುಡಿಕೆ ಕಂಬದ ಮುಹೂರ್ತ ನೆರವೇರಿದ್ದು, ಈ ಮೂಲಕ ವಿಟ್ಲಪಿಂಡಿ ಉತ್ಸವದ ಸಿದ್ಧತೆಗಳಿಗೆ ಚಾಲನೆ ದೊರೆತಿದೆ.
ಈ ಸಂದರ್ಭದಲ್ಲಿ ಮಠದ ಪಾರುಪತ್ಯೆಗಾರ ಶ್ರೀಶ ಭಟ್ ಕಡೇಕಾರು ಹಾಗೂ ಕೃಷ್ಣಮಠದ ಕೊಟ್ಟಾರಿಗಳಾದ ರಾಮ ಕೊಡಂಚ ಉಪಸ್ಥಿತರಿದ್ದರು.



