ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಸಂಸ್ಥೆಯ ಮುಖ್ಯಸ್ಥರಾಗಿದ್ದ ದಿವಂಗತ ಸರಾಫ್ ಮುಳಿಯ ಶ್ಯಾಮ್ ಭಟ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಹಾಗೂ ಭಾವಪೂರ್ಣ ನಾದ-ನುಡಿ ನಮನ ಕಾರ್ಯಕ್ರಮ ‘ಸಾರ್ಥಕ’ ಪಾಂಗಳಾಯಿಯ ಶ್ಯಾಮಲೋಚನದಲ್ಲಿ ನಡೆಯಿತು.

ದಿವಂಗತ ಶ್ಯಾಮ್ ಭಟ್ ಅವರ ಪುತ್ರರಾದ ಕೇಶವ ಪ್ರಸಾದ್ ಮುಳಿಯ, ಕೃಷ್ಣ ನಾರಾಯಣ ಮುಳಿಯ, ಸೊಸೆಯರಾದ ಕೃಷ್ಣವೇಣಿ ಮುಳಿಯ, ಅಶ್ವಿನಿ ಕೃಷ್ಣ ಮುಳಿಯ, ಪುತ್ರಿ ಡಾ. ವಿದ್ಯಾ ಸರಸ್ವತಿ ಹಾಗೂ ಅಳಿಯ ಡಾ. ಶ್ಯಾಮಸುಂದರ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪುತ್ತೂರಿನ ವಿವಿಧ ಕ್ಷೇತ್ರಗಳ ಸುಮಾರು 36 ಗಣ್ಯರು ನುಡಿನಮನ ಸಲ್ಲಿಸಿ, ದಿವಂಗತ ಶ್ಯಾಮ್ ಭಟ್ ಅವರು ಉದ್ಯಮ, ಸಾಮಾಜಿಕ ಸೇವೆ, ಶಿಕ್ಷಣ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿದರು. ಅವರ ವ್ಯಕ್ತಿತ್ವ, ಸೇವಾ ಮನೋಭಾವ ಮತ್ತು ಸಮಾಜದೊಂದಿಗಿನ ಒಡನಾಟವನ್ನು ನೆನಪಿಸಿಕೊಂಡು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.



