ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ: ಬಂಟ್ವಾಳ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ರಮೇಶ್ ನಾಯ್ಕ್ ಮೆಲ್ಕಾರ್ ಆಯ್ಕೆ…!

ಚುಟುಕು ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ರಮೇಶ್ ನಾಯ್ಕ್ ಮೆಲ್ಕಾರ್ ಅವರನ್ನು ನೇಮಕ ಮಾಡಲಾಗಿದೆ.

ಚುಟುಕು ಸಾಹಿತ್ಯದ ಬೆಳವಣಿಗೆ, ಸಾಹಿತ್ಯಾಸಕ್ತರನ್ನು ಒಗ್ಗೂಡಿಸುವುದು ಹಾಗೂ ಯುವ ಮತ್ತು ಹಿರಿಯ ಸಾಹಿತಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಚುಟುಕು ಸಾಹಿತ್ಯ ಪರಿಷತ್ ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಘಟಕಗಳನ್ನು ಹೊಂದಿದ್ದು, ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಚುಟುಕು ಸಾಹಿತ್ಯದ ಕುರಿತು ಅರಿವು ಮೂಡಿಸುವುದು ಹಾಗೂ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಪರಿಷತ್‌ನ ಪ್ರಮುಖ ಉದ್ದೇಶವಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಘಟಕಗಳ ಮೂಲಕ ನಿರಂತರ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿದೆ. ಈ ಹಿಂದೆ ಆನಂದ ರೈ ಅಡ್ಕಸ್ಥಳ ಅವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಂಟ್ವಾಳ ತಾಲೂಕು ಘಟಕವನ್ನು ವಿಸರ್ಜಿಸಿ ನೂತನ ಸಮಿತಿ ರಚಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಹಾಗೂ ಗೌರವಾಧ್ಯಕ್ಷ ಇರಾನೇಮು ಪೂಜಾರಿ ಅವರ ಶಿಫಾರಸಿನ ಮೇರೆಗೆ ರಾಜ್ಯ ಪ್ರಧಾನ ಸಂಚಾಲಕ ಡಾ. ಎಂ.ಜಿ.ಆರ್. ಅರಸ್ ಅವರು ರಮೇಶ್ ನಾಯ್ಕ್ ಮೆಲ್ಕಾರ್ ಅವರನ್ನು ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.

Leave a Reply

Your email address will not be published. Required fields are marked *

ಬಂಟ್ವಾಳ: ಬಂಟ್ವಾಳದಲ್ಲಿ ಹೆಬ್ಬಾವಿನ ಆತಂಕ: ಬೆಕ್ಕನ್ನು ಹಿಡಿದು ಪೊದೆಯೊಳಗೆ ಎಳೆದೊಯ್ದ ಬೃಹತ್ ಹೆಬ್ಬಾವು?

ಮುಂಬೈ: ಟೈಗರ್ ಶ್ರಾಫ್‌ಗೂ ಮುನ್ನ ಆಮಿರ್, ಸಲ್ಮಾನ್ ಖಾನ್ ನಿವಾಸಗಳ ಮೇಲೆ ನಿಗಾ?

ಬಂಟ್ವಾಳ: ಕಿಟಕಿಗೆ ಕಟ್ಟಿದ್ದ ಹಗ್ಗ ಕುತ್ತಿಗೆಗೆ ಸಿಲುಕಿ 9 ವರ್ಷದ ಬಾಲಕ ಸಾವು…!

ಉಡುಪಿ: ಎಸ್ಐಆರ್ ವಿರುದ್ಧ ಬ್ರಹ್ಮಾವರದಲ್ಲಿ ಕಾಂಗ್ರೆಸ್ ಪ್ರತಿಭಟನೆ; ಪ್ರತಿಕೃತಿ ದಹಿಸಿ ಆಕ್ರೋಶ

ಪುತ್ತೂರು: ಜಿಲ್ಲಾ ಮಟ್ಟದ ಈಜು ಸ್ಪರ್ಧೆ: ಸಿಯಾ ಸುಧೀರ್‌ಗೆ ಕಂಚಿನ ಪದಕ

ಉಡುಪಿ: ಗಾಜಿನ ಬ್ಲಾಕ್ ಇಳಿಸುವ ವೇಳೆ ಅವಘಡ: ಸಾಮಾಜಿಕ ಕಾರ್ಯಕರ್ತ ಸುನಿಲ್ ಬೈಲಕೆರೆ ಸಾವು

ಪುತ್ತೂರು: ದಿ. ಸರಾಫ್ ಮುಳಿಯ ಶ್ಯಾಮ್ ಭಟ್ ಅವರಿಗೆ ‘ಸಾರ್ಥಕ’ ನಾದ-ನುಡಿ ನಮನ

ಉಡುಪಿ: ಕೆರೆಯಲ್ಲಿ ಮುಳುಗಿ 7ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಸಾವು…!

ಉಡುಪಿ: ಶಾನಾಡಿ ಕೊರಗ ಕಾಲೋನಿಯಲ್ಲಿ ದುರಂತ: ಮಗಳನ್ನು ಕೊಂದು ತಾಯಿ ಆತ್ಮಹತ್ಯೆ…!

error: Content is protected !!