ಪ್ರಧಾನಿ ನರೇಂದ್ರ ಮೋದಿಯವರ 25ನೇ ವರ್ಷದ ಆಡಳಿತದ ಅಂಗವಾಗಿ ದೇಶಾದ್ಯಂತ ನಡೆಯುತ್ತಿರುವ ‘ಸೇವಾ ಮೇರಾ ಯೋಗದಾನ್’ ಸೇವಾ ಕಾರ್ಯಕ್ರಮದ ಪ್ರಯುಕ್ತ ಬಿಜೆಪಿ ದ.ಕ. ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಪುತ್ತೂರು ದರ್ಬೆಯ ಬೀರಮಲೆಯಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ಭೇಟಿ ನೀಡಲಾಯಿತು.

ಈ ಸಂದರ್ಭದಲ್ಲಿ ಆಶ್ರಮದಲ್ಲಿರುವ ದಿವ್ಯಾಂಗ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಟಿ.ಎ. ಶಾನವಾಜ್, ಪ್ರಧಾನ ಕಾರ್ಯದರ್ಶಿ ಫೆಡ್ರಿಕ್ ಪೌಲ್, ಪುತ್ತೂರು ಬಿಜೆಪಿ ಮಾಧ್ಯಮ ವಕ್ತಾರ ರಾಜೇಶ್ ಬನ್ನೂರು, ಉಪಾಧ್ಯಕ್ಷರಾದ ಮೊಹಮ್ಮದ್ ಅಜ್ಗರ್ ಮುಡಿಪು, ಮೊಹಮ್ಮದ್ ರಫೀಕ್ ದರ್ಬೆ ಹಾಗೂ ಮಾಜಿ ಉಪಾಧ್ಯಕ್ಷ ರಜಾಕ್ ಕೆ.ಜಿ.ಎನ್. ಉಪಸ್ಥಿತರಿದ್ದರು.



